More

    ಮತ್ತೊಮ್ಮೆ ಸಾಮಾನ್ಯರ ಪಾಲಿನ ದೇವರಾದ ಸೂರ್ಯ: ಇದಲ್ಲವೇ ನಟನಿಗೆ ಇರಬೇಕಾದ ಸಾಮಾಜಿಕ ಕಳಕಳಿ

    ಚೆನ್ನೈ: ಹೀರೋಯಿಸಂ, ಓವರ್​ ಬಿಲ್ಡಪ್​ ಹಾಗೂ ಹಿಂಸೆಯನ್ನೇ ಹೆಚ್ಚು ತೋರಿಸುವ ಸಿನಿಮಾಗಳು ಭರಪೂರ ಮನರಂಜನೆ ನೀಡಿದರೂ ಕೂಡ ಅದರ ಸಾಮಾಜಿಕ ಬದ್ಧತೆ ಮಾತ್ರ ಶೂನ್ಯ. ಅಂತಹ ಚಿತ್ರಗಳು ಸಮಾಜಕ್ಕೂ ಮಾರಕ ಎನ್ನುವುದರಲ್ಲಿ ಸಂಶಯವೇ ಇಲ್ಲ. ಒಂದು ಚಿತ್ರ ಎಷ್ಟು ದುಡ್ಡು ಮಾಡಿತು ಎನ್ನುವುದಕ್ಕಿಂತ ಸಮಾಜಕ್ಕೆ ಅದರಿಂದ ಸಿಕ್ಕ ಕೊಡುಗೆ ಏನು ಎಂಬುದು ಕೂಡ ಗಣನೆಗೆ ಬರುತ್ತದೆ. ಈ ವಿಚಾರದಲ್ಲಿ ತಮಿಳು ನಟ ಸೂರ್ಯ ವಿಶೇಷವಾಗಿ ನಿಲ್ಲುತ್ತಾರೆ.

    ಸ್ಟಾರ್​ ಗಿರಿಯನ್ನು ಪಕ್ಕಕ್ಕಿಟ್ಟು ಕಮರ್ಷಿಯಲ್​ ಸಿನಿಮಾಗಳಲ್ಲಿ ಮಾತ್ರ ನಟಿಸದೇ ಸಾಮಾಜಿಕ ಸಂದೇಶ ಇರುವ ಸಿನಿಮಾಗಳನ್ನು ನೀಡುತ್ತಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಸೂರ್ಯ ಜ್ಯೋತಿಕಾ ಅಗರಮ್​ ಫೌಂಡೇಶನ್​ ಸ್ಥಾಪನೆ ಮಾಡಿದ್ದು, ಅದರಿಂದ ಹಿಂದುಳಿದ ಜನರ ಉನ್ನತಿಗೆ ಮತ್ತು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಒಂದೆಡೆ ಸಿನಿಮಾಗಳಲ್ಲಿ ಬಿಜಿಯಾಗಿದ್ದರೂ ಸಮಾಜಮುಖಿ ಕೆಲಸವನ್ನು ಮಾತ್ರ ಎಂದಿಗೂ ನಿಲ್ಲಿಸಿಲ್ಲ. ಕರೊನಾ ಸಂದರ್ಭದಲ್ಲೂ ತಮ್ಮ ಫೌಂಡೇಶನ್​ನಿಂದ ಸಾಕಷ್ಟು ನೆರವಿನ ಹಸ್ತ ಚಾಚಿದ್ದಾರೆ. ಇದೀಗ ಮತ್ತೊಮ್ಮೆ ತಮ್ಮ ದೊಡ್ಡತನವನ್ನು ಸೂರ್ಯ ಮೆರೆದಿದ್ದಾರೆ.

    ಕಳೆದ ಎರಡು ವರ್ಷಗಳಲ್ಲಿ ಬಿಡುಗಡೆಯಾದ ಸೂರರೈ ಪೊಟ್ಟರು, ಜೈ ಭೀಮ್​ ಮತ್ತು ಎತ್ತರುಕ್ಕುಮ್​ ಥುನಿಂದವನ್​ ಈ ಮೂರು ಚಿತ್ರಗಳಲ್ಲೂ ಸ್ಟಾರ್​ ಪಟ್ಟವನ್ನು ಪಕ್ಕಕ್ಕಿಟ್ಟು ಸಾಮಾಜಿಕ ಸಂದೇಶವನ್ನು ನೀಡುವ ಮೂಲಕ ಸೂರ್ಯ ಜನರಿಗೆ ಹತ್ತಿರವಾಗಿದ್ದಾರೆ. ಇದೀಗ ತಮ್ಮ ಮುಂದಿನ ಚಿತ್ರದಲ್ಲೂ ಸಾಮಾಜಿಕ ಕಳಕಳಿ ಇರುವ ಅಂಶವನ್ನೇ ಆಯ್ದುಕೊಂಡಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ಮೀನುಗಾರನ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ.

    ಈ ಹೊಸ ಚಿತ್ರವನ್ನು ಖ್ಯಾತ ನಿರ್ದೇಶಕ ಬಾಲಾ ಅವರು ನಿರ್ದೇಶನ ಮಾಡುತ್ತಿದ್ದು, ಕೃತಿ ಶೆಟ್ಟಿ ಸೂರ್ಯಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಸದ್ಯ ಚಿತ್ರದ ಶೂಟಿಂಗ್​ ಕನ್ಯಾಕುಮಾರಿಯ ಕಡಲ ತೀರದಲ್ಲಿ ನಡೆಯುತ್ತಿದೆ. ಶೂಟಿಂಗ್​ಗಾಗಿ ಬೃಹತ್​ ಸೆಟ್​ ಅನ್ನು ನಿರ್ಮಾಣ ಮಾಡಲಾಗಿದೆ. ಅದು ಮೀನುಗಾರರ ಗುಡಿಸಲಿನ ಸೆಟ್​ ಆಗಿದೆ. ಉತ್ತಮ ಗುಣಮಟ್ಟದಲ್ಲಿ ಸೆಟ್​ ಅನ್ನು ನಿರ್ಮಾಣ ಮಾಡಲಾಗಿದ್ದು, ಶೂಟಿಂಗ್​ ಪೂರ್ಣಗೊಂಡ ಬಳಿಕ ಆ ಗುಡಿಸಲಿನ ಸೆಟ್​ಗಳನ್ನು ಮೀನುಗಾರರಿಗೆ ಬಿಟ್ಟುಕೊಡಲು ತೀರ್ಮಾನ ಮಾಡಿದ್ದಾರೆ.

    ಅಂದಹಾಗೆ ಈ ಚಿತ್ರದ ನಿರ್ಮಾಪಕರು ಸೂರ್ಯ ಅವರೆ. ಶೂಟಿಂಗ್​ಗಾಗಿ ಉತ್ತಮ ಗುಣಮಟ್ಟದಲ್ಲಿ ಸೆಟ್​ ನಿರ್ಮಾಣ ಮಾಡಲಾಗಿದೆ. ಗುಡಿಸಲು ಸೆಟ್​ ಆದರೂ ಬಹಳ ಸೊಗಸಾಗಿ ಮತ್ತು ಬಲವಾಗಿದ್ದು, ಉತ್ತಮ ಜೀವನಕ್ಕೆ ಅನುಕೂಲವಾಗಿದೆ. ಇದೀಗ ಸೂರ್ಯ ಅವರ ಈ ನಿರ್ಧಾರವನ್ನು ಕೇಳಿ ಜನರು ಮತ್ತೊಮ್ಮೆ ಸೂರ್ಯ ಅವರಿಗೆ ಜೈಕಾರ ಮೊಳಗಿಸಿದ್ದಾರೆ. (ಏಜೆನ್ಸೀಸ್​)

    ಪ್ರೇಕ್ಷಕರು ಕೆಜಿಎಫ್​ 2 ಅನ್ನೇ ಮರೆತುಬಿಡಬೇಕು.. ಪುಷ್ಪ ನಿರ್ದೇಶಕ ಸುಕುಮಾರ್ ಹಿಂದೆ ಬಿದ್ದ ಬನ್ನಿ ಫ್ಯಾನ್ಸ್​​

    ಧ್ಯಾನದಿಂದ ಮನಸನ್ನು ಚಾರ್ಜ್ ಮಾಡಿಕೊಳ್ಳಿ..; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​​ನಲ್ಲಿ ನಟಿ ಪ್ರೇಮಾ..

    ಕೆಜಿಎಫ್​-2 ಮಾಡಿದ ನಿಮ್ಗೆ ನಾಚಿಕೆಯಾಗ್ಬೇಕು, ಟಾಪ್ ಕ್ಲಾಸ್ ಲದ್ದಿ ಚಿತ್ರ, 3 ಗಂಟೆಯ ಟಾರ್ಚರ್​ ಎಂದ ವಿಮರ್ಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts