ಲೋಕಾಪುರ ಕಲಾವಿದರ ತವರೂರು

blank
blank

ಲೋಕಾಪುರ: ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಇರುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಲೋಕೇಶ್ವರ ಕಲಾ ಅಭಿವೃದ್ಧಿ ಸಂಘ ಜಾನಪದ ಕಲಾ ಮಹೋತ್ಸವವನ್ನು ಆಯೋಜಿಸಿದ್ದು, ಕಲಾವಿದರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗಣಿ ಉದ್ಯಮಿ ಎಂ.ಎಂ. ವಿರಕ್ತಮಠ ಹೇಳಿದರು.

ಸ್ಥಳೀಯ ಲೋಕೇಶ್ವರ ದೇವಸ್ಥಾನದ ಆವರಣದಲ್ಲಿ ಲೋಕೇಶ್ವರ ಕಲಾ ಅಭಿವೃದ್ಧಿ ಸಂಘ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಾನಪದ ಕಲಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಲೋಕಾಪುರ ಜಾನಪದ ಕಲಾವಿದರ ತವರೂರು ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ದೈಹಿಕ ಹಾಗೂ ಮಾನಸಿಕ ಶ್ರಮದಿಂದ ಮಾಡುವ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವುದು ದೊಡ್ಡ ದುರಂತವಾಗಿದೆ. ಆದ್ದರಿಂದ ಸಾಂಸ್ಕೃತಿಕ ಕಲೆಗಳನ್ನು ಜೀವಂತಗೊಳಿಸಲು ಇಂತಹ ಅಭೂತಪೂರ್ವ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳಬಸಯ್ಯ ಸಂಬಾಳದ ಹಾಗೂ ಬಯಲಾಟ ಆಕಾಡೆಮಿ ಸದಸ್ಯೆ ಗಂಗವ್ವ ಮುಧೊಳ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಯುವ ಮುಖಂಡ ಲೋಕಣ್ಣ ಕತ್ತಿ ಮಾತನಾಡಿದರು. ಜ್ಞಾನೇಶ್ವರ ಮಠದ ಬ್ರಹ್ಮಾನಂದ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಹಾಗೂ ವಹಾರುದ್ರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಶಿನಾಥ ಹುಡೇದ, ಸುರೇಶ ಬನೋಜಿ, ಸಂಸ್ಥೆ ಅಧ್ಯಕ್ಷ ಕೃಷ್ಣಾ ಭಜಂತ್ರಿ, ಮಲ್ಲಪ್ಪ ಚೌಧರಿ, ಲೋಕಣ್ಣ ಭಜಂತ್ರಿ, ವಿಠ್ಠಲ ಭಜಂತ್ರಿ, ದುರಗಪ್ಪ ಭಜಂತ್ರಿ, ಎ.ಎಚ್. ಚಂದವಾರ ಇದ್ದರು. ವಿ.ಜಿ. ಭಜಂತ್ರಿ ನಿರೂಪಿಸಿದರು. ಕೆ.ಪಿ. ಯಾದವಾಡ ವಂದಿಸಿದರು.

ಗಮನಸೆಳೆದ ಕಲಾವಿದರು
ನಾಡಿನ ಪಾರಂಪರಿಕ ಕಲೆಗಳಾದ ನಾಟಕ, ಬಯಲಾಟ, ಭಜನೆ, ದೊಡ್ಡಾಟ, ಶಾಸೀಯ ಸಂಗೀತ, ಹಿಂದುಸ್ತಾನಿ ಸಂಗೀತ, ವೀರಗಾಸೆ, ಡೊಳ್ಳು ಕುಣಿತ, ಬುಡಕಟ್ಟು ಲಂಬಾಣಿ ನೃತ್ಯಗಳು, ಜಾನಪದ ನೃತ್ಯಗಳು ಹೀಗೆ ಹಲವು ಬಗೆಯ ಕಾರ್ಯಕ್ರಮಗಳು ನೆರೆದಿದ್ದ ಸಾರ್ವಜನಿಕರನ್ನು ರೋಮಾಂಚನಗೊಳಿಸಿದವು. ವಾಣಿ ದಾದನಟ್ಟಿಮಠ ಭರತ್ಯ ನಾಟ್ಯ ಎಲ್ಲರ ಹುಬ್ಬೆರಿಸುವಂತೆ ಮಾಡಿತು.





Share This Article

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ..ಇಲ್ಲದಿದ್ದರೆ ಅಪಾಯ ಖಂಡಿತ! Monsoon

Monsoon: ಮಳೆಗಾಲದಲ್ಲಿ ಹವಾಮಾನದ ಬದಲಾವಣೆಯೂ ಆಹಾರದಲ್ಲಿನ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು…

ವಾಲ್ನಟ್ಸ್ ತಿನ್ನಲು ಸರಿಯಾದ ಸಮಯ, ದಿನಕ್ಕೆ ಎಷ್ಟು Walnuts ತಿನ್ನಬಹುದು ಗೊತ್ತಾ?

Walnuts: ವಾಲ್ನಟ್ಸ್ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪ್ರತಿದಿನ ಸೇವಿಸಬಹುದಾದ ಸೂಪರ್ ನಟ್ ಆಗಿದೆ. ಅವು…