More

    ಕರೊನಾ ಮಾತ್ರವಲ್ಲ, ಲಾಕ್​ಡೌನ್​ ಕೂಡ ಹೆಚ್ಚುತ್ತಿದೆ….! ತಮಿಳುನಾಡು, ಮಹಾರಾಷ್ಟ್ರ ಸೇರಿ ಏಳು ರಾಜ್ಯಗಳಲ್ಲಿ ನಿರ್ಬಂಧ ವಿಸ್ತರಣೆ

    ನವದೆಹಲಿ: ಅತ್ತ ಕೇಂದ್ರ ಸರ್ಕಾರ ಆನ್​ಲಾಕ್​ 2.0 ಬಗ್ಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಲ್ಲಿ ಬ್ಯುಸಿಯಾಗಿದ್ದರೆ, ರಾಜ್ಯಗಳ ಕಥೆಯೇ ಬೇರೆಯಾಗಿದೆ. ಒಂದಾದ ಮೇಲೊಂದರಂತೆ ರಾಜ್ಯಗಳು ಲಾಕ್​ಡೌನ್​ ವಿಸ್ತರಣೆ ಮಾಡುತ್ತಿವೆ.

    ಮಹಾರಾಷ್ಟ್ರದಲ್ಲಿ ರಾಜ್ಯಾದ್ಯಂತ ಜುಲೈ 31ರವರೆಗೆ ಲಾಕ್​ಡೌನ್​ ವಿಸ್ತರಿಸಿದ ಬೆನ್ನಲ್ಲೇ ತಮಿಳುನಾಡು ಕೂಡ ಇಷ್ಟೇ ಅವಧಿಗೆ ಕಟ್ಟುನಿಟ್ಟಿನ ಲಾಕ್​ಡೌನ್​ ಮುಂದುವರಿಸುವುದಾಗಿ ಘೋಷಿಸಿದೆ.

    ಇದನ್ನೂ ಓದಿ; ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

    ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ 1,64,626ಕ್ಕೆ ತಲುಪಿದ್ದರೆ, ತಮಿಳುನಾಡಿನಲ್ಲಿ ಒಟ್ಟು ಕೇಸ್​ಗಳು 82,275 ದಾಟಿದೆ. ಹೊಸ ಪ್ರಕರಣಗಳ ಹೆಚ್ಚಳ ನಿಯಂತ್ರಣಕ್ಕೆ ಸಿಗದೇ ಇರುವ ಕಾರಣ ಕಟ್ಟುನಿಟ್ಟಿನ ಕ್ರಮಕ್ಕೆ ಈ ರಾಜ್ಯಗಳು ಮುಂದಾಗಿವೆ.

    ಇವೆರಡು ರಾಜ್ಯಗಳಲ್ಲದೇ, ಪಶ್ಚಿಮ ಬಂಗಾಳ, ಜಾರ್ಖಂಡ್​, ಮಣಿಪುರ, ಹರಿಯಾಣ ಹಾಗೂ ಅಸ್ಸಾಮ್​ನಲ್ಲೂ ಲಾಕ್​ಡೌನ್​ ವಿಸ್ತರಿಸಿ ಅಲ್ಲಿನ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ.

    ಇದನ್ನೂ ಓದಿ; ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಅಸ್ಸಾಮ್​ನ ಗುವಾಹಟಿಯಲ್ಲೂ ಜುಲೈ 15ರವರೆಗೆ ಎರಡು ವಾರಗಳ ಕರ್ಫ್ಯೂ ವಿಧಿಸಲಾಗಿದೆ. ಹರಿಯಾಣ, ಮಣಿಪುರದಲ್ಲೂ ಜುಲೈ 15ರವರೆಗೆ ಲಾಕ್​ಡೌನ್​ ಇರಲಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್​ನಲ್ಲಿ ಜುಲೈ 31ರವರೆಗೆ ನಿರ್ಬಂಧ ವಿಧಿಸಲಾಗಿದೆ.

    ಬೊಜ್ಜು ಇಳಿಸುವ ಔಷಧ ಕರೊನಾವನ್ನು ಕರಗಿಸುತ್ತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts