More

    ಚೀನಾದಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಿದ ಮಹತ್ವದ ನಿರ್ಧಾರವೇ ನಮ್ಮನ್ನೂ ಕಾಪಾಡಲಿದೆ

    ವುಹಾನ್​: ಮಹಾಮಾರಿ ಕರೊನಾ ಸೋಂಕು ಹರಡುವುದನ್ನು ಕಟ್ಟಿಹಾಕಲು ಲಾಕ್​ಡೌನ್​ ಮತ್ತು ಸಂಚಾರ ನಿರ್ಬಂಧಗಳು ತುಂಬಾ ಪರಿಣಾಮಕಾರಿ ಎಂಬುದನ್ನು ಚೀನಾದ ಸಂಶೋಧನೆಯೊಂದು ವಿವರಿಸಿದೆ.

    ಯುನೈಟೆಡ್​ ಕಿಂಗ್​ಡಮ್​ನ ಆಕ್ಸ್​​ಫರ್ಡ್​ ವಿವಿ ಮತ್ತು ಮೆಸಾಚೂಸೆಟ್ಸ್​ನ ಬೋಸ್ಟನ್​ ಈಶಾನ್ಯ ವಿವಿಯ ಸಂಶೋಧಕರು ಚೀನಾದಲ್ಲಿ ನಡೆಸಿದ ಅಧ್ಯಯನದಿಂದ ಮಹತ್ವದ ಅಂಶಗಳು ಕಂಡುಬಂದಿದೆ. ಕರೊನಾ ವೈರಸ್​ ಸ್ಪೋಟಗೊಂಡ ಚೀನಾದ ವುಹಾನ್​ ನಗರದಲ್ಲಿ ಲಾಕ್​ಡೌನ್​ ಮತ್ತು ಸಂಚಾರ ನಿರ್ಬಂಧ ತಡವಾದ್ದರಿಂದ ಸೋಂಕು ಹೆಚ್ಚಾಗಿ ಪರಿಣಾಮ ಬೀರಿತು ಎಂದು ತಿಳಿದುಬಂದಿದೆ.

    ಯಾವಾಗ ಲಾಕ್​ಡೌನ್​ ಮತ್ತು ಸಂಚಾರ ನಿರ್ಬಂಧಗಳನ್ನು ಹೇರಲಾಯಿತು ವುಹಾನ್​ನಿಂದ ಹೊರಭಾಗದಲ್ಲಿ ಕರೊನಾ ಪ್ರಕರಣಗಳು 515 ರಿಂದ 39ಕ್ಕೆ ಅಂದರೆ ಶೇ. 92 ರಷ್ಟು ಕುಸಿಯಿತು ಎಂದು ತಿಳಿಸಿದ್ದಾರೆ. ಹುಬೇ ಪ್ರಾಂತ್ಯದ ವುಹಾನ್​ ನಗರದಲ್ಲಿ ಸಂಚಾರ ನಿರ್ಬಂಧಗಳನ್ನು ಹೇರಿ, ಸೋಂಕಿತ ಪ್ರಕರಣಗಳು ಜಾಡನ್ನು ಹಿಡಿದಿದ್ದು ಕರೊನಾ ತಗ್ಗಲು ನೆರವಾಯಿತು ಎಂದು ಹೇಳಿದ್ದಾರೆ.

    ಜನವರಿ 31ರಿಂದ ವುಹಾನ್​ನಲ್ಲಿ ಲಾಕ್​ಡೌನ್​ ಮಾಡಲಾಯಿತು. ಯಾರನ್ನೂ ಕೂಡ ನಗರದಿಂದ ಹೊರ ಹೋಗಲು ಬಿಡಲಿಲ್ಲ. ವೈರಸ್​ ಪತ್ತೆಯಾಗಿ ನಾಲ್ಕು ವಾರಗಳ ಬಳಿಕ ಚೀನಾದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಅಷ್ಟರಲ್ಲಾಗಲೇ ಕೆಲವರು ಕರೊನಾ ಮೃತ್ಯುಕೂಪಕ್ಕೆ ತುತ್ತಾಗಿದ್ದರು. ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಮಾನವ ವಲಸೆ ಪ್ರಕರಣಗಳು ಕಂಡುಬಂದಿರುವುದು ವೈರಸ್​ ಹರಡಲು ಪ್ರಮುಖ ಕಾರಣವಾಗಿದೆ. ಹುಬೇ ಪ್ರಾಂತ್ಯದ ಬಳಿಕ ಇನ್ನಿತರ ನಗರಗಳಿಗೂ ಕರೊನಾ ಹರಡಿದಾದರೂ ಅದನ್ನು ಅಷ್ಟೇ ಬೇಗ ತಡೆಹಿಡಿಯಲಾಯಿತು.

    ಜರ್ನಲ್​ ಸೈನ್ಸ್​ನಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿಯಲ್ಲಿ ಚೀನಾ ಟೆಕ್​ ಕಂಪನಿ ಬೈಯ್ಡು ನೀಡಿರುವ ಜಿಯೋಲೊಕೇಶನ್​​ ಡಾಟಾವನ್ನು ಪರಿಣಿತರ ತಂಡವೊಂದು ವಿಶ್ಲೇಷಿಸಿದೆ. ಪರಿಣಿತರು ಹೇಳುವಂತೆ ವೈರಸ್​ನ ಸರಾಸರಿ ಕಾವು ಕಾಲಾವಧಿಯು ಐದು ದಿನಗಳಷ್ಟು ಕಡಿಮೆ ಇರುವುದರಿಂದ ಲಾಕ್​ಡೌನ್​ ನಂತರವೂ ವುಹಾನ್​ನಲ್ಲಿ ಸಂಚಾರ ನಿರ್ಬಂಧ ಒಂದು ವಾರಗಳ ಕಾಲ ಯಾವುದೇ ಫಲವನ್ನು ನೀಡಲಿಲ್ಲ.

    ಜನವರಿ 31ಕ್ಕೂ ಮುಂಚೆಯೇ ಹುಬೇ ಹೊರ ಭಾಗದಿಂದ ಬಹುತೇಕ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 515 ಮಂದಿ ವುಹಾನ್​ಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಲಾಕ್​ಡೌನ್​ ಮುಂಚೆಯೇ ಅವರಲ್ಲಿ ರೋಗದ ಲಕ್ಷಣಗಳು ಆರಂಭವಾಯಿತು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

    ಜನವರಿ 31ರ ನಂತರ ಕೇವಲ 39 ಪ್ರಕರಣಗಳು ಮಾತ್ರ ವುಹಾನ್​ಗೆ ಭೇಟಿ ನೀಡಿದ್ದ ದಾಖಲೆಯಿದ್ದು, ಅವರಲ್ಲಿ ಅವಧಿಗೂ ಮುಂಚೆಯೇ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಹೀಗಾಗಿ ಲಾಕ್​ಡೌನ್​ನಿಂದಾಗಿ ವೈರಸ್​ ಹರಡುವಿಕೆಯು ಗಣನೀಯವಾಗಿ ಕಡಿಮೆಯಾಯಿತು ಎಂದು ಅಧ್ಯಯನ ತಿಳಿಸಿದೆ. (ಏಜೆನ್ಸೀಸ್​)

    ಹೆಚ್ಚು ಉಪ್ಪಿನಾಂಶ ಆಹಾರ ಸೇವಿಸಿದರೆ ಕರೊನಾದಿಂದ ಬಚಾವ್​ ಆಗುವುದು ಕಷ್ಟ: ಸಂಶೋಧನಾ ವರದಿ

    ಲಾಕ್‌ಡೌನ್‌ ಲಕ್ಷ್ಮಣ ರೇಖೆಯನ್ನು ದಾಟುವಿರಾ?- ಕಾನೂನು ಸಂಕಷ್ಟದ ಸುಳಿಗೆ ಬೀಳುವುದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts