More

    ದೇವಸ್ಥಾನದಲ್ಲಿ ಬಾಲಿವುಡ್​ ಸಾಂಗ್​ಗೆ ಡಾನ್ಸ್​ ಮಾಡಿ ಕೆಲಸ ಕಳೆದುಕೊಂಡ ಇಬ್ಬರು ಮಹಿಳೆಯರು!

    ಭೋಪಾಲ್​: ಡಾನ್ಸ್​ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಇಂದಿನ ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಬಹುತೇಕರಿಗೆ ಕ್ಯಾಮೆರಾ ಮುಂದೆ ಸೊಂಟ ಬಳುಕಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಹಾಗಾಂತ ಸಿಕ್ಕ ಸಿಕ್ಕಲ್ಲಿ ಡಾನ್ಸ್​ ಮಾಡಬಾರದು. ಅದರಲ್ಲೂ ದೇವಸ್ಥಾನದಂತಹ ಪವಿತ್ರ ಕ್ಷೇತ್ರದಲ್ಲಿ ಸಿನಿಮಾ ಗೀತೆಗಳಿಗೆ ಡಾನ್ಸ್​ ಮಾಡಲೇಬಾರದು.

    ಈ ಹಿಂದೆ ಕೆಲವರು ದೇವಸ್ಥಾನಗಳಲ್ಲಿ ಡಾನ್ಸ್​ ಮಾಡಿ ಟೀಕೆ ಒಳಗಾಗಿದ್ದನ್ನು ನೋಡಿರುತ್ತೀರಿ. ಅದೇ ರೀತಿ ಮಧ್ಯಪ್ರದೇಶದಲ್ಲಿ ಇಬ್ಬರು ಮಹಿಳೆಯರು ದೇವಸ್ಥಾನದಲ್ಲಿ ಡಾನ್ಸ್​ ಮಾಡಿ ವ್ಯಾಪಕ ಆಕ್ರೋಶವನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಕೆಲಸವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ವಿವರಣೆಗೆ ಬರುವುದಾದರೆ, ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಾಲಯದಲ್ಲಿ ಮಹಿಳೆಯರಿಬ್ಬರು ಡಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಆ ಮಹಿಳೆಯರು ಅದೇ ದೇವಸ್ಥಾನದಲ್ಲಿ ರಕ್ಷಣಾ ವಿಭಾಗದಲ್ಲಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಬಾಲಿವುಡ್​ ಹಾಡೊಂದಕ್ಕೆ ಇಬ್ಬರು ಸೇರಿ ಡಾನ್ಸ್​ ಮಾಡಿ, ವಿಡಿಯೋ ರೆಕಾರ್ಡ್​ ಮಾಡಿದ್ದರು.

    ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಬೆನ್ನಲ್ಲೇ ವಿಡಿಯೋ ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪವಿತ್ರ ದೇವಸ್ಥಾನದಲ್ಲಿ ಬಾಲಿವುಡ್​ ಹಾಡಿಗೆ ಯಾರಾದರೂ ಈ ರೀತಿ ಡಾನ್ಸ್​ ಮಾಡುತ್ತಾರಾ? ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಇದು ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಇಬ್ಬರು ಕೆಲಸದಿಂದ ತೆಗೆದಿದ್ದಾರೆ. ಅಲ್ಲದೆ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದು, ಮೊಬೈಲ್​ ಫೋನ್​ ಮತ್ತು ಕ್ಯಾಮೆರಾಗಳನ್ನು ದೇವಸ್ಥಾನದ ಒಳಗಡೆ ತರುವುದನ್ನು ಆಡಳಿತ ಮಂಡಳಿ ನಿಷೇಧಿಸಿದೆ. (ಏಜೆನ್ಸೀಸ್​)

    ಹೃದಯಾಘಾತ: ಎಎಸ್​ಬಿ ಕಾಲೇಜು ಪ್ರಾಂಶುಪಾಲ ಮಾರ್ಟಿನ್ ನಿಧನ

    ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ ಕೇಸ್​: ಇನ್ನೂ ಸಿಗದ ಸುಳಿವು, ಮಹಿಳಾ PSI ವಿರುದ್ಧ FIR​ ದಾಖಲು

    ಪ್ರಾರ್ಥನೆ ಸಲ್ಲಿಸಿ ದೇವರ ಪಾದಕ್ಕೆ ತಲೆಯಿಟ್ಟ ವ್ಯಕ್ತಿ ಮೇಲೇಳಲೇ ಇಲ್ಲ! ದೇಗುಲದಲ್ಲೇ ಹೃದಯಾಘಾತ, ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts