More

    ತಾನೇ ತೋಡಿದ ಗುಂಡಿಗೆ ಬಿದ್ದ ಮಹಾರಾಷ್ಟ್ರ ಸರ್ಕಾರ; ಮಹಾ ಪುಂಡರ ವಿರುದ್ಧ ಎಂ.ಬಿ ಪಾಟೀಲ್​ ವಾಗ್ದಾಳಿ

    ವಿಜಯಪುರ: ಮಹಾರಾಷ್ಟ್ರ ಗಡಿ ಅಧ್ಯಾಯ ಅಂತಿಮಗೊಂಡಿದ್ದರೂ ಅನವಶ್ಯಕವಾಗಿ, ತಮ್ಮ ರಾಜಕೀಯ ವಿಷಯಗಳನ್ನು ಮರೆಮಾಚಲು ಕ್ಯಾತೆ ತೆಗೆಯಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ವಾಗ್ದಾಳಿ ನಡೆಸಿದರು.

    ಮಹಾರಾಷ್ಟ್ರಕ್ಕೆ ತನ್ನ ಅಸ್ತ್ರವೇ ತಿರುಗುಬಾಣವಾಗಿದೆ. ಸೋಲಾಪುರದಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಅಕ್ಕಲಕೋಟೆ ಹಾಗೂ ಜತ್ತ ತಾಲೂಕಿನಲ್ಲಿ ಕನ್ನಡಿಗರಿದ್ದಾರೆ. ಈ ಎಲ್ಲ ಕನ್ನಡಿಗರು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕೆಂದು ಹೋರಾಟ ಆರಂಭಿಸಿದ್ದು, ಇದೀಗ ಮಹಾರಾಷ್ಟ್ರಕ್ಕೆ ತನ್ನ ಅಸ್ತ್ರವೇ ಮುಳ್ಳಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಈಗಾಗಲೇ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಹಾರಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಠರಾವು ಮಂಡಿಸಿದ್ದಾರೆ. ಮಾತ್ರವಲ್ಲ, ಕನ್ನಡ ಭುವನೇಶ್ವರಿ ಫೋಟೋ ಮೆರವಣಿಗೆ ನಡೆಸಿದ್ದಾರೆ. ಇದಕ್ಕೆಲ್ಲ ಕಾರಣ ಮಹಾರಾಷ್ಟ್ರದ ನಿರ್ಲಕ್ಷ್ಯ. ಗಡಿಭಾಗದ ಹಳ್ಳಿಗಳು ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತಗೊಂಡಿವೆ. ಈ ಹಳ್ಳಿಗಳು ಮಹಾರಾಷ್ಟ್ರದ ಮಹಿಶಾಳ ನೀರಾವರಿ ಯೋಜನೆ ಅನುಷ್ಟಾನಗೊಳ್ಳದ ಕಾರಣಕ್ಕೆ ಕರ್ನಾಟಕದ ನೀರಿನ ಮೇಲೆ ಅವಲಂಬಿತವಾಗಿವೆ. ಈ ಹಿಂದೆ ಮಾನವೀಯತೆ ದೃಷ್ಟಿಯಿಂದ ಮಹಾರಾಷ್ಟ್ರಕ್ಕೆ ನೀರು ಹರಿಸಲಾಗಿತ್ತು. ಹೀಗಾಗಿ ಅಲ್ಲಿನ ಹಳ್ಳಿಗಳು ಕರ್ನಾಟಕಕ್ಕೆ ಸೇರ್ಪಡೆ ಮಾಡಲು ಹೋರಾಟ ಆರಂಭಿಸಿವೆ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕೆಂದಿರುವುದು ಎಷ್ಟು ಸಮಂಜಸ ಎಂದು ಎಂ.ಬಿ. ಪಾಟೀಲ ಪ್ರಶ್ನಿಸಿದರು.

    ನೆಲ,‌ಜಲ, ಭಾಷೆಯ ಪ್ರಶ್ನೆ ಬಂದಾಗ ಕರ್ನಾಟಕದ ಎಲ್ಲ ಪಕ್ಷಗಳು ಒಂದಾಗುತ್ತವೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಆದರೆ ವಿಚಾರಣೆ ಇದೀಗ ಆರಂಭವಾಗಿದ್ದು ಆ ಬಳಿಕ ಕರೆಯುವುದಾಗಿ ಹೇಳಿದ್ದಾರೆ‌‌. ಹೀಗಾಗಿ ಸರ್ಕಾರಕ್ಕೆ ಈ ವಿಷಯದಲ್ಲಿ ನಮ್ಮ ಬೆಂಬಲವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts