More

    ಹೊಲದಲ್ಲಿ ಹತ್ತಿ ಕೀಳುತ್ತಿದ್ದಾಗ ಹುಲಿ ದಾಳಿ: ಮಹಿಳೆ ಮೃತ್ಯು..ಎಲ್ಲಿ?

    ಮುಂಬೈ: ಹುಲಿ ದಾಳಿಗೆ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹೊಲದಲ್ಲಿ ಹತ್ತಿ ಕೀಳುತ್ತಿದ್ದಾಗ ಏಕಾಏಕಿ ಹುಲಿ ಮೇಲೆರಗಿದ್ದು, ಮಹಿಳೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಫಲಕಾರಿಯಾಗಿಲ್ಲ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಮಹಾರಾಷ್ಟ್ರದ ಅಹೇರಿ ತಾಲೂಕಿನ ಚಿಂತಲಪೇಟ್ ಗ್ರಾಮದ ಸುಷ್ಮಾ(50) ಮೃತೆ.

    ಇದನ್ನೂ ಓದಿ: ಪ್ರಾಬಲ್ಯಕ್ಕಾಗಿ ಹುಲಿ ಕಾಳಗ.. ದರಿಗಾಮ್ ಅರಣ್ಯದಲ್ಲಿ ಹೆಣ್ಣು ಹುಲಿ ಮೃತ್ಯ- ಚಂದ್ರಾಪುರ ಬಳಿ 10 ಹುಲಿ ಸತ್ತಿದ್ದೇಕೆ?
    ಆಹೇರಿ ತಾಲೂಕಿನ ಚಿಂತಲಪೇಟೆ ಅರಣ್ಯಕ್ಕೆ ಹೊಂದಿಕೊಂಡಂತಿದೆ. ಗ್ರಾಮದ ಅರಣ್ಯದಂಚಿನ ಹೊಲದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಮಹಿಳೆ ಹತ್ತಿಬಿಡಿಸುತ್ತಿದ್ದಾಗ ಹಿಂಬದಿಯಿಂದ ಹುಲಿ ದಾಳಿ ಮಾಡಿದೆ. ಈ ದಾಳಿಯಲ್ಲಿ ಸುಷ್ಮಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಹುಲಿದಾಳಿ ಮಾಡುತ್ತಿದ್ದಂತೆ ಭಯ ಭೀತರಾದ ಹತ್ತಿ ಕೀಳುತ್ತಿದ್ದ ಇತರ ಮಹಿಳಾ ಕಾರ್ಮಿಕರು ಜೋರಾಗಿ ಕಿರುಚಿದಾಗ ಹುಲಿ ಕಾಡಿಗೆ ಓಡಿಹೋಗಿದೆ. ಮೃತ ಮಹಿಳೆ ಗ್ರಾಮದಲ್ಲಿ ಕಿರಾಣಿ ಅಂಗಡಿ ಹೊಂದಿದ್ದರು. ಇದರ ಜತೆಗೆ ಕೃಷಿ ಕೂಲಿ ಕೆಲಸಕ್ಕೆ ಸಹ ಹೋಗುತ್ತಿದ್ದರು. ಕಳೆದ ಐದಾರು ದಿನಗಳಿಂದ ಅಹೇರಿ ಜಿಲ್ಲೆಯಲ್ಲಿ ಹುಲಿಗಳು ದಾಳಿ ನಡೆಸಿರುವುದು ಇದು ಎರಡನೇ ಬಾರಿ ಎಂಬುದು ಗಮನಾರ್ಹ.

    ಕಾಂಗ್ರೆಸ್​ ಶಾಸಕ ನಂಜೇಗೌಡಗೆ ‘ಇಡಿ’ ಶಾಕ್​: ಕೊಮ್ಮನಹಳ್ಳಿ ಮನೆ ಸೇರಿ 10 ಕಡೆ ಏಕಕಾಲಕ್ಕೆ ದಾಳಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts