More

    ಕರ್ನಾಟಕದ ಬೆನ್ನಲ್ಲೇ ನೆರೆ ರಾಜ್ಯವೂ ಲಾಕ್​! ಮೇ 3ರವರೆಗೆ ಕಠಿಣ ನಿಯಮ ಜಾರಿ

    ಪಣಜಿ: ಕರ್ನಾಟಕದಲ್ಲಿ ಲಾಕ್​ಡೌನ್​ ಜಾರಿಯಾದ ಬೆನ್ನಲ್ಲೇ ಇದೀಗ ನೆರೆ ರಾಜ್ಯದಲ್ಲೂ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಗೋವಾದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ಲಾಕ್​ಡೌನ್​ ಘೋಷಿಸಿ ಆದೇಶ ಹೊರಡಿಸಲಾಗಿದೆ.

    ರಾಜ್ಯದಲ್ಲಿ ಏಪ್ರಿಲ್​ 29ರ ಸಂಜೆ 7 ಗಂಟೆಯಿಂದ ಮೇ 3ರ ಬೆಳಗ್ಗೆಯವರೆಗೂ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಈ ಸಮಯದಲ್ಲಿ ಅಗತ್ಯ ಸಾಮಾಗ್ರಿ ಅಂಗಡಿಗಳು ಹಾಗೂ ಕೈಗಾರಿಕೆಗಳು ಕೆಲಸ ನಿರ್ವಹಿಸಬಹುದು. ವೈದ್ಯಕೀಯ ವಲಯ ಎಂದಿನಂತೆ ಕೆಲಸ ಮಾಡಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ. ಬಾರ್, ಪಬ್​, ಕ್ಯಾಸಿನೋ ಸೇರಿ ಎಲ್ಲ ರೀತಿಯ ಮನೋರಂಜನಾ ಸ್ಥಳಗಳು ಸಂಪೂರ್ಣ ಲಾಕ್​ ಇರಲಿವೆ. ಸರಕು ವಾಹನಗಳಿಗೆ ಅಂತರರಾಜ್ಯ ಸಂಚಾರಕ್ಕೆ ಅವಕಾಶವಿದೆ. ಉಳಿದಂತೆ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಲಾಗಿದೆ.

    ಗೋವಾದಲ್ಲಿ ಮಂಗಳವಾರ 2,110 ಕರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಒಂದೇ ದಿನದಲ್ಲಿ 31 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈವರೆಗೆ ದೃಢವಾದ ಸೋಂಕಿತರ ಸಂಖ್ಯೆ 81,908ಕ್ಕೆ ಏರಿಕೆಯಾಗಿದ್ದರೆ ಮೃತರ ಸಂಖ್ಯೆ 1,086ಕ್ಕೆ ಹೆಚ್ಚಳವಾಗಿದೆ. ಇದುವರೆಗೆ 64,231 ಮಂದಿ ಸೋಂಕಿನಿಂದ ಗುಣಮುಖವಾಗಿದ್ದು, 16,591 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. (ಏಜೆನ್ಸೀಸ್)

    18ರಿಂದ 45 ವರ್ಷದವರಿಗಿಲ್ಲ ಫ್ರೀ ಕರೊನಾ ಲಸಿಕೆ; ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವಂತೆ ಸೂಚಿಸಿದ ಸರ್ಕಾರ

    ಆಟೋದಲ್ಲಿ ಅಮ್ಮನ ಹೆಣ ಇಟ್ಟುಕೊಂಡು ಗೋಳಾಡಿದ ಮಗ! ತಾಯಿಯ ಸಾವಿಗೆ ಆಸ್ಪತ್ರೆಯೇ ಕಾರಣವೆಂಬ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts