More

    ಎರಡನೇ ಸುತ್ತಿನಲ್ಲೂ ಭಾರೀ ಮುನ್ನಡೆ; ಬ್ರಿಟನ್​ ಪ್ರಧಾನಿ ಹುದ್ದೆಗೆ ಸುನಕ್ ಮತ್ತಷ್ಟು ಸನಿಹ

    ಲಂಡನ್​: ಬೋರಿಸ್ ಜಾನ್ಸನ್​​​ ಅವರ ರಾಜೀನಾಮೆಯಿಂದ ತೆರವಾಗಿರುವ ಯುನೈಟೆಡ್​​ ಕಿಂಗ್​ಡಮ್​ ಪ್ರಧಾನಿ ಹುದ್ದೆಗೆ ಈಗಾಗಲೇ ಮತದಾನ ಆರಂಭಗೊಂಡಿದೆ. ಮೊದಲ ಸುತ್ತಿನಲ್ಲಿ ಮುನ್ನಡೆ ಪಡೆದುಕೊಂಡಿದ್ದ ರಿಷಿ ಸುನಕ್​ ಇದೀಗ ಎರಡನೇ ಸುತ್ತಿನ ಮತದಾನದಲ್ಲೂ ಹೆಚ್ಚು ಮತ ಪಡೆದುಕೊಂಡಿದ್ದಾರೆ.

    ಗುರುವಾರ ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಬ್ರಿಟನ್​ ಮಾಜಿ ಹಣಕಾಸು ಸಚಿವ ರಿಷಿ ಸುನಕ್​​ 101 ಮತ ಪಡೆದುಕೊಳ್ಳುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಇದರ ಜತೆಗೆ ಪ್ರಧಾನಿ ರೇಸ್​​ ನಿಂದ ಓರ್ವ ಅಭ್ಯರ್ಥಿ ಹೊರಬಿದ್ದಿದ್ದಾರೆ.

    ಎರಡನೇ ಸುತ್ತಿನಲ್ಲಿ ಪೆನ್ನಿ ಮೊರ್ಡಾಂಟ್​​ 83 ಮತ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್​ ಟ್ರಸ್​ 64 ಮತ ಪಡೆದುಕೊಂಡಿದ್ದಾರೆ. ಅಟಾರ್ನಿ ಜನರಲ್​​ ಸುಯೆಲ್ಲಾ 27 ಮತ ಪಡೆದು ರೇಸ್​ನಿಂದ ಹೊರಬಿದ್ದಿದ್ದಾರೆ.

    ನಿನ್ನೆ ನಡೆದ ಮೊದಲ ಸುತ್ತಿನ ಮತದಾನದಲ್ಲಿ ರಿಷಿ ಸುನಕ್​ 88 ಮತ ಪಡೆದುಕೊಂಡು ಮುನ್ನಡೆ ಸಾಧಿಸಿದ್ದರು. ಇದೀಗ ಎರಡನೇ ಹಂತದಲ್ಲೂ ಅವರು ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಪ್ರಧಾನಿ ರೇಸ್​ನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

    ಬ್ರಿಟನ್​ ಪ್ರಧಾನಿ ರೇಸ್​ನಲ್ಲಿ ರಿಷಿ ಸುನಕ್ ಮುನ್ನಡೆ: ಮೊದಲ ಸುತ್ತಿನಲ್ಲಿ ಹೆಚ್ಚು ಮತ ಪಡೆದ ಇನ್ಫಿ ಮೂರ್ತಿ ಅಳಿಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts