More

    ಗಂಡಂದಿರ ಮೇಲೆ ಪತ್ನಿಯರ ದೌರ್ಜನ್ಯ ಪ್ರಕರಣಗಳು 5 ಪಟ್ಟು ಹೆಚ್ಚಳ! ಈ ರಾಜ್ಯವೇ ಮೊದಲು

    ಹೈದರಾಬಾದ್​: ಪತಿಯಿಂದ ಪತ್ನಿಗೆ ಕಿರುಕುಳ, ಪತಿಯಿಂದ ಪತ್ನಿಯ ಕೊಲೆ ಎಂಬ ಸುದ್ದಿಗಳನ್ನು ಹೆಚ್ಚಾಗಿ ಕೇಳುತ್ತಿರುತ್ತೇವೆ. ಪ್ರತಿಬಾರಿಯೂ ಮಹಿಳೆಯರನ್ನೇ ಹೆಚ್ಚಾಗಿ ಸಂತ್ರಸ್ತರ ಸಾಲಿನಲ್ಲಿ ನೋಡಲಾಗುತ್ತದೆ. ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆಯೇ ಹೆಚ್ಚು ದೌರ್ಜನ್ಯ ನಡೆಯುತ್ತಿದೆ ಎಂಬ ಮಾತು ಕೂಡ ಇದೆ. ಆದರೆ, ಇತ್ತೀಚೆಗೆ ಪ್ರಕಟವಾದ ಸಮೀಕ್ಷೆಯೊಂದು ಇದಕ್ಕೆ ತದ್ವಿರುದ್ಧವಾಗಿದ್ದು, ಅನೇಕ ಪುರುಷರು, ಮಹಿಳೆಯರ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದೆ.

    ಗಂಡಂದಿರ ಮೇಲೆ ಪತ್ನಿಯರು ದಾಳಿ ಮಾಡುವ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಿವೆ. ಬಯೋ ಸೋಶಿಯಲ್​ ಸ್ಟಡೀಸ್​ ಸಂಘಟನೆ ಮಾಡಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಮಾಹಿತಿ ಬಯಲಾಗಿದೆ. ಈ ಸಮೀಕ್ಷಾ ವರದಿಯು ಕೇಂಬ್ರಿಡ್ಜ್​ ಯೂನಿವರ್ಸಿಟಿ ಪ್ರೆಸ್​ನಲ್ಲಿ ಪ್ರಕಟವಾಗಿದೆ. ವಿವಿಧ ಕಾರಣಗಳಿಂದ ಹೆಂಡತಿಯಿಂದಲೇ ಕೊಲೆಯಾಗುವ ಗಂಡಂದಿರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವರಲ್ಲಿ ಕುಡುಕರು ಮತ್ತು ಅನಕ್ಷರಸ್ಥರೇ ಹೆಚ್ಚಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

    ದೇಶದಲ್ಲಿ ಗಂಡಂದಿರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯದ ಕುರಿತು ಸೋಶಿಯಲ್​ ಸ್ಟಡೀಸ್​ ಸಂಸ್ಥೆ ನಡೆಸಿದ ಸಂಶೋಧನೆಯನ್ನು ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದೆ. 15 ವರ್ಷಗಳಲ್ಲಿ ದೇಶದಲ್ಲಿ ಪತಿಯ ಮೇಲಿನ ಹಲ್ಲೆಗಳು ಐದು ಪಟ್ಟು ಹೆಚ್ಚಾಗಿವೆ ಎಂದು ಸಮೀಕ್ಷೆ ತಿಳಿಸಿದೆ. ಪ್ರತಿ ಸಾವಿರ ಮಹಿಳೆಯರಲ್ಲಿ 36 ಪತ್ನಿಯರು ತಮ್ಮ ಗಂಡನ ಮೇಲೆ ಕೈ ಮಾಡುತ್ತಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. 2006ರಲ್ಲಿ 1,000 ರಲ್ಲಿ 7 ಮಹಿಳೆಯರು ಮಾತ್ರ ತಮ್ಮ ಗಂಡಂದಿರ ಮೇಲೆ ಹಲ್ಲೆ ಮಾಡುತ್ತಿದ್ದು, ಈಗ ಆ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

    ಇತರ ದೇಶಗಳಲ್ಲಿನ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನುಗಳು ಪುರುಷರು ಮತ್ತು ಮಹಿಳೆಯರನ್ನು ರಕ್ಷಿಸುತ್ತವೆ. ಆದರೆ ಭಾರತದಲ್ಲಿ ಮಹಿಳೆಯರಿಗೆ ಮಾತ್ರ ಕಾನೂನುಗಳು ಬಲಿಷ್ಠವಾಗಿದೆ. ಹೀಗಾಗಿ ಕಾನೂನುಗಳಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದು ಈ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

    ಗಂಡನ ಮೇಲೆ ಪತ್ನಿಯರು ಹಲ್ಲೆ ಮಾಡುವ ಪ್ರಕರಣಗಳಲ್ಲಿ ಭಾರತದಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆ ಹೇಳಿದೆ. ಪುರುಷರ ಕುಡಿತದ ಚಟ ಮತ್ತು ತಮ್ಮ ಪತ್ನಿಯ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಸಮೀಕ್ಷೆ ಹೇಳಿದೆ. ಕಳೆದ ಹತ್ತು ವರ್ಷಗಳಲ್ಲಿ ತೆಲಂಗಾಣದಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ಹಲ್ಲೆ ಪ್ರಕರಣ ಏರಿಕೆಗೆ ಸಾಕ್ಷಿ ಎನ್ನಲಾಗುತ್ತಿದೆ.

    ಅನೇಕ ಗಂಡಂದಿರು ಕುಡಿತದ ವ್ಯಸನಿಗಳಾಗಿದ್ದು, ತಮ್ಮ ಹೆಂಡತಿ ಮತ್ತು ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದರಿಂದ ಕುಟುಂಬದಲ್ಲಿ ಕಲಹಗಳು ನಿರಂತರವಾಗಿ ನಡೆಯುತ್ತಿವೆ. ಪ್ರತಿದಿನ ರಾಜ್ಯದಲ್ಲಿ ಎಲ್ಲೋ ಒಂದು ಕಡೆ ಕುಡಿದು ಹೆಂಡತಿಗೆ ಕಿರುಕುಳ ನೀಡಿ ಸಾಯಿಸುವ ಸುದ್ದಿಗಳು ಬರುತ್ತಲೇ ಇವೆ. ಮಾದಕ ವ್ಯಸನಿಗಳನ್ನು ಪತ್ನಿ, ಮಕ್ಕಳು, ತಂದೆ-ತಾಯಿ ಸೇರಿ ಹತ್ಯೆ ಮಾಡುವ ಘಟನೆಗಳೂ ನಡೆಯುತ್ತಿವೆ. (ಏಜೆನ್ಸೀಸ್​)

    ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿಕಾಂತ್ ಗಲಿಬಿಲಿಗೊಂಡಿದ್ದರು!

    ಮಹಿಳೆಯರ ಈ ವಿಡಿಯೋ ನೋಡಿದ ಬಳಿಕ ಪುರುಷರು ಅಸೂಯೆ ಪಡುವುದರಲ್ಲಿ ಸಂದೇಹವೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts