More

    ಉನ್ನತ ಶಿಕ್ಷಣ ಸಚಿವರಿಗೆ ಮನವಿ: ಜನಮತ

    ಹೊಸ ಶಿಕ್ಷಣ ನೀತಿಯ ಅನುಸಾರ ಪದವಿ ತರಗತಿಗಳಿಗೆ ಪಠ್ಯಕ್ರಮ ಸ್ಥೂಲ ಸ್ವರೂಪವನ್ನು ಸೂಚಿಸಲು ನೇಮಿಸಲಾಗಿದ್ದ ಸಮಿತಿಯು ಭಾಷಾ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್​ಗಳಿಗೆ ಸೀಮಿತಗೊಳಿಸಿದೆ. ಇದರ ಬಗ್ಗೆ ವಿರೋಧ ಬಂದಾಗ ತಾವು ಕನ್ನಡ ಪಠ್ಯ ಕಡಿತ ಇಲ್ಲ ಎಂದು ಸ್ಪಷ್ಟನೆ ನೀಡಿದ್ದೀರಿ. ಸಂತೋಷ. ಆದರೆ, ನಿಮ್ಮ ಸ್ಪಷ್ಟನೆಯು ಇನ್ನೂ ಅಧಿಕೖತವಾಗಿ ಆದೇಶವಾಗಿ ಹೊರಬಂದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಒತ್ತಾಯವನ್ನು ನಿಮ್ಮ ಮುಂದೆ ಮಂಡಿಸುತ್ತಿದ್ದೇವೆ.

    -ಮೂರು ವರ್ಷದ ಪದವಿ ಕೋರ್ಸ್ ಇದ್ದಾಗ ಕನ್ನಡಾದಿ ಭಾಷಾ ವಿಷಯಗಳನ್ನು ಎರಡು ವರ್ಷಗಳ ಕಾಲ ಬೋಧಿಸಲಾಗುತ್ತಿತ್ತು. ಈಗ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳನ್ನು ಮೂರು ವರ್ಷಗಳ ಅವಧಿಗೆ ಪಠ್ಯವಾಗಿಸಬೇಕು.

    -ಭಾಷಾ ವಿಷಯಗಳ ಪಠ್ಯಗಳೆಂದರೆ, ಕೇವಲ ಕೌಶಲ ಮತ್ತು ಸಂವಹನೆಯ ಸಾಧನಗಳಲ್ಲ. ಸಾಹಿತ್ಯಕ ಮತ್ತು ಸಾಂಸ್ಕ್ಪ್ರಕ ಅರಿವನ್ನು ಮೂಡಿಸುವ ಪಠ್ಯ ವಿಷಯಗಳೆಂದು ಭಾವಿಸಬೇಕು. ಇದಕ್ಕೆ ಅನುಗುಣವಾಗಿ ಯಾವುದೇ ವಿಷಯದ ಅಧ್ಯಯನ ಮಾಡುವ ವ್ಯಾಸಂಗಿಗಳಿಗೆ ನಾಡಿನ ಸಾಹಿತ್ಯ ಮತ್ತು ಸಾಂಸ್ಕ್ಪ್ರಕ ಅರಿವು ಮೂಡಿಸುವ ದೖಷ್ಟಿಯಿಂದ ಪಠ್ಯಕ್ರಮ ರೂಪಿಸಬೇಕು. ಮಾನವೀಯ ಮೌಲ್ಯಗಳ ವೖದ್ಧಿಗೆ ಭಾಷಾ ಪಠ್ಯಗಳು ಪೂರಕವಾಗಿರಬೇಕು. ಹೊಸ ನೀತಿಯ ಹೆಸರಿನಲ್ಲಿ ಭಾಷಾ ಕೌಶಲಕ್ಕೆ ಸೀಮಿತ ಮಾಡಬಾರದು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ವಿನಂತಿ.

    | ಬರಗೂರು ರಾಮಚಂದ್ರಪ್ಪ, ಬಿ.ಎ.ವಿವೇಕ ರೈ, ಎಚ್.ಎಸ್.ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ, ಎಚ್.ಎಸ್.ರಾಘವೇಂದ್ರರಾವ್, ಬಸವರಾಜ ಕಲ್ಗುಡಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಬಾನು ಮುಷ್ತಾಕ್, ಜಿ.ರಾಮಕೖಷ್ಣ, ಕೆ.ಮರುಳಸಿದ್ಧಪ್ಪ, ಎಲ್.ಹನುಮಂತಯ್ಯ, ಬಸವರಾಜ ಸಬರದ, ಬಂಜಗೆರೆ ಜಯಪ್ರಕಾಶ್, ಸರಜು ಕಾಟಕರ, ಶರೀಫಾ ಕೆ., ಸುಕನ್ಯಾ ಮಾರುತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts