More

    ಜನಮತ | ಸದನ ಕಲಾಪದ ಘನತೆ ಹಾಳು…

    ತೀವ್ರ ಆರ್ಥಿಕ ಸಂಕಷ್ಟ, ಅವಶ್ಯಕ ಸಾಮಗ್ರಿಗಳ ಬೆಲೆ ಹೆಚ್ಚಳ, ಕಾಡುತ್ತಿರುವ ನಿರುದ್ಯೋಗ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಳ, ಕೋವಿಡ್ ಹಾವಳಿ, ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರ ಪ್ರತಿಭಟನೆ, ಅಸಹಾಯಕರು, ಆಶಾ, ಅಂಗನವಾಡಿ, ದಮನಿತ ಮಹಿಳೆಯರ ಬೇಡಿಕೆ ಕಡೆಗಣಿಸಿರುವ ಬಜೆಟ್… ಹೀಗೆ ತುರ್ತಿನ ನೂರಾರು ವಿಷಯಗಳು ರಾಜ್ಯವನ್ನು ಕಾಡುತ್ತಿವೆ. ಇಂತಹ ಹೊತ್ತಲ್ಲಿ ಜನರ ಕಡು ಸಂಕಷ್ಟಗಳನ್ನು ವಿಧಾನಸಭೆ ಕಲಾಪಗಳಲ್ಲಿ ರ್ಚಚಿಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರದು ಜನಪ್ರತಿನಿಧಿಗಳ ಲಜ್ಜೆಗೇಡಿತನದ ನಡವಳಿಕೆಗಳ ಚರ್ಚೆಯಿಂದಲೇ ಮಣ್ಣುಪಾಲಾಯ್ತು! ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣ, ಈ ಮೂಲಕ ನೀರುಪಾಲಾಯ್ತು. ಇಂಥವರನ್ನು ವಿಧಾನಸಭೆಗೆ ಆರಿಸಿ ಕಳಿಸಿದ್ದಕ್ಕೆ ಮತ್ತೊಮ್ಮೆ ಸಾರ್ವಜನಿಕರು, ಅದರಲ್ಲೂ ಮಹಿಳೆಯರು ತಮ್ಮ ಬಗ್ಗೆಯೇ ನಾಚುವಂತಾಯ್ತು.

    ಇದು ಕೂಡ ಅಸಹ್ಯದ ಪರಮಾವಧಿ ತಲುಪಿರುವ ರಾಷ್ಟ್ರ, ರಾಜ್ಯ ರಾಜಕಾರಣಕ್ಕೆ ಇನ್ನೊಂದು ಉದಾಹರಣೆ. ಲಂಗುಲಗಾಮಿಲ್ಲದ ಚರ್ಚೆಗಳು ಮಹಿಳೆಯರ ಬಗ್ಗೆ ಕನಿಷ್ಠ ಗೌರವವೂ ಇಲ್ಲದಂತಹ ಲಜ್ಜೆಗೇಡಿತನದ್ದಾಗಿರುವುದಂತೂ ಅಕ್ಷಮ್ಯ. ತಮ್ಮ ನಡೆಗೆ ಜನ ಹೇಸುತ್ತಿದ್ದಾರೆಂಬ ಕನಿಷ್ಠ ತಿಳಿವಳಿಕೆ ಇಲ್ಲದ, ನಿಜ ಕರ್ತವ್ಯ ಮರೆತ ಇಂತಹ ಜನಪ್ರತಿನಿಧಿಗಳಿಗೆ ನಮ್ಮ ಧಿಕ್ಕಾರವಿದೆ.

    | ರೂಪ ಹಾಸನ, ಪ್ರೊ.ಸ. ಉಷಾ ಶಿವಮೊಗ್ಗ, ನಂದಿನಿ ಜಯರಾಂ ಮಂಡ್ಯ, ಶಾರದಾ ಗೋಪಾಲ ಧಾರವಾಡ, ಸ್ವರ್ಣಭಟ್ ಮಂಗಳೂರು, ಡಿ.ನಾಗಲಕ್ಷ್ಮಿ ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts