More

    ಟುಗೆದರ್​ ಆಸ್​ ಒನ್​: ಒಂದೇ ಹಾಡು, ಐದು ಭಾಷೆಗಳು, 65 ಗಾಯಕರು

    ಎ.ಆರ್​. ರೆಹಮಾನ್​ ಅವರ ಜನಪ್ರಿಯ ಹಾಡುಗಳಲ್ಲಿ ‘ರೋಜ’ ಚಿತ್ರದ ‘ತಮಿಳಾ ತಮಿಳಾ …’ ಸಹ ಒಂದು. ದೇಶಭಕ್ತಿ ಉಕ್ಕಿಸುವ ಈ ಹಾಡು ಹಿಂದಿಯಲ್ಲೂ (‘ಭಾರತ್​ ಹಮ್​ ಕೋ ಜಾನ್​ ಸೇ ಪ್ಯಾರಾ ಹೇ …’) ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿತ್ತು. ಈಗ ಇದೇ ಹಾಡಿನ ಟ್ಯೂನ್​ ಇಟ್ಟುಕೊಂಡು, ಇನ್ನೊಂದು ದೇಶಭಕ್ತಿಯ ಹಾಡನ್ನು ಹೊಸದಾಗಿ ರಚಿಸಲಾಗಿದೆ.

    ಇದನ್ನೂ ಓದಿ: ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು ಅಂತಾರೆ ದರ್ಶನ್​

    ಯುನೈಟೆಡ್​ ಸಿಂಗರ್ಸ್​ ಚಾರಿಟಬಲ್​ ಟ್ರಸ್ಟ್​ ಎಂಬ ಸಂಸ್ಥೆ ಮಾಡಿರುವ ‘ಟುಗೆದರ್​ ಆಸ್​ ಒನ್​’ ಎಂಬ ಈ ಹಾಡಿನ ವಿಶೇಷವೆಂದರೆ, ಭಾರತದ ಜನಪ್ರಿಯ 65 ಗಾಯಕರು ಹಿಂದಿ, ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಹಾಡಿದ್ದಾರೆ.

    ಈ ಹಾಡು ಇದೀಗ ಯೂಟ್ಯೂಬ್​ನ ಲಹರಿ ಆಡಿಯೋದಲ್ಲಿ ಬಿಡುಗಡೆಯಾಗಿದ್ದು, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಎ.ಆರ್. ರೆಹಮಾನ್​, ಮೋಹನ್​ ಲಾಲ್​, ರಾಮ್​ಚರಣ್​ ತೇಜ ಮತ್ತು ಯಶ್​ ಒಂದೇ ಸಮಯಕ್ಕೆ ಈ ಹಾಡನ್ನು ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ‘ರಾಕಿಂಗ್​ಸ್ಟಾರ್​’ ಯಶ್​ ಕಡೆಯಿಂದ ಮತ್ತೊಂದು ಹೊಸ ಸುದ್ದಿ…

    ಈ ಹಾಡಿಗೆ ಎಸ್​.ಪಿ. ಬಾಲಸುಬ್ರಹ್ಮಣ್ಯಂ, ಕೆ.ಎಸ್. ಚಿತ್ರಾ, ಹರಿಹರನ್​, ಶಂಕರ್​ ಮಹದೇವನ್​, ಹರಿಣಿ, ಮನು, ಎಸ್​.ಪಿ. ಶೈಲಜಾ, ಎಸ್​.ಪಿ.ಬಿ. ಚರಣ್​, ಟಿಪ್ಪು, ಸುಜಾತಾ ಮೋಹನ್​ ಮುಂತಾದವರು ಧ್ವನಿ ನೀಡಿದ್ದಾರೆ. ವಿಶೇಷವೆಂದರೆ, ಲಾಕ್​ಡೌನ್ ಸಂದರ್ಭದಲ್ಲಿ ಈ ಹಾಡಿನ ನಿರ್ಮಾಣ ಶುರುವಾಗಿದ್ದು, ಎಲ್ಲಾ ಗಾಯಕ-ಗಾಯಕಿಯರೂ ತಮ್ಮ ಮನೆಯಲ್ಲೇ ಹಾಡಿ ಕಳಿಸಿದ್ದಾರೆ.

    ಆಸ್ಪತ್ರೆಯಲ್ಲಿನ ಎಸ್​ಪಿ ಬಾಲಸುಬ್ರಮಣ್ಯಂ ಸ್ಥಿತಿ ಹೇಗಿದೆ ನೋಡಿ; ಚಿಕಿತ್ಸೆಯ ಫೋಟೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts