More

    ಸಮಸ್ಯೆಗಳಿಗೆ ಸ್ಪಂದನೆ ಅಗತ್ಯ, ಡಿವೈಎಸ್ಪಿ ಮಂಜುನಾಥ ಅಭಿಮತ

    ಲಿಂಗಸುಗೂರು: ಪ್ರತಿಯೊಬ್ಬರ ಆರೋಗ್ಯದ ಹಿತದೃಷ್ಟಿಯಿಂದ ನಿಸ್ವಾರ್ಥ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸ್ಪಂದನೆ ನೀಡುವುದು ಅಗತ್ಯ ಎಂದು ಡಿವೈಎಸ್ಪಿ ಮಂಜುನಾಥ ಹೇಳಿದರು.

    ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಜನತೆ ಕಾರ್ಯ ಚಟುವಟಿಕೆ ಆರಂಭಿಸುವ ಮುನ್ನವೇ ಪೌರ ಕಾರ್ಮಿಕರು ಪ್ರತಿ ವಾರ್ಡ್‌ಗಳಲ್ಲಿ ಗಾಳಿ, ಮಳೆ, ಚಳಿ ಲೆಕ್ಕಿಸದೆ ಸ್ವಚ್ಛತೆ ಮಾಡುವ ಮೂಲಕ ಸರ್ವರ ಆರೋಗ್ಯ ಮತ್ತು ಪರಿಸರ ಸೌಂದರ್ಯ ಕಾಪಾಡುತ್ತಾರೆ. ಆದರೆ ಪೌರ ಕಾರ್ಮಿಕರಿಗೆ ವಸತಿ, ಮಕ್ಕಳ ಶಿಕ್ಷಣ, ಆರೋಗ್ಯ, ಸೇವಾ ಭದ್ರತೆ ಒದಗಿಸುವುದು ಅವಶ್ಯವಾಗಿದೆ ಎಂದು ಹೇಳಿದರು.

    ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ ಮಾತನಾಡಿ, ಪೌರ ಕಾರ್ಮಿಕರು ಪರಿಸರ ರಕ್ಷಣೆ, ಆರೋಗ್ಯ ಸುಧಾರಣೆಯಲ್ಲಿ ಮುಖ್ಯಪಾತ್ರ ವಹಿಸುತ್ತಾರೆ. ಪೌರ ಕಾರ್ಮಿಕರನ್ನು ತಂದೆ-ತಾಯಿಯಂತೆ ಪ್ರೀತಿಯಿಂದ ಕಾಣಬೇಕು. ಕರೊನಾ ಮಹಾಮಾರಿ ವೇಳೆ ಜೀವದ ಹಂಗು ತೊರೆದು ಕರೊನಾ ವಾರಿಯರ್‌ಗಳಾಗಿ ಸೇವೆ ಸಲ್ಲಿಸಿದರು. ಸರ್ಕಾರ ನೀಡಿರುವ ಸುರಕ್ಷತಾ ಸಲಕರಣೆ ಬಳಸಿ ಪೌರ ಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹೇಳಿದರು.

    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪೌರ ಕಾರ್ಮಿಕರ ಮಕ್ಕಳನ್ನು ಹಾಗೂ ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿರನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts