More

    ಮತ್ತೊಂದು ಹಾರರ್​ ಚಿತ್ರದೊಂದಿಗೆ ಬಂದ ಲೋಹಿತ್​ … ಪುಷ್ಕರ್​ ಫಿಲಂಸ್​ ನಿರ್ಮಾಣ

    ಕಳೆದ ವರ್ಷ ಪ್ರಿಯಾಂಕಾ ಉಪೇಂದ್ರ ಅಭಿನಯದ ‘ದೇವಕಿ’ ಎಂಬ ಚಿತ್ರ ಮಾಡಿದ್ದ ಲೋಹಿತ್​, ಆ ನಂತರ ಕಥೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆಂಬ ಸುದ್ದಿ ಇದ್ದೇ ಇತ್ತು. ಆದರೆ, ಅವರ ನಿರ್ದೇಶನದ ಯಾವೊಂದು ಚಿತ್ರ ಸಹ ಸೆಟ್ಟೇರಿರಲಿಲ್ಲ. ಇದೀಗ ಲೋಹಿತ್​ ಕೊನೆಗೂ ಒಂದು ಚಿತ್ರವನ್ನು ಅನೌನ್ಸ್​ ಮಾಡಿದ್ದಾರೆ.

    ಲೋಹಿತ್​ ನಿರ್ದೇಶನ ಮಾಡುತ್ತಿರುವ ಚಿತ್ರದ ಹೆಸರೇನು ಗೊತ್ತಾ? ‘ಬ್ರಹ್ಮರಾಕ್ಷಸ’. ಈ ಪದವನ್ನು ಪುರಾಣಗಳಲ್ಲಿ ನೀವು ಕೇಳಿರಬಹುದು. ಈಗ ಬ್ರಹ್ಮರಾಕ್ಷಸನ ವಿಷಯವನ್ನಿಟ್ಟುಕೊಂಡೇ ಅವರೊಂದು ವಿಭಿನ್ನವಾದ ಹಾರರ್​ ಚಿತ್ರ ಮಾಡುತ್ತಿದ್ದಾರಂತೆ.

    ಇದನ್ನೂ ಓದಿ: ಅನುದಾನ ಕೊಡದಿದ್ದರೆ ಸಿಎಂ ಮನೆ ಮುಂದೆ ಉಪವಾಸ ಸತ್ಯಾಗ್ರಹ …

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿರುವ ಅವರು, ‘ಸಾಮಾನ್ಯವಾಗಿ ಹಾರರ್​ ಚಿತ್ರಗಳೆಂದರೆ, ಅಲ್ಲಿ ದೆವ್ವ, ಸೇಡು ಇರುತ್ತವೆ. ಆದರೆ, ಇದೇ ಮೊದಲ ಬಾರಿಗೆ ಪುರಾಣವನ್ನಾಧರಿಸಿ ಒಂದು ಹಾರರ್​ ಚಿತ್ರ ಮಾಡುತ್ತಿದ್ದೇವೆ. ಈ ತರಹದ ಚಿತ್ರಗಳು ಇದುವರೆಗೂ ಬಂದಿಲ್ಲ. ಬ್ರಹ್ಮರಾಕ್ಷಸ ಎಂದರೆ ಅವನನ್ನು ಸಂಹಾರ ಮಾಡೋಕೆ ಆಗಲ್ಲ. ಈ ವಿಷಯವನ್ನಿಟ್ಟುಕೊಂಡು, ಇವತ್ತಿನ ಸಂದರ್ಭಕ್ಕೆ ಒಗ್ಗಿಸಿ ಕೃಎ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.

    ಇನ್ನು ಈ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎಂಬ ವಿಷಯವನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ವಿವರವಾಗಿ ಹೇಳುವುದಾಗಿ ಹೇಳುತ್ತಾರೆ. ‘ಸದ್ಯಕ್ಕೆ ಸ್ಕ್ರಿಪ್ಟಿಂಗ್​ ಕೆಲಸಗಳು ಮುಗಿದಿದೆ. ಇನ್ನು ಕಲಾವಿದರು ಮತ್ತು ತಂತ್ರಜ್ಱರ ಆಯ್ಕೆ ನಡೆಯುತ್ತಿದೆ. ಒಂದಿಷ್ಟು ಹೆಸರುಗಳನ್ನು ಶಾರ್ಟ್​ಲಿಸ್ಟ್​ ಮಾಡಿಟ್ಟುಕೊಂಡಿದ್ದೇನೆ. ಬಹುಶಃ ಈ ತಿಂಗಳ ಕೊನೆಗೆ ಎಲ್ಲವೂ ಸಂಪೂರ್ಣವಾಗಿ, ಮುಂದಿನ ತಿಂಗಳನಿಂದ ಚಿತ್ರ ಪ್ರಾರಂಭಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ ಲೋಹಿತ್​.

    ಇದನ್ನೂ ಓದಿ: ಬಹುವರ್ಷಗಳ ಕನಸನ್ನು ಈಡೇರಿಸಿಕೊಂಡ ನಟಿ ಮಾನ್ವಿತಾ

    ಅಂದಹಾಗೆ, ಈ ಚಿತ್ರವನ್ನು ಪುಷ್ಕರ್​ ಫಿಲಂಸ್​ನಡಿ ಪುಷ್ಕರ್​ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ, ‘ಭೀಮಸೇನ ನಳಮಹಾರಾಜ’ ಚಿತ್ರವನ್ನು ಮುಗಿಸಿರುವ ಅವರು ಅದನ್ನು ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸುತ್ತಿದ್ದಾರೆ. ಇನ್ನು ‘ಟೆನ್​’ ಚಿತ್ರದ ಕೆಲಸಗಳು ಮುಗಿದಿದ್ದು, ಅದು ಸಹ ಬಿಡುಗಡೆಯಾಗಬೇಕಿದೆ. ಅದರ ಜತೆಗೆ, ‘ಅವತಾರ್​ ಪುರುಷ’ ಮತ್ತು ‘ಚಾರ್ಲಿ 777’ ಚಿತ್ರಗಳ ಚಿತ್ರೀಕರಣ ಬಾಕಿ ಇದ್ದರೆ, ‘ಸಪ್ತ ಸಾಗರದಾಚೆ ಎಲ್ಲೋ’ ಎಂಬ ಚಿತ್ರದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ.

    ಈ ಮಧ್ಯೆ, ‘ಬ್ರಹ್ಮರಾಕ್ಷಸ’ ಚಿತ್ರವನ್ನು ಪುಷ್ಕರ್​ ನಿರ್ಮಿಸುವುದಕ್ಕೆ ಮುಂದಾಗಿದ್ದು, ಸೆಪ್ಟೆಂಬರ್​ನಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

    ಮತ್ತೆ ಜತೆಯಾಗಿ ನಟಿಸ್ತಾರಂತೆ ಶಾರೂಖ್​, ದೀಪಿಕಾ … ಯಾವ ಚಿತ್ರ? ಏನು ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts