More

    ಹೊಸ ಹೆಸರು, ಅವತಾರದೊಂದಿಗೆ ತಲೆ ಎತ್ತಿದೆ ಉಗ್ರ ಸಂಘಟನೆ ಎಲ್​ಇಟಿ: ಪಾಕಿಗೆ ಇದ್ದುದು ಇದೊಂದೇ ದಾರಿ!

    ನವದೆಹಲಿ: ಭಾರತಕ್ಕೆ ಬೇಕಾಗಿರುವ ಉಗ್ರ ಹಫೀಜ್ ಸಯೀದ್ ನಾಯಕತ್ವದ ಲಷ್ಕರ್​ ಏ ತೊಯ್ಬಾ(ಎಲ್​ಇಟಿ) ಸಂಘಟನೆ ಇದೀಗ ಹೊಸ ಹೆಸರಿನೊಂದಿಗೆ ಹೊಸ ಅವತಾರವನ್ನು ಎತ್ತಿದೆ. ಪ್ಯಾರಿಸ್ ಮೂಲದ ಫೈನಾನ್ಶಿಯಲ್ ಆ್ಯಕ್ಷನ್​ ಟಾಸ್ಕ್​ ಫೋರ್ಸ್​ (ಎಫ್​ಎಟಿಎಫ್​​) ನಿರ್ಬಂಧದಿಂದ ಪಾರಾಗುವುದಕ್ಕೆ ಪಾಕಿಸ್ತಾನಕ್ಕೆ ಇದ್ದುದು ಇದೊಂದೇ ದಾರಿ!

    ಜಾಗತಿಕವಾಗಿ COVID19 ಪರಿಸ್ಥಿತಿಯ ತೀವ್ರತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅದನ್ನು ತಡೆಯುವುದಕ್ಕೆ ಬೇಕಾದ ಅನೇಕ ಮುಂಜಾಗ್ರತಾ ಕ್ರಮಗಳನ್ನು ರಾಷ್ಟ್ರಗಳು ತೆಗೆದುಕೊಂಡಿವೆ. ಇದರಲ್ಲಿ ದಿಗ್ಬಂಧನ, ಪ್ರಯಾನ ನಿರ್ಬಂಧ, ನಿಗದಿತ ಭೌಗೋಳಿಕ ವ್ಯಾಪ್ತಿಯನ್ನೆ ಸೀಲ್​ಡೌನ್ ಮಾಡುವ ಕೆಲಸಗಳೂ ಆಗಿವೆ. ಈ ಹಿನ್ನೆಲೆಯಲ್ಲಿ ಹೈ ರಿಸ್ಕ್​ ಪ್ರದೇಶಗಳಲ್ಲಿನ ಪರಾಮರ್ಶೆಯನ್ನು ನಾಲ್ಕು ತಿಂಗಳ ಮಟ್ಟಿಗೆ ಮುಂದೂಡಲಾಗುತ್ತಿದೆ. ಹೀಗಾಗಿ ಜೂನ್​ ತಿಂಗಳಲ್ಲಿ ನಿಗದಿತ ಪರಾಮರ್ಶೆಗಳು ನಡೆಯಲ್ಲ ಎಂದು ಎಫ್​ಎಟಿಎಫ್​ ಪ್ರಕಟಿಸಿದೆ.

    ಇದನ್ನೂ ಓದಿ: ಬೂದು ಪಟ್ಟಿಯಲ್ಲೇ ಪಾಕ್​ ಮುಂದುವರಿಕೆ: ಎಫ್​ಎಟಿಎಫ್​ನಿಂದ ಶುಕ್ರವಾರ ಅಂತಿಮ ನಿರ್ಧಾರ

    ಇದೇ ವೇಳೆ ಪಾಕಿಸ್ತಾನಕ್ಕೂ ಎಫ್​ಎಟಿಎಫ್ ಪರಾಮರ್ಶೆಯಿಂದ ವಿನಾಯಿತಿ ಸಿಕ್ಕಿದೆ. ಆದಾಗ್ಯೂ, ಅದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ಪಾಕಿಸ್ತಾನ ಸೆಪ್ಟೆಂಬರ್ ತಿಂಗಳ ಒಳಗೆ ಪೂರೈಸಬೇಕಾಗಿದೆ. ಪಾಕಿಸ್ತಾನಕ್ಕೆ ನೀಡಲಾಗಿದ್ದ 27 ಅಂಶಗಳ ಕ್ರಿಯಾ ಯೋಜನೆಯ ಡೆಡ್​ಲೈನ್ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಕೊನೆಗೊಂಡಿದೆ.

    ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಕ್ರಿಯಾ ಯೋಜನೆ ಜಾರಿಗೊಳಿಸುವುದಕ್ಕೆ ಮತ್ತೆ ಅವಕಾಶ ಸಿಕ್ಕಿತ್ತು. ಆದರೆ, ಬೂದುಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸುವ ಷರತ್ತಿನ ಎಚ್ಚರಿಕೆಯೂ ಅಲ್ಲಿತ್ತು. ಪಾಕಿಸ್ತಾನ ಎಫ್​ಎಟಿಎಫ್​ನ ಬೂದು ಪಟ್ಟಿಗೆ ಸೇರಿದ್ದರ ಪರಿಣಾಮ ಇಸ್ಲಾಮಾಬಾದ್​ಗೆ 10 ಶತಕೋಟಿ ಡಾಲರ್​ ನಷ್ಟ ಉಂಟಾಗಿದೆ. ಒಂದೊಮ್ಮೆ ಕ್ರಿಯಾ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾದರೆ ಕಪ್ಪುಪಟ್ಟಿಗೆ ಸೇರಲಿದೆ.

    ಇದನ್ನೂ ಓದಿ: ಉಗ್ರರಿಗೆ ಹಣಕಾಸು ನೆರವು ಸಿಗದಂತೆ ಕ್ರಮ ತೆಗೆದುಕೊಳ್ಳಲು ಪಾಕ್​ ವಿಫಲ: ಎಚ್ಚರಿಕೆ ನೀಡಿದ ಎಫ್​ಎಟಿಎಫ್​

    ಎಫ್​ಎಟಿಎಫ್​ನ ನಿಬಂಧನೆಗಳನ್ನು ಪೂರೈಸುವುದಕ್ಕಾಗಿ ಪಾಕಿಸ್ತಾನ ಈಗ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಹೆಸರು ಬದಲಾಯಿಸುವ ಕೆಲಸಕ್ಕೆ ಮುಂದಾಗಿದೆ. ಇದರಂತೆ ಉಗ್ರ ಹಫೀಜ್ ಸಂಸ್ಥಾಪಕನಾಗಿರುವ ಎಲ್​ಇಟಿ ಇನ್ನು ದ ರೆಸಿಸ್ಟೆನ್ಸ್​ ಫ್ರಂಟ್​(ಟಿಆರ್​ಎಫ್​) ಎಂದು ಗುರುತಿಸಿಕೊಳ್ಳಲಿದೆ. ಈ ಉಗ್ರ ಸಂಘಟನೆ ಜಮ್ಮು-ಕಾಶ್ಮೀರದಲ್ಲಿ ಅನೇಕ ಉಗ್ರ ದಾಳಿಗಳಿಗೆ ಹೊಣೆಗಾರನಾಗಿದೆ. ಲಷ್ಕರ್​ ಏ ತೊಯ್ಬಾ ಅಥವಾ ಎಲ್​ಇಟಿ ವಿಶ್ವಸಂಸ್ಥೆಯಿಂದ ನಿಷೇಧ ಎದುರಿಸುತ್ತಿದ್ದರೆ, ಅದರ ಹೆಸರು ಬದಲಾಯಿಸಿದರೆ ಅಂತಹ ನಿಷೇಧ ಯಾವುದೂ ಲಾಗೂ ಆಗಲ್ಲ ಎಂಬುದು ಪಾಕಿಸ್ತಾನದ ಲೆಕ್ಕಾಚಾರ.

    ಈಗ ಪಾಕಿಸ್ತಾನ ಇದೇ ಉಗ್ರರನ್ನು ಕಾಶ್ಮೀರದ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ಕಳುಹಿಸುವುದಕ್ಕೆ ಪ್ರಯತ್ನಿಸುತ್ತಿರುವುದು. ಹಾಗಾಗಿಯೇ ಆ ಭಾಗದಲ್ಲಿ ಪದೇಪದೆ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿರುವುದು. ಮೊಟ್ಟ ಮೊದಲ ಬಾರಿಗೆ ಟಿಆರ್​ಎಫ್​ ದಾಳಿ ಕಳೆದ ವರ್ಷ ಆಗಸ್ಟ್ 5ರಂದು ಆಗಿತ್ತು. ಅಂದು ಅನುಚ್ಚೇಧ 370 ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಇದು ನಡೆದಿತ್ತು ಎಂಬುದನ್ನು ಸೇನಾ ಮೂಲಗಳು ಉಲ್ಲೇಖಿಸಿವೆ. (ಏಜೆನ್ಸೀಸ್​)

    ಉಗ್ರ ಸಂಘಟನೆಗಳಿಗೆ 8,000 ಶಂಕಿತ ವ್ಯವಹಾರ ವರದಿ: ಪಾಕ್‌ಗೆ ಎಚ್ಚರಿಕೆ ನೀಡಿದ ಎಫ್‌ಎಟಿಎಫ್‌

    ವೈರಲ್ ಆಯ್ತು ರಿಷಿ ಕಪೂರ್ ಮತ್ತು ಇರ್ಫಾನ್​ ಖಾನ್​ ಜತೆಗೆ ಇರುವ ಒಂದು ಫೋಟೊ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts