More

    2ನೇ ಹಂತಕ್ಕೆ 9,472 ಸ್ಪರ್ಧಾಳುಗಳು

    ಬೆಳಗಾವಿ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊನೆಯ ಗಳಿಗೆವರೆಗೂ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಕಸರತ್ತು ಮುಂದುವರಿಸಿದ್ದು, ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ವ್ಯವಸ್ಥೆ ಮಾಡಿಕೊಂಡಿದೆ.

    ಮೊದಲ ಮತ್ತು ಎರಡನೇ ಹಂತದ ಚುನಾವಣೆಗಾಗಿ ಮತಗಟ್ಟೆ ಸೇರಿ ಇಡೀ ಪ್ರಕ್ರಿಯೆಗೆ ಜಿಲ್ಲಾಡಳಿತವು ಒಟ್ಟು 24 ಸಾವಿರ ಸಿಬ್ಬಂದಿ ನಿಯೋಜಿಸಿದೆ. ತಾಲೂಕುವಾರು ಪಂಚಾಯಿತಿಗಳ ಮತಪೆಟ್ಟಿಗೆಗಳನ್ನು ಸಂಗ್ರಹಿಸಿಡಲು ಈಗಾಗಲೇ ಸ್ಟ್ರಾಂಗ್ ರೂಂ ಸಿದ್ಧಗೊಳಿಸಲಾಗಿದೆ.

    ಯುವ ಸ್ಪರ್ಧಾಳುಗಳು: ಇನ್ನು ಎರಡನೇ ಹಂತದ ಚುನಾವಣೆಗೆ 7 ತಾಲೂಕುಗಳ 218 ಗ್ರಾಪಂಗಳ ಒಟ್ಟು 3,936 ಸದಸ್ಯ ಸ್ಥಾನಗಳ ಪೈಕಿ 3,587 ಸದಸ್ಯ ಸ್ಥಾನಕ್ಕಾಗಿ 9,472ಸ್ಪರ್ಧಿಗಳು ಅಂತಿಮ ಕಣದಲ್ಲಿದ್ದಾರೆ. ಪದವೀಧರರು ಮತ್ತು ಯುವಕರು ಹೊಸ ಆಶಯದೊಂದಿಗೆ ಚುನಾವಣಾ ಅಖಾಡದಲ್ಲಿದ್ದು, 2ನೇ ಹಂತದಲ್ಲಿ 332 ಜನ ಅವಿರೋಧ ಆಯ್ಕೆ ಆಗಿದ್ದಾರೆ. ಇನ್ನು 17 ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ.

    ಗೆಲುವಿಗಾಗಿ ಶತಾಯಗತಾಯ ಪ್ರಯತ್ನ

    ಅತಿ ಹೆಚ್ಚು (41) ಗ್ರಾಪಂಗಳನ್ನು ಹೊಂದಿರುವ ಅಥಣಿ ತಾಲೂಕಿನ 651 ಸ್ಥಾನಗಳಿಗಾಗಿ 1,735 ಅಭ್ಯರ್ಥಿಗಳು, 40 ಗ್ರಾಪಂ ಇರುವ ಸವದತ್ತಿ ತಾಲೂಕಿನಲ್ಲಿ 594 ಸ್ಥಾನಗಳಿಗೆ 1,600, 36 ಗ್ರಾಪಂ ಹೊಂದಿರುವ ಚಿಕ್ಕೋಡಿಯ 625 ಸ್ಥಾನಗಳಿಗೆ 1,628, ತಲಾ 33 ಗ್ರಾಪಂಗಳ ರಾಮದುರ್ಗ ಹಾಗೂ ರಾಯಬಾಗ ತಾಲೂಕಿನಲ್ಲಿ ಕ್ರಮವಾಗಿ 491 ಸ್ಥಾನಗಳಿಗೆ 1,384 ಹಾಗೂ 546 ಸ್ಥಾನಗಳಿಗೆ 1,396 ಅಭ್ಯರ್ಥಿಗಳು, 27 ಗ್ರಾಪಂ ಇರುವ ನಿಪ್ಪಾಣಿ ತಾಲೂಕಿನಲ್ಲಿ 490 ಸ್ಥಾನಗಳಿಗೆ 1,261 ಹಾಗೂ ಕೇವಲ 8 ಗ್ರಾಪಂ ಹೊಂದಿರುವ ಕಾಗವಾಡ ತಾಲೂಕಿನ 190 ಸ್ಥಾನಗಳಿಗೆ 468 ಅಭ್ಯರ್ಥಿಗಳು ಹೀಗೆ ಒಟ್ಟು 5,051 ಮಹಿಳೆಯರು ಹಾಗೂ 4,421 ಪುರುಷರು ಸ್ಪರ್ಧೆಯಲ್ಲಿದ್ದಾರೆ. ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts