More

    ಗೃಹಿಣಿಯರ ಸ್ಥಾನ ದೊಡ್ಡದು ಎಂದ ಕೋರ್ಟ್

    ಚೆನ್ನೈ: ಸಮಯದ ಮಿತಿಯಿಲ್ಲದೆ ಕೆಲಸ ಮಾಡುವ ಗೃಹಿಣಿಯರ ಸ್ಥಾನ ದೊಡ್ಡದು ಎಂದು ವರ್ಣಿಸಿರುವ ಮದ್ರಾಸ್ ಹೈಕೋರ್ಟ್, ಅಪಘಾತವೊಂದರಲ್ಲಿ ಶಾಶ್ವತ ಅಂಗವಿಕಲರಾದ ಮಹಿಳೆಯೊಬ್ಬರಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ಸೂಚಿಸಿದೆ.

    ಗೃಹಿಣಿಯ ಕಾರ್ಯಭಾರ ನಿರ್ವಹಿಸುವುದು ಕಠಿಣ. ಅವರು ಯಾವುದೇ ಸಮಯದ ಮಿತಿಯಿಲ್ಲದೆ ಕೆಲಸ ಮಾಡುತ್ತಾರೆ. ಅವರ ಪ್ರೀತಿ, ಅಕ್ಕರೆ ಇದಕ್ಕೆ ಕಾರಣವಾಗಿದ್ದು, ಸಾಮಾನ್ಯ ಉದ್ಯೋಗಿಯಿಂದ ಇದನ್ನು ಎಂದಿಗೂ ನಿರೀಕ್ಷಿಸಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 2017ರ ಅಪಘಾತ ಪ್ರಕರಣವೊಂದರ ಸಂಬಂಧ ತೀರ್ಪು ನೀಡುವಾಗ ಎಸ್. ಸುಬ್ರಹ್ಮಣ್ಯಂ ಇದ್ದ ಪೀಠ, ಈ ಮೆಚ್ಚುಗೆ ಸೂಚಿಸಿದೆ.

    ಇದನ್ನೂ ಓದಿ: ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…

    ಸಮಾಜ ಹಾಗೂ ಕುಟುಂಬಕ್ಕೆ ಅವರ ಅನನ್ಯ ಕೊಡುಗೆಯನ್ನು ಪರಿಗಣಿಸಿ ಶಾಶ್ವತ ಅಂಗವಿಕಲರಾದ ಭುವನೇಶ್ವರಿ ಎಂಬುವವರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಪೀಠ ಆದೇಶಿಸಿದೆ. 2017ರಲ್ಲಿ ಬಸ್ ಅಪಘಾತದಲ್ಲಿ ಶೇಕಡ 60 ಅಂಗವೈಕಲ್ಯಕ್ಕೆ ತುತ್ತಾದ ಭುವನೇಶ್ವರಿ ಅವರಿಗೆ 4,86,000 ರೂಪಾಯಿ ಪರಿಹಾರ ನೀಡುವಂತೆ ಅಪಘಾತ ಹಕ್ಕು ನ್ಯಾಯ ಮಂಡಳಿ ಸೂಚಿಸಿತ್ತು. 4,500 ರೂ. ಮಾಸಿಕ ವೇತನ ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಗೃಹಿಣಿಯಾಗಿ ಅವರ ಪಾತ್ರವನ್ನು ನ್ಯಾಯಮಂಡಳಿ ಸರಿಯಾಗಿ ಗೌರವಿಸಿ ಹೆಚ್ಚಿನ ಪರಿಹಾರ ಕೊಡಿಸಬೇಕಿತ್ತು ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

    ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ: ನ್ಯಾಯಮೂರ್ತಿ ವಿ.ಪಾರ್ಥಿಬನ್ ಐತಿಹಾಸಿಕ ಆಬ್ಸರ್ವೇಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts