More

    ಬೂದು ಪಟ್ಟಿಯಲ್ಲೇ ಪಾಕ್​ ಮುಂದುವರಿಕೆ: ಎಫ್​ಎಟಿಎಫ್​ನಿಂದ ಶುಕ್ರವಾರ ಅಂತಿಮ ನಿರ್ಧಾರ

    ಇಸ್ಲಮಾಬಾದ್​: ಜಾಗತಿಕವಾಗಿ ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದರ ಮೇಲೆ ಹದ್ದಿನ ಕಣ್ಣಿಡುವ ಹಣಕಾಸು ನಿಗಾ ಕಾರ್ಯಪಡೆ(ಎಫ್​ಎಟಿಎಫ್​)ಯು ಪಾಕಿಸ್ತಾನವನ್ನು ಬೂದು ಪಟ್ಟಿ( ಗ್ರೇ ಲೀಸ್ಟ್​)ಯಲ್ಲೇ ಮುಂದುವರಿಸಲು ಮಂಗಳವಾರ ಶಿಫಾರಸು ಮಾಡಿದೆ.

    ಸದ್ಯ ನಡೆಯುತ್ತಿರುವ ಪ್ಯಾರಿಸ್​ ಸಮಗ್ರ ಅಧಿವೇಶನದಲ್ಲಿ ಎಫ್​ಎಟಿಎಫ್​ನ ಕೊ- ಆಪರೇಷನ್​ ರಿವ್ಯೂವ್​ ಗ್ರೂಪ್​(ಐಸಿಆರ್​ಜಿ) ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

    ಐಸಿಆರ್​ಜಿ ಸಭೆಯು ಎಫ್​ಎಟಿಎಫ್​ನ ಉಪ ತಂಡವಾಗಿದ್ದು, ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿಯೇ ಮುಂದುವರಿಸಲು ಶಿಫಾರಸು ಮಾಡಿದೆ. ಪಾಕಿಸ್ತಾನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಶುಕ್ರವಾರ ಅಂತಿಮ ನಿರ್ಧಾರವನ್ನು ಕೈಗೊಳ್ಳುವುದಾಗಿ ಎಫ್​ಎಟಿಎಫ್​ ತಿಳಿಸಿದೆ.

    ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್ ಹಫೀಜ್​ ಸೈಯದ್​ಗೆ ಶಿಕ್ಷೆ ವಿಧಿಸಿದ ವಾರದ ಬೆನ್ನಲ್ಲೇ ಎಫ್​ಎಟಿಎಫ್​​​ ಮಹತ್ವದ ಸಭೆ ನಡೆದಿದೆ. ಪಾಕಿಸ್ತಾನ ಕೋರ್ಟ್​ ತೀರ್ಪು ಬೂದು ಪಟ್ಟಿಯಿಂದ ಪಾಕ್​ ಹೊರಬರಲು ಕಾರಣವಾಗಲಿದೆಯಾ ಎಂಬ ಮಾತುಗಳು ಕೇಳಿಬರುತ್ತಿದೆ.

    ಇತ್ತ ಭಾರತ ಪಾಕಿಸ್ತಾನ ಉಲ್ಲೇಖಿಸಿ ಲಷ್ಕರ್​ ಇ ತೋಯ್ಬಾ, ಜೈಷ್​ ಇ ಮೊಹಮ್ಮದ್​ ಮತ್ತು ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಗಳಿಗೆ ನಿರಂತರವಾಗಿ ಪಾಕ್​​ ಬೆಂಬಲ ನೀಡುತ್ತಾ ಬರುತ್ತಿದೆ. ಭಾರತವನ್ನು ಗುರಿಯಾಗಿರಿಸಿಕೊಂಡಿದ್ದು, ಪಾಕ್​ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಫ್​ಎಟಿಎಫ್​ ಅನ್ನು ಭಾರತ ಒತ್ತಾಯಿಸುತ್ತಾ ಬಂದಿದೆ.

    ಬೂದ ಪಟ್ಟಿಯಿಂದ ಬಿಳಿ ಪಟ್ಟಿಗೆ ಪಾಕ್​ ಬರಬೇಕಾದರೆ ಒಟ್ಟು 39 ಮತಗಳಲ್ಲಿ ಪಾಕ್​ಗೆ 12 ಮತಗಳು ಬೇಕಾಗಿದೆ. ಕಪ್ಪು ಪಟ್ಟಿಯಿಂದ ತಪ್ಪಿಸಿಕೊಳ್ಳಲು ಪಾಕ್​ಗೆ ಮೂರು ದೇಶಗಳ ಬೆಂಬಲ ಬೇಕಾಗಿದೆ.

    ಕಳೆದ ತಿಂಗಳು ಬೀಜಿಂಗ್​ನಲ್ಲಿ ನಡೆದ ಎಫ್​ಎಟಿಎಫ್​ ಸಭೆಯಲ್ಲಿ ಪಾಕ್​, ಮಲೆಶಿಯಾ ಮತ್ತು ಟರ್ಕಿ ಬೆಂಬಲವನ್ನು ಪಡೆದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts