More

    ಕಾಂಗ್ರೆಸ್​ ಗ್ಯಾರಂಟಿ ಕಾರ್ಡಗಳ ಆಮಿಷಕ್ಕೆ ಬಲಿಯಾಗಬೇಡಿ: ಉಮೇಶಗೌಡ ಪಾಟೀಲ

    ಗದಗ: ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳ ಆಮಿಷಕ್ಕೆ ಬಲಿಯಾಗದೇ ದೇಶದ ಭವಿಷ್ಯವನ್ನು ರೂಪಿಸುವ ಬಿಜೆ ಪಿಯನ್ನು ಬೆಂಬಲಿಸಿ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ನರಗುಂದ ಮತೇತ್ರದ ಬಿಜೆಪಿ ಮುಖಂಡ ಉಮೇಶಗೌಡ ಪಾಟೀಲ ವಿನಂತಿಸಿಕೊಂಡರು.
    ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದದಲ್ಲಿ ಪಿ.ಸಿ. ಗದ್ದಿಗೌಡ್ರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಇಂದು ಕಾಂಗ್ರೆಸ್​ ಪವು ವಿಧಾನಸಭೆಯಲ್ಲಿ ಆಮೀಷವೊಡ್ಡಿ ಮತ ಪಡೆದಂತೆ ಲೋಕಸಭಾ ಚುನಾವಣೆಯಲ್ಲಿಯೂ ಸಹ ಮನೆ ಮನೆಗೆ ಗ್ಯಾರಂಟಿ ಕಾರ್ಡಗಳನ್ನು ವಿತರಿಸಿ ಮಹಿಳೆಯರಿಗೆ ವರ್ಷಕ್ಕೆ 1 ಲ ನೀಡುವುದಾಗಿ ಮತದಾರರನ್ನು ಸೆಳೆಯುತ್ತಿದ್ದಾರೆ. ಇದು ಸುಳ್ಳು ಭರವಸೆಯಾಗಿದೆ. ತನ್ನ ಮೈತ್ರಿ ಪಗಳು ಈ ಗ್ಯಾರಂಟಿ ಕಾರ್ಡಗಳನ್ನು ಹಂಚುತ್ತಿಲ್ಲ. ಇದು ಕೇವಲ ಕಾಂಗ್ರೆಸ್​ನ ಯೋಜನೆಯಾಗಿದೆ. ದೇಶದ ವರ್ಷದ ಬಜೆಟ್​ ಗಾತ್ರಕ್ಕಿಂತ ಗ್ಯಾರಂಟಿಗೆ ನೀಡುವ ಹಣವೇ ದೊಡ್ಡದಾಗಿದೆ. 65 ವರ್ಷ ಆಳಿದ ಕಾಂಗ್ರೆಸ್​ ಪವು ಇಂತಹ ಉಚಿತ ಗ್ಯಾರಂಟಿಗಳನ್ನು ಅಧಿಕಾರದಲ್ಲಿ ಇದ್ದಾಗ ಮಾಡದೇ ಈಗ ಸೋಲುವ ಭಯದಿಂದ ಹಣದ ಆಮೀಷ ತೋರಿಸುತ್ತಿದ್ದಾರೆ. 10 ವರ್ಷ ಆಳಿದ ಮೋದಿ ಸರ್ಕಾರವು ಶಾಶ್ವತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಉಜ್ವಲಾ, ಜನಧನ್​, ಸುಕನ್ಯಾ ಸಮೃದ್ಧಿ, ಆಯುಷ್ಮಾನ್​ ಭಾರತ, ಕಿಸಾನ್​ ಸಮ್ಮಾನ, ಮನೆ ಮನೆಗೆ ಕುಡಿಯುವ ನೀರು, ನೂತನ ಶಿಣ ನೀತಿ ಸೇರಿದಂತೆ, ಹೊಸ ರೇಲ್ವೆ ಮತ್ತು ವಿಮಾನ ನಿಲ್ದಾಣ ಸ್ಥಾಪನೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಜೊತೆಗೆ ವಿಕಸಿತ ಭಾರತವಾಗಿ ಹೊರ ಹೊಮ್ಮಿದೆ. ಇಂದು ಆಥಿರ್ಕತೆಯಲ್ಲಿ 11 ನೇ ಸ್ಥಾನಕ್ಕೆ ಇದ್ದ ದೇಶವು 4 ನೇ ಸ್ಥಾನಕ್ಕೆ ಕಾಲಿಡುತ್ತಿದೆ. ಇಡೀ ಜಗತ್ತೇ ಭಾರತದ ಕಡೆ ನೋಡುವಂತಾಗಿದೆ, ಸಂಸದ ಪಿ.ಸಿ ಗದ್ದಿಗೌಡ್ರ ಅವರ ಅನುದಾನದಲ್ಲಿ ಸ್ವಚ್ಛ ಗ್ರಾಮಕ್ಕಾಗಿ ಲಕ್ಕುಂಡಿಗೆ 40 ಲ ರೂ, ದಲ್ಲಿ ಹೈಟೆಕ್​ ಶೌಚಾಲಯ ಕಾಮಗಾರಿ ಈಗಾಗಲೇ ಆರಂಭವಾಗಿದ್ದು ಕಮಲಕ್ಕೆ ನಿಮ್ಮ ಮತ ಮೀಸಲಾಗಿರಲಿ ಎಂದರು.
    ಬಿ.ಜೆ.ಪಿ ಹಿರಿಯ ಮುಖಂಡ ವಸಂತ ಮೇಟಿ ಮಾತನಾಡಿ, ಬಿಟ್ಟಿ ಗ್ಯಾರಂಟಿ ಯೋಜನೆಗಳಿಂದ ವಿದ್ಯುತ್​ ದರ, ಮುದ್ರಾಂಕ ಶುಲ್ಕ, ಮದ್ಯ ಸೇರಿದಂತೆ ದಿನಸಿ ವಸ್ತುಗಳು ದುಬಾರಿಯಾಗಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಪಿತ್ರಾಜಿರ್ತ ಆಸ್ತಿಯಲ್ಲಿ ಶೇ.55 ರಷ್ಟು ಆಸ್ತಿ ಸರ್ಕಾರದ ಪಾಲು ಆಗಲಿದೆ ಎಂದರು.
    ರುದ್ರಪ್ಪ ಮುಸ್ಕಿನಭಾವಿ, ವೀರಣ್ಣ ಚಕ್ರಸಾಲಿ, ಮಹಾಂತೇಶ ಕಮತರ, ಮಂಜುಳಾ ಮೆಣಸಿನಕಾಯಿ, ಶಿವಪ್ಪ ಬಳಿಗೇರ, ವಿರುಪಾ ಬೆಟಗೇರಿ, ಮಂಜುಳಾ ಪೂಜಾರ, ಎಸ್​.ಬಿ.ಕಲಕೇರಿ, ದತ್ತಣ್ಣ ಜೋಶಿ, ಈರಪ್ಪ ಅಜಿನಾಳ, ಕಳಕೇಶ ಟೆಂಗಿನಕಾಯಿ, ಎಂ. ಎಂ. ಹುಬ್ಬಳ್ಳಿ, ಶರಣಯ್ಯ ಮುಳಕೊಂಪಿಮಠ, ಚಂದ್ರಗೌಡ ಪಾಟೀಲ ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts