More

    ಬಿಜೆಪಿ ಶಾಸಕರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ: ಕಾಂಗ್ರೆಸ್​ಗೆ ಹೊಸ ಅಸ್ತ್ರ, ವಿರೂಪಾಕ್ಷಪ್ಪ ಬೆಂಬಲಿಗರ ಹೈಡ್ರಾಮ

    ದಾವಣಗೆರೆ: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳು ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣವನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್​ ಮುಂದಾಗಿದೆ. ಬಿಜೆಪಿ ಸರ್ಕಾರ ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕಾಂಗ್ರೆಸ್​ ನಾಯಕರು ಹರಿಹಾಯ್ದಿದ್ದಾರೆ.

    ಮುಖ್ಯಮಂತ್ರಿಗಳು 40% ಕಮಿಷನ್ ಆರೋಪಕ್ಕೆ ಸಾಕ್ಷಿ ಕೇಳುತ್ತಿದ್ದರು. ಈಗ ಲೋಕಾಯುಕ್ತ ಅಧಿಕಾರಿಗಳೇ ಸಾಕ್ಷಿಯನ್ನು ನೀಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ ಎಂದು ಕೈ ನಾಯಕರ ಆಕ್ರೋಶ ಹೊರಹಾಕಿದ್ದು, ಕೂಡಲೇ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಇಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆ ತಾಲೂಕು ಕಾಂಗ್ರೆಸ್​‌ನಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಬಿಜೆಪಿ ಸರ್ಕಾರ ಮತ್ತು ವಿರೂಪಾಕ್ಷಪ್ಪರನ್ನು ವಜಾ ಮಾಡುವಂತೆ ಕಾಂಗ್ರೆಸ್​​ ಒತ್ತಾಯಿಸಲಿದೆ. ಈ ಕ್ಷಣವೇ ವಜಾ ಮಾಡುವಂತೆ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಕೈ ನಾಯಕರು ಮನವಿ ಮಾಡಲಿದ್ದಾರೆ.

    ಇದನ್ನೂ ಓದಿ: ಮೊದಲ ರಾತ್ರಿಯ ಬೆಡ್​ರೂಮ್​ ಫೋಟೋ ಶೇರ್​ ಮಾಡಿಕೊಂಡ ನಟಿ ಸ್ವರಾ ಭಾಸ್ಕರ್​! ಕಾಲೆಳೆದ ನೆಟ್ಟಿಗರು

    ಲೋಕಾಯುಕ್ತ ದಾಳಿ ಬೆನ್ನಲ್ಲೇ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಬೆಂಗಳೂರಿಗೆ ತೆರಳಿದ್ದಾರೆ. ಕೆಲ ದಾಖಲೆಗಳೊಂದಿಗೆ ಪುತ್ರ ಮಲ್ಲಿಕಾರ್ಜುನ್​ ಜತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಚನ್ನಗಿರಿ ತಾಲೂಕಿನ ಚನ್ನೇಶ್​ಪುರದ ವಿರೂಪಾಕ್ಷಪ್ಪ ಮನೆ ಮುಂದೆ ನೀರವ ಮೌನ ಆವರಿಸಿದೆ. ಶಾಸಕರ ಮನೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಭೇಟಿ ನೀಡುತ್ತಿದ್ದಾರೆ.

    ಬೆಂಬಲಿಗರ ಹೈಡ್ರಾಮ
    ಮಾಡಾಳು ವಿರುಪಾಕ್ಷಪ್ಪ ಮನೆ ಮುಂದೆ ಬೆಂಬಲಿಗರ ಹೈಡ್ರಾಮ ನಡೆದಿದೆ. ಮಾಧ್ಯಮ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದು, ಸುಮ್ಮನೆ ಯಾಕೆ ವಿಡಿಯೋ ಮಾಡುತ್ತಿದ್ದಿರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಬಲಿಗರು ಮತ್ತು ಮಾಧ್ಯಮ ಪ್ರತಿನಿಧಿಗಳ ಮಧ್ಯೆ ವಾಗ್ವಾದವೂ ನಡೆದಿದೆ. ಗುರುತಿನ ಚೀಟಿ ತೋರಿಸುವಂತೆಯೂ ಒತ್ತಾಯ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ದಾಳಿ ವೇಳೆ ಸಿಕ್ಕಿದ್ದು 1.62 ಕೋಟಿ ರೂ.; ಹೇಗಿತ್ತು ಕಾರ್ಯಾಚರಣೆ? ಲೋಕಾಯುಕ್ತ ಐಜಿ ಹೇಳಿದ್ದೇನು? ಇಲ್ಲಿದೆ ಪೂರ್ಣ ಮಾಹಿತಿ…

    40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕರ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts