More

  ಕರೊನಾದಿಂದಾಗಿ ಶಿರಡಿ ಸಾಯಿಬಾಬಾ ಟ್ರಸ್ಟ್‌ಗೆ ಪ್ರತಿದಿನ ಒಂದೂವರೆ ಕೋಟಿ ರೂ. ನಷ್ಟ!

  ಶಿರಡಿ: ಕರೊನಾ ಲಾಕ್‌ಡೌನ್‌ನಿಂದಾಗಿ ಮಹಾರಾಷ್ಟ್ರದ ಶಿರಡಿಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್‌ಗೆ ಪ್ರತಿದಿನ ಸುಮಾರು ಒಂದೂವರೆ ಕೋಟಿ ರೂಪಾಯಿ ನಷ್ಟವಾಗುತ್ತಿದೆ.

  ಮಾರ್ಚ್ 17ರಿಂದ ಮೇ 3ರವರೆಗೆ ಶಿರಡಿ ಸಾಯಿಬಾಬಾ ಮಂದಿರ ಮುಚ್ಚಿದ್ದರೂ ಈ ಅವಧಿಯಲ್ಲಿ ಟ್ರಸ್ಟ್‌ಗೆ ಎರಡೂವರೆ ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ. ಅಂದರೆ ದಿನಕ್ಕೆ ಆರು ಲಕ್ಷ ರೂಪಾಯಿ ಬಂದಂತಾಗಿದೆ.

  ಸಾಮಾನ್ಯ ಸಂದರ್ಭದಲ್ಲಾದರೆ ಸಾಯಿಬಾಬಾ ಮಂದಿರ ಚಿನ್ನಬೆಳ್ಳಿಯ ಕಾಣಿಕೆಗಳನ್ನೂ ಒಳಗೊಂಡು ವರ್ಷಕ್ಕೆ 600 ಕೋಟಿ ರೂಪಾಯಿ ಗಳಿಸುತ್ತದೆ. ಅಂದರೆ ಪ್ರತಿದಿನ 1.64 ಕೋಟಿ ರೂಪಾಯಿ ಗಳಿಸುತ್ತದೆ. ಹೀಗಾಗಿ ಈಗಿನ ಪ್ರತಿದಿನದ ನಷ್ಟವನ್ನು ಸುಮಾರು ಒಂದೂವರೆ ಕೋಟಿ ರೂ. ಎಂದು ಲೆಕ್ಕ ಹಾಕಲಾಗಿದೆ.

  ಇದನ್ನೂ ಓದಿ ರೌಡಿಶೀಟರ್ ಜತೆ ಜಬರ್ದಸ್ತ್ ಎಣ್ಣೆ ಪಾರ್ಟಿ ಮಾಡಿದ ಸಬ್ ಇನ್ಸ್‌ಪೆಕ್ಟರ್!

  ಈಗಿರುವಂತೆಯೇ ಬರುವ ಜೂನ್ ತಿಂಗಳವರೆಗೂ ಕರೊನಾ ಲಾಕ್‌ಡೌನ್ ಮುಂದುವರಿದರೆ ಶಿರಡಿ ಟ್ರಸ್ಟ್‌ಗೆ ಒಟ್ಟು 150 ಕೋಟಿ ರೂ. ನಷ್ಟವಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ನಷ್ಟದಿಂದಾಗಿ ಟ್ರಸ್ಟ್ ನಡೆಸುವ ಸಾಮಾಜಿಕ ಕಾರ್ಯಗಳಿಗೆ ತೊಂದರೆ ಆಗಲಿದೆ.

  ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನ ಮುಚ್ಚಲಾಗಿದ್ದು ಆನ್‌ಲೈನ್ ದರ್ಶನಂ ಮೂಲಕ ದಿನಕ್ಕೆ ಎಂಟರಿಂದ ಒಂಬತ್ತು ಭಕ್ತರಷ್ಟೆ ಭೇಟಿ ನೀಡುತ್ತಿದ್ದಾರೆ. ಮಾರ್ಚ್ 17ರಿಂದ ಮೇ 3ರವರೆಗಿನ ಅವಧಿಯಲ್ಲಿ ಆನ್‌ಲೈನ್ ಮೂಲಕ 2.53 ಕೋಟಿ ರೂ. ದೇಣಿಗೆ ಬಂದಿದೆ. ಸಾಮಾನ್ಯವಾಗಿ ಪ್ರತಿ ದಿನ 40-50 ಸಾವಿರ ಭಕ್ತರು ಭೇಟಿ ನೀಡುತ್ತಾರೆ. ಅವರಿಂದ ಒಂದು ಕೋಟಿ ರೂ.ಗಿಂತಲೂ ಹೆಚ್ಚಿನ ಹಣ ನಗದು ದೇಣಿಗೆಯ ರೂಪದಲ್ಲಿ ಬರುತ್ತಿರುತ್ತದೆ. ಲಡ್ಡು ಪ್ರಸಾದ ಹಂಚಿಕೆಯಿಂದ ಪ್ರತಿ ವರ್ಷ ಕನಿಷ್ಠ 40 ಕೋಟಿ ರೂ. ಆದಾಯ ಬರುತ್ತದೆ.

  ಇದರಿಂದಾಗಿ ಟ್ರಸ್ಟ್‌ಗೆ ಹಣದ ಕೊರತೆ ಉಂಟಾಗಿದೆ. ಟ್ರಸ್ಟ್ ನಡೆಸುವ ಜನೋಪಕಾರಿ ಕೆಲಸಗಳಲ್ಲಿ ಸಾವಿರಾರು ಜನರಿಗೆ ಪ್ರತಿ ವರ್ಷ ಉಚಿತ ಹೃದ್ರೋಗ ಚಿಕಿತ್ಸೆ, ಡಯಾಲಿಸಿಸ್ ಮುಂತಾದವು ಸೇರಿವೆ. ಈ ರೀತಿಯ ವೈದ್ಯಕೀಯ ವೆಚ್ಚಗಳಿಗಾಗಿಯೇ ಟ್ರಸ್ಟ್ ಸುಮಾರು ನೂರು ಕೋಟಿ ರೂ.ಗಿಂತ ಹೆಚ್ಚು ಹಣವನ್ನು ವಿನಿಯೋಗಿಸುತ್ತದೆ. ಬಡ ಮಕ್ಕಳ ಶಿಕ್ಷಣಕ್ಕಾಗಿ 15 ಕೋಟಿ ರೂ. ವ್ಯಯವಾಗುತ್ತದೆ. ಹಗಲು ರಾತ್ರಿಯೆನ್ನದೆ ಸದಾ ಕಾಲವೂ ದೇವಸ್ಥಾನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮತ್ತು ಇತರ ಅಗತ್ಯ ಕೆಲಸಗಳಿಗಾಗಿ 8 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. ಇದಕ್ಕಾಗಿ ಸುಮಾರು 160 ಕೋಟಿ ರೂ. ಪ್ರತಿ ವರ್ಷ ವೆಚ್ಚವಾಗುತ್ತದೆ.

  ಇದನ್ನೂ ಓದಿ ಹೊಂಗಸಂದ್ರದ ಡೆಲಿವರಿ ಹುಡುಗ ಕರೊನಾ ಸೂಪರ್‌ಸ್ಪ್ರೆಡರ್ ಆಗುವ ಆತಂಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts