More

    ಜೂ. 5ರಂದು ಚಂದ್ರಗ್ರಹಣ: ಇಲ್ಲಿದೆ ಗೋಚರಿಸುವ ಸ್ಥಳ, ಸಮಯ ಮತ್ತಿತರ ವಿವರ

    ನವದೆಹಲಿ: ಈ ವರ್ಷದ ಎರಡನೇ ಚಂದ್ರಗ್ರಹಣ ಜೂನ್ 5ರಂದು ಸಂಭವಿಸಲಿದೆ. ಅಂದು ರಾತ್ರಿ 11.15ಕ್ಕೆ ಆರಂಭವಾಗಲಿರುವ ಗ್ರಹಣ ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. ಅಂದರೆ ಈ ಗ್ರಹಣದ ಒಟ್ಟು ಅವಧಿ ಮೂರು ಗಂಟೆ 19 ನಿಮಿಷ. ಯೂರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಅಮೆರಿಕದ ಕೆಲ ಭಾಗಗಳಲ್ಲಿ ಇದು ಗೋಚರಿಸಲಿದೆ. 12.54ಕ್ಕೆ ಅದು ತನ್ನ ಪೂರ್ಣ ಸ್ವರೂಪದಲ್ಲಿ ಗೋಚರಿಸುತ್ತದೆ ಎಂದು ಖಭೌತ ವಿಜ್ಞಾನಿಗಳು ಹೇಳಿದ್ದಾರೆ.

    ಇದನ್ನೂ ಓದಿ: ಆಯುಷ್ಮಾನ್​ ಭಾರತ್​ ಯೋಜನೆಯಡಿ ಉದ್ಯೋಗ: ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ ಎಚ್ಚರ…!

    2020ರಲ್ಲಿ ಸಂಭವಿಸುತ್ತಿರುವ ಎರಡನೇ ಚಂದ್ರಗ್ರಹಣ ಇದು. ಮೊದಲನೆಯದು ಜನವರಿ 10ರಂದು ಸಂಭವಿಸಿತ್ತು. ಜುಲೈ 5 ಮತ್ತು ನವೆಂಬರ್ 29ರಂದು ಇನ್ನೆರಡು ಚಂದ್ರಗ್ರಹಣಗಳು ಸಂಭವಿಸಲಿವೆ.

    ಇದನ್ನೂ ಓದಿ: ಕರೊನಾಘಾತದ ನಡುವೆಯೇ 100ಕಿ.ಮೀ ವೇಗದಲ್ಲಿ ನುಗ್ಗುತಿದೆ ‘ನಿಸರ್ಗ’: ಮುಂಬೈನಲ್ಲಿ ನಡುಕ

    ಈ ನಾಲ್ಕೂ ಗ್ರಹಣಗಳ ಪೈಕಿ ಜೂನ್ 5ರ ಗ್ರಹಣ ಕರ್ನಾಟಕವೂ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ ಸ್ವಲ್ಪಮಟ್ಟಿಗೆ ಮಾತ್ರ ಗೋಚರಿಸುತ್ತದೆ. ನವೆಂಬರ್ 29ರ ಗ್ರಹಣ ಕೂಡ ಭಾಗಶಃ ಗೋಚರಿಸುವಂತಹದ್ದು. ಆದರೆ ಇದೆಲ್ಲವೂ ಆ ಸಂದರ್ಭದಲ್ಲಿ ಇರುವ ಶುಭ್ರ ವಾತಾವರಣ, ಮೋಡ ಮುಸುಕಿದ ಆಕಾಶ ಇದೆಲ್ಲದರ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

    FULL DETAILS | ಸೈಕ್ಲೋನ್​ಗೆ ಹೆಸರಿಡೋದು ಯಾರು, ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts