More

    ತೆರಿಗೆ ವಂಚನೆ ಕೇಸ್ – ಎ.ಆರ್.ರೆಹಮಾನ್​ಗೆ ಮದ್ರಾಸ್ ಹೈಕೋರ್ಟ್ ನೋಟಿಸ್​

    ಚೆನ್ನೈ: ತೆರಿಗೆ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಜನಪ್ರಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್​ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಇನ್​ಕಮ್ ಟ್ಯಾಕ್ಸ್ ಅಪ್ಪಿಲೇಟ್​ ಟ್ರಿಬ್ಯೂನಲ್​ ನೀಡಿದ ತೀರ್ಪು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿರುವ ಪಿಟಿಷನ್ ವಿಚಾರಣೆಗೆ ಎತ್ತಿಕೊಂಡಿರುವ ಕೋರ್ಟ್​, ಈ ನೋಟಿಸ್ ಜಾರಿಗೊಳಿಸಿದೆ.

    ನ್ಯಾಯಮೂರ್ತಿಗಳಾದ ಟಿ.ಎಸ್.ಶಿವಗ್ನಾನಂ ಮತ್ತು ವಿ.ಭವಾನಿ ಸುಬ್ಬರೋಯನ್​ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಅಹವಾಲನ್ನು ಸ್ವೀಕರಿಸಿದ್ದು, ವಿಚಾರಣೆ ಆರಂಭಿಸಿದೆ. ಆದಾಯ ತೆರಿಗೆ ಇಲಾಖೆ ಪರ ನ್ಯಾಯವಾದಿ ಟಿ.ಆರ್. ಸೆಂಥಿಲ್ ಕುಮಾರ್ ಅವರು, 2011-12ರ ಅವಧಿಯಲ್ಲಿ ರೆಹಮಾನ್ ಅವರು ಬ್ರಿಟನ್ ಮೂಲದ ಲಿಬ್ರಾ ಮೊಬೈಲ್ಸ್​ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, 3.47 ಕೋಟಿ ರೂಪಾಯಿಯನ್ನು ಆದಾಯವಾಗಿ ಪಡೆದುಕೊಂಡಿದ್ದಾರೆ. ಇದು ಮೂರು ವರ್ಷ ಕಾಲ ಎಕ್ಸ್​ಕ್ಲೂಸಿವ್ ರಿಂಗ್​ಟೋನ್ ಕಂಪೋಸ್ ಮಾಡಿಕೊಡುವುದಕ್ಕೆ ಮಾಡಿಕೊಂಡ ಒಪ್ಪಂದವಾಗಿತ್ತು.

    ಇದನ್ನೂ ಓದಿ: 25 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಪ್ರತಿವರ್ಷ ಉಚಿತ ಔಷಧ ನೀಡುತ್ತಿದ್ದ ಬಡವರ ಡಾಕ್ಟರ್ ಜಾವೇದ್ ಅಲಿ ಜುನೈದ್ ನಿಧನ

    ಈ ಒಪ್ಪಂದದ ಪ್ರಕಾರ ಕಂಪನಿ ಹಣ ಪಾವತಿಗೆ ಮುಂದಾದಾಗ ಫೌಂಡೇಷನ್ ಒಂದರ ಖಾತೆಗೆ ಜಮಾ ಮಾಡುವಂತೆ ರೆಹಮಾನ್ ಸೂಚಿಸಿದ್ದರು. ಆ ಖಾತೆಯನ್ನು ರೆಹಮಾನ್ ಅವರೇ ನಿರ್ವಹಿಸುತ್ತಿದ್ದಾರೆ. ತೆರಿಗೆ ವಿಧಿಸಬಹುದಾದ ಮೊತ್ತ ನೇರವಾಗಿ ಸ್ವೀಕರಿಸುತ್ತಿದ್ದರೆ ಮೂಲದಲ್ಲಿಯೇ ತೆರಿಗೆ ಕಡಿತವಾಗುತ್ತಿತ್ತು. ಆದರೆ. ಇಲ್ಲಿ ಹಣವನ್ನು ಟ್ರಸ್ಟ್ ಖಾತೆಯ ಮೂಲಕ ಪಡೆದುಕೊಂಡು ತೆರಿಗೆ ಕಡಿತವನ್ನು ತಪ್ಪಿಸಿ ವಂಚನೆ ಎಸಗಲಾಗಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.

    ಇದನ್ನೂ ಓದಿ: VIDEO: ಫೋನ್ ಎ- ಫ್ರೇಂಡ್​ ಅಂತಾ ಹೆಂಡತಿಗೆ ಕರೆ ಮಾಡಿದ್ರೆ ಉತ್ತರಿಸಿದ್ದು ಇನ್ಯಾರೋ? ಲೈವ್​ನಲ್ಲಿ ಬಯಲಾಯ್ತಾ ಪತ್ನಿ ಅಫೇರ್​…! 

    ಅಲ್ಲದೆ, ಈ ಸಂಬಂಧ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್ ಪಡೆದ ರೆಹಮಾನ್, ಚೆನ್ನೈನಲ್ಲಿರುವ ಐಟಿ ಅಪ್ಪಿಲೇಟ್ ಟ್ರಿಬ್ಯೂನಲ್​ನಲ್ಲಿ ದೂರು ದಾಖಲಿಸಿದ್ದರು. ಟ್ರಿಬ್ಯೂನಲ್ 2019ರ ಸೆಪ್ಟೆಂಬರ್​ನಲ್ಲಿ ಈ ಬಗ್ಗೆ ತೀರ್ಪು ನೀಡಿದ್ದು, ಕೇಂದ್ರ ಸರ್ಕಾರ ಪೋಸ್ಟ್​ ಫ್ಯಾಕ್ಟೋ ಅಪ್ರೂವಲ್ ಕೊಟ್ಟಿದೆ ಎಂಬುದನ್ನು ಎತ್ತಿ ಹಿಡಿದು ರೆಹಮಾನ್ ಪರ ತೀರ್ಪು ನೀಡಿತು ಎಂಬ ಹಿನ್ನೆಲೆಯ ವಿವರವನ್ನೂ ಅವರು ನೀಡಿದರು. (ಏಜೆನ್ಸೀಸ್)

    ವಿಡಿಯೋ: ಮಗಳಿಗಾಗಿ ಗ್ಯಾರೇಜ್​ಅನ್ನೇ ಕ್ಲಾಸ್​ ರೂಮ್​ ಆಗಿ ಮಾರ್ಪಡಿಸಿದ ತಂದೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts