More

    ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಽಕಾರಕ್ಕೆ ತರೋಣ: ಹರತಾಳು ಹಾಲಪ್ಪ ಅಭಿಮತ

    ರಿಪ್ಪನ್‌ಪೇಟೆ: ಪ್ರತಿ ಕಾರ್ಯಕರ್ತ ಮತ್ತು ನಾಯಕರ ಕಾರ್ಯ ವೈಖರಿಯನ್ನು ಪಕ್ಷ ಮತ್ತು ಸರ್ಕಾರ ಸದಾ ಗಮನಿಸುತ್ತಿರುತ್ತದೆ. ಹಾಗಾಗಿ ಎಲ್ಲರ ಸಹಕಾರದಿಂದ ಪಕ್ಷ ಸಂಘಟನೆಯೊAದಿಗೆ ಕೇಂದ್ರದಲ್ಲಿ ಮತ್ತೆ ಬಿಜೆಪಿಯನ್ನು ಅಽಕಾರಕ್ಕೆ ತರಲು ಶ್ರಮಿಸೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
    ಪಟ್ಟಣದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಾಸಕನಾಗಿದ್ದಾಗ ಭೂತ್ ಕಾರ್ಯಕರ್ತರ ಸಂಪರ್ಕ ಮತ್ತು ಹರ್‌ಘರ್ ತಿರಂಗ ಯೋಜನೆಯನ್ನು ಯಶಸ್ವಿಗೊಳಿಸಿರುವುದನ್ನು ಮನಗಂಡು ಪಕ್ಷದ ಪ್ರಮುಖರು ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದರು.
    ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟçದ ಚುಕ್ಕಾಣಿ ಹಿಡದ ನಂತರ ೫ನೇ ಆರ್ಥಿಕ ರಾಷ್ಟçವಾಗಿ ಕಂಗೊಳಿಸಿದೆ. ಕೆಲವೇ ದಿನಗಳಲ್ಲಿ ೩ನೇ ಆರ್ಥಿಕ ರಾಷ್ಟçವಾಗಿ ಹೊರಹೊಮ್ಮಲಿದೆ. ಸರ್ಕಾರದ ಯೋಗ್ಯ ಆಯವ್ಯಯದಿಂದ ರಾಷ್ಟçದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ. ಅಪವ್ಯಯಕ್ಕೆ ಆಸ್ಪದವಿಲ್ಲದೆ ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ. ಧಾರ್ಮಿಕ ಅಭಿವೃದ್ಧಿ ಕಾರ್ಯವಾಗಿ ಮಲೀನ ಗಂಗೆಯನ್ನು ಪವಿತ್ರಗೊಳಿಸಲಾಗಿದೆ. ರಾಮ ಮಂದಿರದ ನಿರ್ಮಾಣ ಕಾರ್ಯಗತಗೊಂಡಿದೆ. ಭೌತಿಕ ಅಭಿವೃದ್ಧಿಯಾಗಿ ಯುದ್ಧ ಸಂಕಷ್ಟ ದೇಶಗಳು ಪ್ರಧಾನಿ ಮೋದಿ ಅವರನ್ನು ಮದ್ಯಸ್ಥಿಕೆಗೆ ಆಹ್ವಾನಿಸಿ ಸಲಹೆ ಪಡೆಯುತ್ತಿದ್ದಾರೆ. ವಿಶ್ವವೇ ಭಾರತದ ಕಡೆ ನೋಡುವಂತಾಗಿದೆ ಎಂದರು.
    ಪಕ್ಷ ಸಂಘಟನೆಗಾಗಿ ರಾಜ್ಯ, ರಾಷ್ಟç ನಾಯಕರು ರಾಜ್ಯದಲ್ಲಿ ಒಂದು ತಂಡವನ್ನು ಕಟ್ಟಿದ್ದಾರೆ. ಅದರಲ್ಲಿ ನಾನು ವಾನರನಾದರೆ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುಗ್ರೀವರಂತೆ. ರಾಜ್ಯ ತಂಡದ ಪ್ರಥಮ ಸಭೆಯಲ್ಲಿ ಯಾರೊಬ್ಬರೂ ಒಂದು ದಿನವೂ ವಿರಾಮ ತೆಗೆದುಕೊಳ್ಳಬಾರದೆಂದು ತೀರ್ಮಾನಿಸಿದ್ದೇವೆ ಎಂದರು.
    ನಮ್ಮ ಪಕ್ಷ ಆಡಳಿತ ಪಕ್ಷದವರ ದಬ್ಬಾಳಿಕೆ, ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ಸರ್ಕಾರವನ್ನು ಯಾವ ಮುಲಾಜಿಲ್ಲದೆ ಪ್ರಶ್ನೆ ಮಾಡಿ ಬಯಲಿಗೆಳೆಯಬೇಕು. ಕಾರ್ಯಕರ್ತರು ಗಟ್ಟಿಯಾಗಿ ಮಾತನಾಡಿ ಸಮಾಜದಲ್ಲಿ ಜಾಗೃತಿ ಮೂಡಿಸಿ ಕಾರ್ಯಕರ್ತನ ಧ್ವನಿಗೆ ಪಕ್ಷ ಕೈಜೋಡಿಸುತ್ತದೆ ಎಂದರು.
    ಬಿಜೆಪಿ ತಾಲೂಕು ಅಧ್ಯಕ್ಷ ಗಣಪತಿ ಬಿಳಗೋಡು, ಪ್ರಧಾನ ಕಾರ್ಯದರ್ಶಿ ನಾಗಾರ್ಜುನಸ್ವಾಮಿ, ಮುಖಂಡರಾದ ಆರ್.ಟಿ. ಗೋಪಾಲ್, ಎ.ಟಿ.ನಾಗರತ್ನಮ್ಮ, ಎಂ.ಬಿ.ಮAಜುನಾಥ, ಸುರೇಶ್ ಸಿಂಗ್, ವೀರೇಶ ಆಲುವಳ್ಳಿ, ನಾಗರತ್ನಾ ಕೆರೆಹಳ್ಳಿ ಇತರರಿದ್ದರು.

    ಕಳೆದ ಚುನಾವಣೆಯಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಂಡು ಪಕ್ಷವನ್ನು ಸದೃಢವಾಗಿ ಕಟ್ಟೋಣ. ಎಲ್ಲರೂ ಸೂಜಿದಾರದಂತೆ ಕಾರ್ಯ ನಿರ್ವಹಿಸೋಣ. ಈ ಬಾರಿ ಲೋಕಸಭಾ ಚುನಾವಣೆ ಸಾಮಾನ್ಯವಾದುದಲ್ಲ. ವಿಶ್ವಾದ್ಯಂತ ದೇಶವನ್ನು ಗೆಲ್ಲಿಸುವುದಾಗಿದೆ. ಹಾಗಾಗಿ ಪ್ರತಿ ಕಾರ್ಯಕರ್ತ ಪಕ್ಷದ ಧ್ಯೇಯೋದ್ದೇಶಗಳನ್ನು ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿ ಮತದಾರನಿಗೆ ತಿಳಿಸಬೇಕು.
    |ಹರತಾಳು ಹಾಲಪ್ಪ
    ಬಿಜೆಪಿ ರಾಜ್ಯ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts