More

    ದೇಶದ ಎಲ್ಲ ದೇವಸ್ಥಾನಗಳ ವಿವರ ವೈಜ್ಞಾನಿಕವಾಗಿ ದಾಖಲಾಗಲಿ: ಶ್ರೀನಾರಾಯಣ ರಾಮಾನುಜ ಜೀಯರ್ ಅಭಿಮತ

    ಬೆಂಗಳೂರು: ದೇಶದ ಎಲ್ಲ ದೇವಸ್ಥಾನಗಳ ವಿವರಗಳು ವೈಜ್ಞಾನಿಕವಾಗಿ ದಾಖಲಾಗಬೇಕೆಂದು ಶ್ರೀ ಯದುಗಿರಿ ಯತಿರಾಜ ಮಠದ ನಾರಾಯಣ ರಾಮಾನುಜ ಜೀಯರ್ ಅಭಿಪ್ರಾಯಪಟ್ಟಿದ್ದಾರೆ.

    ಚಂದನ ಆರ್ಟ್​ ಫೌಂಡೇಷನ್​ ಇಂಟರ್‌ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ದಿ ಮಿಥಿಕ್ ಸೊಸೈಟಿ ವತಿಯಿಂದ ಶನಿವಾರ ಸೆಂಟೆನರಿ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ‘ಶಿಲ್ಪವಿದ್ಯಾ ಸಮುಚ್ಚಯ’ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಶ್ರೀಗಳು ಆರ್ಶೀವಚನ ನೀಡಿದರು.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಭವ್ಯ ಇತಿಹಾಸ ಹಾಗೂ ಪರಂಪರೆ ಹೊಂದಿರುವ ರಾಷ್ಟ್ರ ಭಾರತ. ಪರಂಪರೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಲು ನಾವೆಲ್ಲರೂ ಕಾರ್ಯೋನ್ಮುಖವಾಗಬೇಕು. ದೇವಸ್ಥಾನಗಳ ವಿವರಗಳು ವೈಜ್ಞಾನಿಕವಾಗಿ ದಾಖಲಾದರೆ ಮಾತ್ರ ನಮ್ಮ ಇತಿಹಾಸ ಮತ್ತು ಪರಂಪರೆ ರಕ್ಷಣೆ ಮಾಡಬಹುದು. ಶಿಲ್ಪಶಾಸಕ್ಕೂ ಮತ್ತು ಮೇಲುಕೋಟೆಯಲ್ಲಿರುವ ಶ್ರೀ ಮಠಕ್ಕೆ ಅವಿನಾಭಾವ ಸಂಬಂಧವಿದೆ. 12ನೇ ಶತಮಾನದಲ್ಲಿ ಮನುಕುಲದ ಉದ್ಧಾರಕ್ಕಾಗಿ ಆವತರಿಸಿದ ಶ್ರೀ ರಾಮಾನುಜಾಚಾರ್ಯರು ದೇಶಾದ್ಯಂತ ಸಂಚರಿಸಿ ಸಾಂಸ್ಕೃತಿಕ ಸಂಚಲನ ಕ್ರಾಂತಿ ಉಂಟು ಮಾಡಿದರು. ಇದೇ ಕಾರ್ಯವನ್ನು ಅನೇಕ ಸಂತರು ಸಹ ಮಾಡಿದ್ದಾರೆ ಎಂದು ಶ್ರೀಗಳು ಹೇಳಿದರು.

    ಇದನ್ನೂ ಓದಿ: ಮೊಬೈಲ್​ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ; ಕೊರಿಯರ್​ನಲ್ಲಿ ಫೋನ್​ ವಾಪಸ್!

    ದಿ ಮಿಥಿಕ್ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಎಂ.ಆರ್. ಪ್ರಸನ್ನಕುಮಾರ್ ಮಾತನಾಡಿ, ಭಾರತೀಯ ಸಾಂಸ್ಕೃತಿಕ ಪರಂಪರೆ ವಿಶಿಷ್ಟ ಸ್ಥಾನಮಾನಕ್ಕೆ ಹೆಸರುವಾಸಿ. 23 ಸಾವಿರ ವರ್ಷಗಳ ಇತಿಹಾಸದ ಪರಂಪರೆಯಲ್ಲಿ ಕಲಾವಿದರು ಅದರಲ್ಲಿ ವಿಶೇಷವಾಗಿ ಸಂಗೀತಗಾರರು, ಚಿತ್ರಕಾರರು ಮತ್ತು ಶಿಲ್ಪಿಗಳು ತಮ್ಮ ಗುರು ಪರಂಪರೆಗೆ ಗೌರವ ಸೂಚಿಸುವ ಕಾರ್ಯ ಮಾಡಿದ್ದಾರೆ. ಕಲಾರಾಧನೆ ಒಂದು ದೈವಿ ಕಾರ್ಯ ಇದ್ದಂತೆ. ಇಂದಿಗೂ ನಮ್ಮಲ್ಲಿ ಕಂಡುಬರುವ ಶಿಲ್ಪ ಕಲೆ ತನ್ನದೇ ವೈಶಿಷ್ಟ್ಯತೆಗೆ ಹೆಸರುವಾಸಿ. ಲಕ್ಷಾಂತರ ಯಾತ್ರಿಕರ ಗಮನ ಸೆಳೆಯುವಲ್ಲಿ ಇದು ಯಶಸ್ವಿಯಾಗಿದೆ. ಆದರೆ, ಬ್ರಿಟಿಷ್ ಶಿಕ್ಷಣ ಪದ್ಧತಿಯಿಂದ ಕಲಾ ನಿರ್ಮಾಣ ಮತ್ತು ಕಲಾರಾಧನೆಯಲ್ಲಿ ಅಸ್ತಿತ್ವದಲ್ಲಿದ್ದ ಕಟ್ಟುಪಾಡುಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಸ್ವಾತಂತ್ರ್ಯಾನಂತರವೂ ಸಂಸ್ಕೃತಿಯ ರಕ್ಷಣೆಗೆ ಆಡಳಿತ ನಡೆಸುತ್ತಿರುವ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸದಿರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಸದ್ಯಕ್ಕಿಲ್ಲ 5 ಮತ್ತು 8ನೇ ತರಗತಿ ಪರೀಕ್ಷೆ; ಮುಂದೂಡುವುದಾಗಿ ಹೇಳಿದ ಸರ್ಕಾರ

    ಇಡೀ ದಿನ ನಡೆದ ವಿಚಾರ ಸಂಕಿರಣದಲ್ಲಿ ತಜ್ಞರು ಶಿಲ್ಪ ಕಲೆಗಳ ಮೇಲೆ ಹಲವು ವಿಚಾರಗಳನ್ನು ಮಂಡಿಸಿದರು. ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ಪ್ರೊ.ಕೆ.ನರಹರಿ, ಉಪಾಧ್ಯಕ್ಷ ಡಾ.ಎಂ.ಕೊಟ್ರೇಶ್, ಚಂದನ ಆರ್ಟ್ ಫೌಂಡೇಷನ್​ ಇಂಟರ್‌ನ್ಯಾಷನಲ್‌ನ ಆಡಳಿತ ಮಂಡಳಿ ಸದಸ್ಯ ತಲ್ಲೂರು ವೆಂಕಟೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts