More

    ಸಾಧ್ವಿಯ ಕಣ್ಣಿನ ದೃಷ್ಟಿಯನ್ನೇ ಕಳೆದ ಕಾಂಗ್ರೆಸ್​; ಭೋಪಾಲ್​ ಸಂಸದೆ ಆರೋಪ

    ಭೋಪಾಲ್​: ಕಾಂಗ್ರೆಸ್​ ನೀಡಿದ ಟಾರ್ಚರ್​ನಿಂದಾಗಿ ನನ್ನ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದೇನೆ ಎಂದು ಬಿಜೆಪಿ ಸಂಸದೆ, ಸಾಧ್ವಿ ಪ್ರಜ್ಞಾ ಸಿಂಗ್​ ಆರೋಪಿಸಿದ್ದಾರೆ.

    ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಗ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದರು. ಕಣ್ಣಿನಲ್ಲಿ ಊತ ಕಾಣಿಸಿಕೊಂಡು ಕೀವು ಉಂಟಾಗಿತ್ತು. ಅದು ಮಿದುಳಿಗೂ ವ್ಯಾಪಿಸಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದೇನೆ ಎಂದು ಅವರು ಹೇಳಿದರು.

    ಇದನ್ನೂ ಓದಿ; ಚೀನಿಯರ ಪೊಳ್ಳು ವಾದಕ್ಕೆ ‘ಲೈಕ್​’ ಕೊಟ್ಟ ಕಾಂಗ್ರೆಸ್​ ಸಂಸದ ಶಶಿ ತರೂರ್​? 

    2008ರಲ್ಲಿ ಸಂಭವಿಸಿದ ಮಾಲೇಗಾಂವ್​ ಸ್ಫೋಟದ ಆರೋಪಿಯಾಗಿದ್ದ ಸಾಧ್ವಿ 9 ವರ್ಷಗಳ ಕಾಲ ಜೈಲಿನಲ್ಲಿದ್ದರು. ಈ ಅವಧಿಯಲ್ಲಿ ಭಾರಿ ಹಿಂಸೆ ನೀಡಲಾಗಿತ್ತು. ಇದರಿಂದಾಗಿ ದೇಹದಲ್ಲೆಲ್ಲ ಗಾಯಗಳಾಗಿದ್ದವು. ಅಲ್ಲದೇ, ಕಣ್ಣು ಊದಿಕೊಂಡು ಕೀವು ಉಂಟಾಗಿತ್ತು. ಇದು ಮಿದುಳಿಗೂ ವ್ಯಾಪಿಸಿದ್ದರಿಂದ ಬಲಗಣ್ಣಿನ ದೃಷ್ಟಿ ಮಸುಕಾಗಿದ್ದರೆ, ಎಡಗಣ್ಣು ದೃಷ್ಟಿಯನ್ನೇ ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

    ಭೋಪಾಲ್​ ಸಂಸದೆ ಕಾಣೆಯಾಗಿದ್ದಾರೆ ಎಂಬ ಭಿತ್ತಿ ಫಲಕಗಳ ಕುರಿತು ಮಾತನಾಡಿದ ಅವರು, ಲಾಕ್​​ಡೌನ್​ನಿಂದಾಗಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದ ಕಾರಣ ದೆಹಲಿಯಿಂದ ಭೋಪಾಲ್​​ಗೆ ಬರಲಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಇದನ್ನೂ ಓದಿ; ಕೆಮ್ಮುತ್ತಿದ್ದ…ಕೇಳಿದವರಿಗೆ ತಮಾಷೆಗೆ ಕರೊನಾ‌ ಇದೆ ಎಂದ..!! ಇದನ್ನು ಕೇಳಿಸಿಕೊಂಡವರು ಮಾತ್ರ ಸುಮ್ಮನಾಗಲಿಲ್ಲ..

    ಆದರೆ, ಲಾಕ್​ಡೌನ್​ ಘೋಷಣೆಯಾದಾಗ ಸಾಧ್ವಿ ಭೋಪಾಲ್​​ನಲ್ಲೇ ಇದ್ದರು. ಬಳಿಕ ಚಿಕಿತ್ಸೆ ನೆಪದಲ್ಲಿ ದೆಹಲಿಗೆ ತೆರಳಿ ಅಲ್ಲೇ ಉಳಿದುಕೊಂಡಿದ್ದರು ಎಂದು ಕಾಂಗ್ರೆಸ್​ ಶಾಸಕ ಪಿ.ಸಿ. ಶರ್ಮಾ ಆರೋಪಿಸಿದ್ದಾರೆ. ಅಲ್ಲದೇ. ಕಾಂಗ್ರೆಸ್​ ಅವಧಿಯಲ್ಲಿ ಸಾಧ್ವಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬುದನ್ನು ಅವರು ತಳ್ಳಿ ಹಾಕಿದ್ದಾರೆ.

    ಕನಕಪುರದಲ್ಲಿ ಜುಲೈ 1ರವರೆಗೆ ಸ್ವಯಂಪ್ರೇರಿತ ಲಾಕ್​ಡೌನ್​; ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ನಿರ್ಣಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts