More

    ಹಸಿವಿನಿಂದ ಕಂಗೆಟ್ಟ ಮಂಗಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದರು

    ರಾಮನಗರ: ಪ್ರವಾಸಿ ತಾಣಗಳಲ್ಲಿ ಅಹಾರಕ್ಕಾಗಿ ಪ್ರವಾಸಿಗರನ್ನೇ ಅವಲಂಬಿಸಿದ್ದ ಮಂಗಗಳು ಲಾಕ್​ಡೌನ್​ ಹಿನ್ನೆಲೆಯಲ್ಲಿ ಆಹಾರ ಇಲ್ಲದೆ ಪರಿತಪಿಸುತ್ತಿವೆ.

    ಆಹಾರ ಇಲ್ಲದೆ ಮಂಗಗಳು ದುಸ್ಥಿತಿಯಲ್ಲಿರುವುದನ್ನು ಗಮನಿಸಿದ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್​ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲೆಯ ಆಯ್ದ ಪ್ರವಾಸಿ ತಾಣಗಳಲ್ಲಿರುವ ಮಂಗಗಳಿಗೆ ಆಹಾರ ನೀಡುತ್ತಿದ್ದಾರೆ.

    ಕೆಂಗಲ್​, ಮುತ್ತತ್ತಿ, ಸಾವನದುರ್ಗ, ರೇವಣಸಿದ್ದೇಶ್ವರಬೆಟ್ಟಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಮಂಗಗಳಿಗೆ ಬಾಳೇಹಣ್ಣು, ಬನ್​ ಹಾಗೂ ಬಿಸ್ಕೆಟ್​ ನೀಡುತ್ತಿದ್ದಾರೆ.

    ಪ್ರವಾಸಿ ತಾಣದಲ್ಲಿರುವ ಬೀಡಾಡಿ ದನ, ನವಿಲುಗಳಿಗೂ ಆಹಾರ ಸಿಗುವಂತೆ ನೋಡಿಕೊಂಡಿದ್ದಾರೆ.
    ಸಂಘ ಸಂಸ್ಥೆಗಳು ಕೂಡ ಕೈಜೋಡಿಸಬೇಕು ಎಂದು ರುದ್ರೇಶ್​ ಮನವಿ ಮಾಡಿದ್ದಾರೆ.

    ಮತ್ತಿತರ ಪ್ರಾಣಿಗಳಿಗೆ ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ. ಯಾವುದೇ ಸಂಘಸಂಸ್ಥೆಗಳು ಪ್ರಾಣಿಗಳ ಹಸಿವು ಇಂಗಿಸಲು ಮುಂದಾಗುವಂತೆಯೂ ರುದ್ರೇಶ್ ಮನವಿ ಮಾಡಿದ್ದಾರೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವರದೇಗೌಡ ಹಾಗೂ ತಂಡ ಇದಕ್ಕೆ ಸಾಥ್​ ನೀಡಿದೆ.

    ಕ್ಯಾನ್ಸರ್​ ಪೀಡಿತ ಪತ್ನಿಯನ್ನು ಕೂರಿಸಿಕೊಂಡು 140 ಕಿ.ಮೀ.ದೂರ ಬೈಸಿಕಲ್​ ತುಳಿದ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts