More

    ದಾವಣಗೆರೆಯಲ್ಲಿ ಹೆಚ್ಚುತ್ತಿದ್ದಾರೆ ಸೋಂಕಿತರು! ನಿಮ್ಮ ಜಿಲ್ಲೆಯ ವಿವರ ಇಲ್ಲಿದೆ

    ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 22 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರಕರಣ ದಾಖಲಾಗಿರುವುದು ದಾವಣಗೆರೆಯಲ್ಲಿ. ಇಲ್ಲಿ 12 ಹೊಸ ಪ್ರಕರಣಗಳು ಪತ್ತೆಯಾಗಿವೆ.
    ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 673ಕ್ಕೆ ಏರಿದೆ. ಈ ಪೈಕಿ 312 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಸಾಮಾನ್ಯ ವಾರ್ಡ್​ಗಳಲ್ಲಿ ಹಾಗೂ ಆರು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಆಟದಲ್ಲಿ ಸೋಲ್ತಾ ಇದ್ದೇನೆಂದು ಹೆಂಡ್ತಿ ಸೊಂಟ ಮುರಿಯೋದಾ? ಅಬ್ಬಬ್ಬಾ ಈ ಪತಿ ಮಹಾಶಯ!

    ಇಲ್ಲಿಯವರೆಗೆ ಕರ್ನಾಟಕದಲ್ಲಿ ಒಟ್ಟು 331 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 29 ಮಂದಿ ಸೋಂಕಿಗೆ ಈವರೆಗೆ ಬಲಿಯಾಗಿದ್ದಾರೆ.

    ದಾವಣಗೆರೆ ಹೊರತುಪಡಿಸಿ ನಿನ್ನೆ ಸಂಜೆಯಿಂದ ಇದುವರೆಗೆ ಕಂಡುಬಂದಿರುವ ಹೊಸ ಸೋಂಕಿತರ ವಿವರ ಹೀಗಿದೆ: ಬೆಂಗಳೂರು ನಗರ 3; ಬಾಗಲಕೋಟೆ 2; ಬಳ್ಳಾರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹಾವೇರಿ ಜಿಲ್ಲೆಯ ಸವಣೂರು ಹಾಗೂ ಧಾರವಾಡದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

    ಇದನ್ನೂ ಓದಿ: ಪ್ರೀತಿಯ ಬಲೆಗೆ ಬಿದ್ದ ತಪ್ಪಿಗೆ ಕರುಳಕುಡಿಯನ್ನೇ ಹೊಸಕಿದಳಾ ಈ ತಾಯಿ!

    ಹೊಸ ಸೋಂಕಿತರ ಪೈಕಿ 9 ಮಂದಿ ಮಹಿಳೆಯರು ಹಾಗೂ 13 ಮಂದಿ ಪುರುಷರು. ಇವರಲ್ಲಿ ದಾವಣಗೆರೆಯ ಐದು ವರ್ಷದ ಬಾಲಕನೂ ಸೇರಿದ್ದಾನೆ.

    ನಿಮ್ಮ ಜಿಲ್ಲೆಯ ವಿವರ ಇಲ್ಲಿದೆ:

    ದಾವಣಗೆರೆಯಲ್ಲಿ ಹೆಚ್ಚುತ್ತಿದ್ದಾರೆ ಸೋಂಕಿತರು! ನಿಮ್ಮ ಜಿಲ್ಲೆಯ ವಿವರ ಇಲ್ಲಿದೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts