More

    VIDEO| ಮಿಡತೆ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಸಿನಿಮಾ ಇದು!

    ನವದೆಹಲಿ: ಕರೊನಾ ವೈರಸ್​ ಸಂಕಷ್ಟದ ನಡುವೆ ಹಲವು ರಾಜ್ಯಗಳಲ್ಲಿ ಹಾವಳಿ ಇಟ್ಟಿರುವ ಮಿಡತೆಗಳು ಕರ್ನಾಟಕಕ್ಕೂ ಪ್ರವೇಶಿಸಿ ರೈತರನ್ನು ಚಿಂತೆಗೆ ದೂಡಿದೆ. ಇದರ ನಡುವೆ 2019ರಲ್ಲಿ ಬಿಡುಗಡೆಯಾದ ತಮಿಳು ನಟ ಸೂರ್ಯ ಅಭಿಯನದ ಕಾಪ್ಪನ್​ ಚಿತ್ರವನ್ನು ಮಿಡತೆಗಳ ದಾಳಿ ಮರಳಿ ಚರ್ಚೆಗೆ ತಂದಿವೆ.

    ಇದನ್ನೂ ಓದಿ: ಹತ್ತೇ ನಿಮಿಷಗಳಲ್ಲಿ ಸಿಗುತ್ತೆ ಉಚಿತ ಪ್ಯಾನ್ ಕಾರ್ಡ್!

    ಹಿಂದೆ ನಡೆದ ಹಾಗೂ ಮುಂದೆ ನಡೆಯಬಹುದಾದ ಘಟನಾವಳಿಗಳನ್ನು ಸಿನಿಮಾಗಳಲ್ಲಿ ತೋರಿಸಿರುವುದನ್ನು ನಾವು ನೋಡಿದ್ದೇವೆ. ಅದರಂತೆ ಕರೊನಾ ವೈರಸ್​ ಹರಡಲು ಆರಂಭವಾದ ಸಂದರ್ಭದಲ್ಲೂ ಇದೇ ಸೂರ್ಯ ಅಭಿನಯದ ಏಳಂ ಅರಿವು ಚಿತ್ರ ಮುನ್ನೆಲೆಗೆ ಬಂದಿತ್ತು. ಇದೀಗ ಕಾಪ್ಪನ್​ ಚಿತ್ರದ ಒಂದು ದೃಶ್ಯಕ್ಕೂ ಮಿಡತೆಗಳ ದಾಳಿಗೂ ಸಾಮಿಪ್ಯವಿದೆ ಎಂದು ನೆಟ್ಟಿಗರು ವಿಡಿಯೋ ತುಣುಕೊಂದನ್ನು ವೈರಲ್​ ಮಾಡಿದ್ದಾರೆ.

    ಕಾಪ್ಪನ್​ ಚಿತ್ರವನ್ನು ಕೆ.ವಿ. ಆನಂದ್​ ಅವರು ನಿರ್ದೇಶಿಸಿದ್ದು, ಮಿಡತೆ ದಾಳಿಗಳ ಬಗ್ಗೆ ಮಾತನಾಡಿ, ನನ್ನ ಕಲ್ಪನೆಯನ್ನು ಕೊಂಡಾಡಿ ಅನೇಕ ಕರೆಗಳು ನನಗೆ ಹರಿದುಬರುತ್ತಿವೆ. ಆದರೆ ನನಗೆ ಬೇಸರ ಎನಿಸುತ್ತಿದೆ. ಮಿಡತೆಗಳ ದಾಳಿ ದೇಶದಲ್ಲಿ ಭಾರಿ ವಿನಾಶಕ್ಕೆ ಕಾರಣವಾಗಲಿದೆ. ಮಿಡತೆಗಳು ಹೆಚ್ಚಾಗಂತೆ ತಡೆಯಲು ಅನೇಕ ಉಪಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.

    ಇದನ್ನೂ ಓದಿ: ಪ್ರಧಾನಿ ಮೋದಿ 2.0 ಸರ್ಕಾರದ ಮೊದಲ ವಾರ್ಷಿಕೋತ್ಸವಕ್ಕೆ ಬಿಜೆಪಿ ಮೆಗಾ ಪ್ಲ್ಯಾನ್​!

    ಸೂರ್ಯ ಅಭಿನಯದ ಮಾತ್ರನ್​ ಸಿನಿಮಾ ನಿರ್ದೇಶನಕ್ಕೆ ಮಡಗಾಸ್ಕರ್​ಗೆ ಹೋಗಿದ್ದೆವು. ಈ ವೇಳೆ ಕಾರಿನಲ್ಲಿ ತೆರಳುವಾಗ ಸಾವಿರಾರು ಮಿಡತೆಗಳು ದಾಳಿ ಮಾಡಿದ್ದವು. ಇದರಿಂದ ನಮಗೆ ಕಾರು ಚಾಲನೆ ಮಾಡುವುದು ಸಹ ಕಷ್ಟವಾಗಿತ್ತು. ಕೆಲವು ಸಮಯ ಕಾರು ನಿಲ್ಲಿಸಿ ಮಿಡತೆಗಳು ಹೋದ ಮೇಲೆ ಅಲ್ಲಿಂದ ಹೊರಟೆವು. ಮಿಡತೆ ದಾಳಿ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದೆವು. ಇದನ್ನೇ ಕಾಪ್ಪನ್​ ಚಿತ್ರದಲ್ಲಿ ಬಳಸಿಕೊಂಡೆ ಎನ್ನುತ್ತಾರೆ ಕೆ.ವಿ. ಆನಂದ್​.

    ಅಂದಹಾಗೆ ಮಿಡತೆಗಳ ದಂಡು ಅಪಾರ ಪ್ರಮಾಣದ ಬೆಳೆಯನ್ನು ತಿಂದು ನಾಶ ಮಾಡಲಿದ್ದು, ಈಗಾಗಲೇ ಅನೇಕ ರಾಜ್ಯಗಳು ದಾಳಿಗೆ ತತ್ತರಿಸಿವೆ. ತಮ್ಮ ಗಾತ್ರದಷ್ಟೇ ಆಹಾರ ಸೇವಿಸುವ ಮಿಡತೆಗಳ ದಂಡು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. (ಏಜೆನ್ಸೀಸ್​)

    VIDEO| ಸಾವಿಗೂ ನಾಲ್ಕು ದಿನದ ಹಿಂದೆ ಮೆಬಿನಾ ಆಡಿದ್ದ ಮಾತು ನಿಜಾ ಆಗೋಯ್ತಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts