More

    ಎಣ್ಣೆ ಪ್ರಿಯರ ಈ ಗುಟ್ಟು ನಿಮಗೆ ಗೊತ್ತೆ? ಕೇಂದ್ರ ಸರ್ಕಾರ ಏನ್​ ಹೇಳಿದೆ ನೋಡಿ…

    ನವದೆಹಲಿ: 43 ದಿನಗಳ ಮದ್ಯದ ಉಪವಾಸದಿಂದ ಬಳಲಿ ಬೆಂಡಾಗಿದ್ದ ಮದ್ಯಪ್ರಿಯರು ಬಾರ್​ ತೆರೆಯುತ್ತಿದ್ದಂತೆಯೇ ದೌಡಾಯಿಸಿದ್ದು ಕಂಡರೆ ಅಬ್ಬಬ್ಬಾ ಹೀಗೆಲ್ಲಾ ಇದೆಯಾ ಸ್ಥಿತಿ ಎಂದು ಬಹುತೇಕರು ಹುಬ್ಬೇರಿಸಲಿಕ್ಕೆ ಸಾಕು.

    ಯುವತಿಯರು, ಹೆಂಗಸರು, ವೃದ್ಧೆಯರೂ ತಾವೇನು ಕಡಿಮೆ ಇಲ್ಲ ಎಂದು ಕ್ಯೂನಲ್ಲಿ ನಿಂತಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಜನ, ‘ಇದು ಭಾರತನಾ’, ‘ನಮ್​ ಹೆಣ್ಣುಮಕ್ಕಳಿಗೆ ಇದೆಲ್ಲಾ ಬೇಕಿತ್ತಾ’ ಎಂದು ಟೀಕಿಸೋದೂ ನಡೆದಿದೆ.

    ಅದೇನೇ ಇರಲಿ. ಒಟ್ಟಿನಲ್ಲಿ ಇಲ್ಲಿಯವರೆಗೆ ಯಾರಿಗೂ ತಿಳಿಯದಂತೆ ಗುಟ್ಟುಗುಟ್ಟಾಗಿ ರಾತ್ರಿ ವೇಳೆ ಮದ್ಯದಂಗಡಿಗೆ ಹೊಕ್ಕು ಒಂದಿಷ್ಟು ಬಾಟಲಿಗಳನ್ನು ಎತ್ತಿಕೊಂಡು ಹೋಗುತ್ತಿದ್ದವರೂ ಈಗ ಮಾಸ್ಕ್​ ಒಳಗೆ ಮುಖ ಮರೆಮಾಚಿ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ತಮ್ಮಿಷ್ಟದ ಬ್ರ್ಯಾಂಡ್​ ಒಯ್ದಿದ್ದೂ ಆಯ್ತು, ಕೆಲವರು ಅದನ್ನು ಮುಗಿಸಿಯೂ ಆಯ್ತು ಅನ್ನಿ.

    ಇದನ್ನೂ ಓದಿ: ಮದ್ಯ ಪ್ರೇಮಿಗಳಿಗೆ ಹೂವು ಹಾಕಿ ಸ್ವಾಗತ- ವೀಡಿಯೋ ವೈರಲ್

    ಮದ್ಯದಂಗಡಿ ತೆರೆಯುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಅವರು ಅನೇಕ ಕಾರಣಗಳನ್ನೂ ಕೊಟ್ಟಿದ್ದರು. ಆದರೆ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಆಗಿರುವ ಅಪಾರ ನಷ್ಟವನ್ನು ತುಂಬಿಸಲು ಕೇಂದ್ರ ಸರ್ಕಾರಕ್ಕೆ ಮದ್ಯದಂಗಡಿ ತೆರೆಯುವುದು ಅನಿವಾರ್ಯವಾಗಿತ್ತು. ಜಿಎಸ್​ಟಿ ಕೊರತೆಯನ್ನು ಸರಿದೂಗಿಸಲು ಇದರ ಅಗತ್ಯವೂ ಇತ್ತು ಎಂದು ಸರ್ಕಾರ ಸಮಜಾಯಿಷಿ ನೀಡಿದೆ.

    ಲಾಕ್​ಡೌನ್​ ಸಮಯದಲ್ಲಿ ಮದ್ಯದ ಮಾರಾಟವನ್ನು ನಿಷೇಧ ಮಾಡಿದ್ದರೂ ಕಳ್ಳವ್ಯವಹಾರದಲ್ಲಿ ಅಕ್ರಮ ಚಟುವಟಿಕೆಗಳು ಅಪಾರ ಪ್ರಮಾಣದಲ್ಲಿ ನಡೆಯುತ್ತಿದ್ದುದರಿಂದ ಅದನ್ನು ತಡೆಯುವುದು ಕೂಡ ಸರ್ಕಾರಕ್ಕೆ ಅಷ್ಟೇ ಅಗತ್ಯವಾಗಿತ್ತು ಎಂದಿರುವ ಬಹುತೇಕ ಸರ್ಕಾರಗಳು ಇವೆಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಅಂಗಡಿ ತೆರೆಯಲು ಅನುಮತಿ ನೀಡಿವೆ.

    ಇದನ್ನೂ ಓದಿ: ಹೆಂಡಕ್ಕೆ ಡಬಲ್​ ರೇಟ್​- ಡೋಂಟ್​ ಕೇರ್​, ನಮ್ದು ದೇಶ ಸೇವೆ ಎಂದರು ಮದ್ಯ ಪ್ರೇಮಿಗಳು!

    ಹಾಗಿದ್ದರೆ ಎಣ್ಣೆ ಪ್ರಿಯರ ಬಗ್ಗೆಯೂ ಒಂದಿಷ್ಟು ಮಾಹಿತಿ ಇರಬೇಕಲ್ಲವೆ? ಅದಕ್ಕಾಗಿಯೇ ಕೇಂದ್ರ ಗೃಹ ಸಚಿವಾಲಯವು ದೇಶದಲ್ಲಿ ಮದ್ಯದ ಮಾರಾಟ, ಸೇವನೆ, ಅನಾಹುತ ಎಲ್ಲವನ್ನೂ ಇಲ್ಲಿ ಬಿಚ್ಚಿಟ್ಟಿದೆ. 2010 ರಿಂದ 2017ರವರೆಗೆ ನಡೆಸಿರುವ ಅಧ್ಯಯನದ ವರದಿ ಇದಾಗಿದೆ.

    * ಭಾರತದಲ್ಲಿ ಆಲ್ಕೋಹಾಲ್​ ಸೇವನೆಯು 2010 ಮತ್ತು 2017 ರ ನಡುವೆ ಶೇಕಡಾ 38 ರಷ್ಟು ಹೆಚ್ಚಾಗಿದೆ. ಅಂದರೆ ವರ್ಷಕ್ಕೆ ಒಬ್ಬ ವಯಸ್ಕ ಸರಾಸರಿ 4.3 ರಿಂದ 5.9 ಲೀಟರ್ ಮದ್ಯ ಸೇವನೆ ಮಾಡಿದ್ದಾರೆ.

    ಇದನ್ನೂ ಓದಿ: ದಾವಣಗೆರೆಯಲ್ಲಿ ಹೆಚ್ಚುತ್ತಿದ್ದಾರೆ ಸೋಂಕಿತರು! ನಿಮ್ಮ ಜಿಲ್ಲೆಯ ವಿವರ ಇಲ್ಲಿದೆ

    * ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಐಮ್ಸ್) 2019ರಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ ಸುಮಾರು 57 ಮಿಲಿಯನ್ (5.7 ಕೋಟಿ) ಭಾರತೀಯರು ಮದ್ಯದ ಚಟಕ್ಕೆ ಒಳಗಾಗಿದ್ದಾರೆ.

    * ಭಾರತದಲ್ಲಿ ಸುಮಾರು 70 ಪ್ರತಿಶತದಷ್ಟು ಆಲ್ಕೊಹಾಲ್ ವಿತರಣೆಯು ಮದ್ಯ ಮಾರಾಟ ಅಥವಾ ಅಂಗಡಿಗಳ ಮೂಲಕ ನಡೆಯುತ್ತದೆ. ಇದರಲ್ಲಿ 30ರಷ್ಟು ಬಾರ್‌ಗಳು, ಪಬ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾರಾಟವಾಗುತ್ತವೆ.

    * ಭಾರತದಲ್ಲಿ ಶೇಕಡಾ 75 ರಷ್ಟು ಯುವಕರು, 21 ವರ್ಷ ತುಂಬುವ ಮೊದಲೇ ಅಲ್ಕೋಹಾಲ್ ದಾಸರಾಗಿದ್ದಾರೆ!

    ಇದನ್ನೂ ಓದಿ: ಚೀನಾ ಕೊಟ್ಟಿದೆ ಇನ್ನೊಂದು ಆಘಾತ… ಭಾರತಕ್ಕೂ ಕಾಲಿಟ್ಟಿದೆ ಈ ಜ್ವರ!

    * 2018ರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿಯ ಪ್ರಕಾರ, ಮದ್ಯ ಸೇವನೆಯಿಂದ ಪ್ರತಿವರ್ಷ 2.60 ಲಕ್ಷ ಮಂದಿ ಪ್ರಾಣ ಬಿಡುತ್ತಿದ್ದಾರೆ.

    * 2019 ರ ಫೆಬ್ರವರಿಯಲ್ಲಿ ನಡೆಸಿದ ಸರ್ಕಾರಿ ಸಮೀಕ್ಷೆಯ ಪ್ರಕಾರ, 10 ರಿಂದ 75 ವರ್ಷದೊಳಗಿನ ಸುಮಾರು ಶೇ. 14.6 ರಷ್ಟು (16 ಕೋಟಿ) ಜನರು ಮದ್ಯ ಸೇವಿಸುತ್ತಾರೆ. ಛತ್ತೀಸಗಡ, ತ್ರಿಪುರ, ಪಂಜಾಬ್, ಅರುಣಾಚಲ ಪ್ರದೇಶ, ಮತ್ತು ಗೋವಾದಂತಹ ರಾಜ್ಯಗಳು ಮದ್ಯ ಸೇವನೆಯಲ್ಲಿ ಪ್ರಾಬಲ್ಯ ಹೊಂದಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts