More

    ಜಿಮ್ಸ್​ ಗೆ ಲೋಕಾ ಅಧಿಕಾರಿಗಳು ಭೇಟಿ, ಎಚ್ಚರಿಕೆ

    ಗದಗ: ಲೋಕಾಯುಕ್ತ ಡಿವೈಎಸ್​ಪಿ ವಿಜಯ ಬಿರಾದಾರ ಅವರು ಜಿಮ್ಸ್​ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ವೈದ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೆಲವು ಸಲಹೆ ಸೂಚನೆ, ಎಚ್ಚರಿಕೆ ನೀಡಿದ್ದಾರೆ.
    ಜಿಮ್ಸ್​ಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಮೊದಲು ಸಾರ್ವಜನಿಕರು ಚೀಟಿ ಪಡೆಯುವ, ರಕ್ತ ಪರೀೆ ಮಾಡಿಸುವ ಹಾಗೂ ಸ್ಕಾನಿಂಗ್​ ಮಾಡಿಸುವಲ್ಲಿ ಇರುವ ಸಮಸ್ಯೆಗಳನ್ನು ಪರಿಶೀಲಿಸಿದರು. ಅಲ್ಲದೇ, ಚೀಟಿ ನೀಡುವಲ್ಲಿ, ರಕ್ತ ಪರೀೆ ಮಾಡುವಲ್ಲಿ ಹಾಗೂ ಸ್ಕಾನಿಂಗ್​ ಮಾಡುವಲ್ಲಿ ಅನವಶ್ಯಕ ವಿಳಂಬ ನೀತಿ ಅನುಸರಿಸುವುದು, ಪರೀೆ ಪಡೆಯಲು ಹೊರಗೆ ಕಳಿಸುವ ದೂರುಗಳು ಕಂಡು ಬಂದರೆ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜೊತೆಗೆ ರೋಗಿಗಳು ಚೀಟಿ ಪಡೆಯಲು ಹೆಚ್ಚಿಗೆ ಕೌಂಟರ್​ ತೆರೆಯಲು ಸೂಚಿಸಿದರು.
    ಸ್ಥಳದಲ್ಲಿ ಓರ್ವ ರೋಗಿಯು ಮಂಗಳವಾರ ಸಂಜೆ ಜಿಮ್ಸ್​ಗೆ ದಾಖಲಾಗಿ, ಸ್ಕಾ$ನಿಂಗ್​ ಮಾಡಿಸದ್ದರೂ ವರದಿ ನೀಡಲು ಸತಾಯಿಸುತ್ತಿರುವ ಕುರಿತು ಮಾಹಿತಿ ನೀಡಿದ್ದರಿಂದ ಲೋಕಾ ಅಧಿಕಾರಿಗಳು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
    ನಂತರ ಜನನ&ಮರಣ ಪ್ರಮಾಣ ಪತ್ರ ನೀಡಲು ಸಾರ್ವಜನಿಕರನ್ನು ವಿನಾಃ ಕಾರಣ ಅಲೆದಾಡಿಸಬಾರದು, ಎಲ್ಲ ವೈದ್ಯರು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಅನವಶ್ಯಕವಾಗಿ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸೂಚಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಮ್ಸ್​ ಆವರಣದಲ್ಲಿ ಕಸ, ನೀರಿನ ಬಾಟಲ್​ಗಳು ಕಂಡು ಬಂದಿದ್ದು, ಸ್ವಚ್ಛಗೊಳಿಸುವಂತೆ ಲೋಕಾಯುಕ್ತ ಅಧಿಕಾರಿ ವಿಜಯ ಬಿರಾದಾರ ಅವರು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts