More

    ಧಾರವಾಡದಲ್ಲಿ ಅಪಘಾತಕ್ಕೆ 13 ಬಲಿ: ಪ್ರತಿ ಜನವರಿ ಇದೇ ಜಾಗದಲ್ಲಿ ನಡೆಯುತ್ತೆ ಭೀಕರ ಆಕ್ಸಿಡೆಂಟ್​!

    ಧಾರವಾಡ: ಕಿಲ್ಲರ್ ಬೈಪಾಸ್ ಎಂದೇ ಪ್ರಸಿದ್ಧಿಯಾಗಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್​ನ ಇಟ್ಟಿಗಟ್ಟಿ ಕ್ರಾಸ್​ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ದಾವಣಗೆರೆ ಮೂಲದ 12 ಮಹಿಳೆಯರು ಸೇರಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ.

    ಪ್ರತಿ ವರ್ಷ ಜನವರಿ ತಿಂಗಳಿನಲ್ಲೇ ಇಟ್ಟಿಗಟ್ಟಿ-ಯರಿಕೊಪ್ಪ ಮಧ್ಯೆ ಪದೇಪದೆ ಅಪಘಾತ ಸಂಭವಿಸುತ್ತಿದೆ. 2020ರ ಜನವರಿ 26ರಂದು ಇದೇ ರಸ್ತೆಯಲ್ಲಿ ಕುಂದಗೋಳ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಅವರ ಕಾರು ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ ಸ್ವಾಮೀಜಿ ಸೇರಿದಂತೆ ಅವರೊಂದಿಗೆ ಪ್ರಯಾಣಿಸುತ್ತಿದ್ದವರೂ ಮೃತಪಟ್ಟಿದ್ದರು. 2011ರ ಜನವರಿ 15ರಂದೂ ಇದೇ ಜಾಗದಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಆ ವೇಳೆಯೂ 11 ಜನರ ಜೀವ ಹೋಗಿತ್ತು. ಇದನ್ನೂ ಓದಿರಿ ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

    ಧಾರವಾಡ-ಹುಬ್ಬಳ್ಳಿ ಮಧ್ಯದ ಬೈಪಾಸ್ ರಸ್ತೆ ಇಕ್ಕಟ್ಟಾಗಿದ್ದು, ಈ ಭಾಗದಲ್ಲಿ ರಸ್ತೆ ಅಗಲೀಕರಣ ಆಗಿಲ್ಲ. ಹುಬ್ಬಳ್ಳಿಯ ಗಬ್ಬೂರ ಬೈಪಾಸ್​ನಿಂದ ಧಾರವಾಡದ ನರೇಂದ್ರ ವರೆಗೆ ಸಿಂಗಲ್​ ಲೇನ್​ ಇದೆ. ಪರಿಣಾಮ ಈ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ರಸ್ತೆ ಅಗಲೀಕರಣಕ್ಕಾಗಿ ಹಲವರು ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ.

    ಇಟ್ಟಿಗಟ್ಟಿ ಕ್ರಾಸ್​ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ಹು-ಧಾ ಮಧ್ಯೆ 6 ಲೇನ್ ರಸ್ತೆ ಆಗಬೇಕು. ಈ ಸಂಬಂಧ ಈಗಾಗಲೇ ಡಿಪಿಆರ್ ರೆಡಿ ಆಗ್ತಿದೆ. ಹಾಲಿ ರಸ್ತೆ ಅಶೋಕ್​ ಖೇಣಿ ಒಡೆತನದ ನೈಸ್ ಸಂಸ್ಥೆ ಒಡೆತನದಲ್ಲಿದೆ. ಅವರನ್ನ ಭೇಟಿಯಾಗಿ ರಸ್ತೆ ವಿಸ್ತರಣೆ ಬಗ್ಗೆ ಮಾತನಾಡಿದ್ದೇವೆ. 2024ರ ವರೆಗೆ ನೀವೆ ಟೋಲ್ ಕಲೆಕ್ಟ್ ಮಾಡಿಕೊಳ್ಳಿ, ಆದ್ರೆ ರಸ್ತೆ ವಿಸ್ತರಣೆಗೆ ಅವಕಾಶ ಕೊಡಿ ಅಂತ ವಿನಂತಿಸಿದ್ದೇವೆ. ಇದಕ್ಕೆ ಅವರೂ ಸಮ್ಮತಿಸಿದ್ದಾರೆ. ಈ ಬಗ್ಗೆ ಒಪ್ಪಿಗೆ ಪತ್ರ ಕೊಟ್ಟಿದ್ದಾರೆ. ನಿತಿನ್ ಗಡ್ಕರಿ ಅವರಿಗೂ ಹೇಳಿದ್ದೇನೆ ಎಂದರು. 6 ಲೇನ್ ರಸ್ತೆ ಆಗೋದ್ರಿಂದ ರಸ್ತೆ ಅಪಘಾತ ತಡೆಯಬಹುದು ಎಂದರು.

    ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

    ಈ ಒಂದು ನಿರ್ಧಾರವೇ ದುರಂತ ಸಾವಿಗೆ ಕಾರಣವಾಯ್ತಾ? ಮೃತರ ಸಂಬಂಧಿ ಗೋಳಾಟ

    ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 13 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

    ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts