More

    ಸಂಚಾಲಕ ಹುದ್ದೆ ಆದೇಶ ಹಿಂಪಡೆಯಲು ಆಗ್ರಹ

    ಲೋಕಾಪುರ: ಪಟ್ಟಣದ ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಅವರಿಗೆ ಪಟ್ಟಣ ಪಂಚಾಯಿತಿ ಮತ್ತು ಲೋಕಾಪುರ ಹಳೇ ಜಿಲ್ಲಾ ಪಂಚಾಯಿತಿ ವಿಭಾಗದ ಸಂಚಾಲಕ ಹುದ್ದೆ ಆದೇಶ ಹಿಂಪಡೆಯಲು ಲೋಕಾಪುರ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ನೂರಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಪತ್ರ ನೀಡಿದರು.

    ಬಿಜೆಪಿ ಹಿರಿಯ ಮುಖಂಡ ವಿ.ಎಂ. ತೆಗ್ಗಿ ಮಾತನಾಡಿ, ಲೋಕಣ್ಣ ಕತ್ತಿ ಅವರು ಅಂದಾಜು 20 ರಿಂದ 25 ವರ್ಷಗಳ ಕಾಲ ಲೋಕಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಬೂತ್‌ಮಟ್ಟದಿಂದ ಬಿಜೆಪಿ ಬಲಪಡಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ತನು, ಮನ, ಧನದಿಂದ ಪಕ್ಷದ ಅಭ್ಯರ್ಥಿಪರ ಕೆಲಸ ಮಾಡಿ ಗೆಲ್ಲಲು ಶ್ರಮಿಸಿದ್ದಾರೆ. ಅವರಿಗೆ ಈಗ ಪಕ್ಷದಿಂದ ಅನ್ಯಾಯವಾಗಿದೆ. ಜಿಲ್ಲಾಧ್ಯಕ್ಷರು ಮತ್ತು ಜಿಲ್ಲೆಯ ಮುಖಂಡರು ಈ ಅನ್ಯಾಯ ಸರಿಪಡಿಸಬೇಕೆಂದು ಮನವಿ ಮಾಡಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಆದೇಶವನ್ನು ಅತೀ ಶೀಘ್ರ ಹಿಂಪಡೆದು ಲೋಕಣ್ಣ ಕತ್ತಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದೆಂದು ಭರವಸೆ ನೀಡಿದರು.

    ಬಿಜೆಪಿ ಮುಖಂಡರಾದ ಎಂ.ಎಂ. ವಿರಕ್ತಮಠ, ಯಮನಪ್ಪ ಹೊರಟ್ಟಿ, ಲೋಕಾಪುರ ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಲಕ್ಷಾನಟ್ಟಿ ಪಿಕೆಪಿಎಸ್ ಅಧ್ಯಕ್ಷ ಅರ್ಜುನ ಕೊಪ್ಪದ, ಕಾಸಿಲಿಂಗ ಮಾಳಿ, ರಮೇಶ ಯರಗಟ್ಟಿ, ಮಾರುತಿ ರಂಗಣ್ಣವರ, ಅಯ್ಯಪ್ಪಗೌಡ ಪಾಟೀಲ, ಆನಂದ ಹವಳಖೋಡ, ಬಿ.ಎಲ್. ಬಬಲಾದಿ, ಬಿ.ಡಿ. ಚಿನಗುಂಡಿ, ಗೋಪಾಲಗೌಡ ಪಾಟೀಲ, ಮಹೇಶ ಮುಳ್ಳೂರ, ಸುರೇಶ ಸೊಕನಾದಗಿ, ಅರುಣ ಮುಧೋಳ, ದುರ್ಗಪ್ಪ ಮಾದರ, ರಮೇಶ ಪರಮೇಶ್ವರ, ಸಂತೋಷ ದೇಶಪಾಂಡೆ, ಸದಾಶಿವ ಹಗ್ಗದ, ಕೃಷ್ಣಾ ಸಾಳುಂಕಿ, ಸಂತೋಷ ಚವ್ಹಾಣ, ಬಾಬು ಸಿಂಧೆ, ಪ್ರಕಾಶ ಕರಡಿಗುಡ್ಡ, ಪಟ್ಟಣ ಪಂಚಾಯಿತಿ ಮತ್ತು ಲೋಕಾಪುರ ಹಳೇ ಜಿಲ್ಲಾ ಪಂಚಾಯಿತಿ ಸಂಬಂಧಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

    ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಹಿತದೃಷ್ಠಿಯಿಂದ ಯಾವುದೇ ಹುದ್ದೆಗೆ ಆಸೆ ಪಡದೆ ಪಕ್ಷಕ್ಕಾಗಿ ದುಡಿಯುತ್ತೇನೆ. ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಎಲ್ಲ ಪಕ್ಷದ ಹಿರಿಯರನ್ನು, ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡು ಗೆಲುವು ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ.
    ಲೋಕಣ್ಣ ಕತ್ತಿ, ಬಿಜೆಪಿ ಮುಖಂಡ, 


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts