ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡ ಬಳಿಕ ಪ್ಯಾರಿಸ್ ಮೂಲದ ಹಣಕಾಸು ಕ್ರಿಯಾ ಕಾರ್ಯಪಡೆ(Financial Action Task Force)ಯು ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಉಗ್ರ ದಾಳಿಯನ್ನು ಖಂಡಿಸಿರುವ ಎಫ್ಎಟಿಎಫ್, ವಿಶ್ವಾದ್ಯಂತ ಭಯೋತ್ಪಾದನೆಯು ಸಮಾಜದಲ್ಲಿ ದೊಡ್ಡ ಪಿಡುಗಾಗಿ ಮಾರ್ಪಟ್ಟಿದೆ ಮತ್ತು ಹಣಕಾಸಿನ ಬೆಂಬಲವಿಲ್ಲದೆ ಭಯೋತ್ಪಾದನೆ ಕಾರ್ಯ ನಡೆಯುವುದಿಲ್ಲ. ಅಂದರೆ ಭಯೋತ್ಪಾದನೆಗೆ ಹಣಕಾಸು ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದೆ.
FATFನ ಅಂತಾರಾಷ್ಟ್ರೀಯ ಸಹಕಾರ ರಿವ್ಯೂ ಗ್ರೂಪ್ (ICRG) ಹೈಲೈಟ್ ಮಾಡಿದ ಪಾಕಿಸ್ತಾನದ ಪ್ರದೇಶಗಳಲ್ಲಿ ಕೆಲಸ ಮಾಡಲು ಇಂಟರ್- ಮಿನಿಸ್ಟೇರಿಯಲ್ ಸಮಾಲೋಚನೆಗಳು ನಡೆಯುತ್ತಿದೆ.
2018ರಲ್ಲಿ ಹಣಕಾಸು ನಿರ್ವಹಣಾ ಘಟಕವು ಪಾಕಿಸ್ತಾನದಲ್ಲಿನ 8,707 ಅನುಮಾನಾಸ್ಪದ ವ್ಯವಹಾರಗಳ ವರದಿಗಳನ್ನು(ಎಸ್ಟಿಆರ್) ಬಿಡುಗಡೆ ಮಾಡಿದ್ದು, 2017ರಲ್ಲಿ ಇದು 5,548 ರಷ್ಟು ಇತ್ತು. ಇದರಲ್ಲಿ 1,136 ಎಸ್ಟಿಆರ್ಗಳು ಈ ವರ್ಷದ ಜನವರಿ ಮತ್ತು ಫೆಬ್ರವರಿಗಳಲ್ಲಿಯೇ ಬಿಡುಗಡೆ ಮಾಡಿದೆ ಎಂದು ಪಾಕಿಸ್ತಾನ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ.
ಆರು ಬ್ಯಾಂಕುಗಳಿಗೆ ಈಗಾಗಲೇ ದಂಡ ವಿಧಿಸಲಾಗಿದೆ. ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿರುವ ಕುರಿತು 109 ಬ್ಯಾಂಕುಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. 2018ರ ಜುಲೈ ಮತ್ತು ಜನವರಿ 31ರ ಅವಧಿಯಲ್ಲಿ ಪಾಕಿಸ್ತಾನದ 20 ಬಿಲಿಯನ್ ರೂ.ಗೂ ಹೆಚ್ಚಿನ ಮೌಲ್ಯದ ಹಣ ಕಳ್ಳಸಾಗಣೆ ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಹೇಳಿದೆ.
ಇನ್ನು ಇತ್ತೀಚೆಗಷ್ಟೇ ಪಾಕಿಸ್ತಾನದೊಂದಿಗೆ ಐಸಿಆರ್ಜಿ ಪಾಕಿಸ್ತಾನದೊಂದಿಗೆ ನಡೆಸಿದ ಸಭೆಯಲ್ಲಿ ಪಾಕ್ ಮೇಲೆ ಅಸಮಾಧಾನಗೊಂಡಿದ್ದು, 2019 ರ ಜನವರಿ ವೇಳೆಗೆ ದೇಶವು ಅಂದುಕೊಂಡಷ್ಟು ಮೈಲುಗಲ್ಲುಗಳ ಮೇಲೆ ಪ್ರಗತಿ ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಅದರ ಕಾರ್ಯ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು 2019 ಮೇ ಒಳಗೆ ಪೂರ್ಣಗೊಳಿಸಿಕೊಳ್ಳಬೇಕು ಎಂದು FATF ಪಾಕಿಸ್ತಾನಕ್ಕೆ ತಿಳಿಸಿದೆ.
ಪಾಕಿಸ್ತಾನವು ಭಯೋತ್ಪಾದನಾ ಹಣಕಾಸಿನ ಅಪಾಯದ ಕುರಿತು ಸರಿಯಾದ ತಿಳಿವಳಿಕೆಯನ್ನು ಪ್ರದರ್ಶಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ. (ಏಜೆನ್ಸೀಸ್)