More

    ಸವಣೂರಲ್ಲಿ ಮದಕರಿ ನಾಯಕರ ಕಂಚಿನ ಮೂರ್ತಿ ಸ್ಥಾಪನೆಯಾಗಲಿ

    ಸವಣೂರ: ಶ್ರೀ ಮಹರ್ಷಿ ವಾಲ್ಮೀಕಿ ಯುವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಐಬಿಯಲ್ಲಿ ಶುಕ್ರವಾರ ರಾಜ ವೀರಮದಕರಿ ನಾಯಕ ಅವರ ಜಯಂತಿ ಆಚರಿಸಲಾಯಿತು.

    ಬಿಜೆಪಿ ಮಂಡಳ ಎಸ್​ಟಿ ಮೋರ್ಚಾ ಅಧ್ಯಕ್ಷ ನಾಗರಾಜ ವಾಲ್ಮೀಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಪರಶುರಾಮ ಈಳಗೇರ ಮಾತನಾಡಿ, ಮದಕರಿ ನಾಯಕರು ಯುದ್ಧ ಪ್ರಿಯರಾಗಿದ್ದು, ತಮ್ಮ ಆಡಳಿತದ ಸಮಯದಲ್ಲಿ ರಾಜ್ಯವನ್ನು ವಿಸ್ತರಣೆ ಮಾಡಿದರು. ಸರ್ವ ಜನಾಂಗದವರನ್ನು ಸ್ನೇಹದಿಂದ ನೋಡುವ ಮೂಲಕ ಉತ್ತಮ ಆಡಳಿತ ನಡೆಸಿದರು. ಆದ್ದರಿಂದ, ಮದಕರಿ ನಾಯಕರ ಜಯಂತಿಯನ್ನು ಸರ್ವಧರ್ಮದವರು ಆಚರಣೆಗೆ ಮುಂದಾಗುವುದು ಅವಶ್ಯವಾಗಿದೆ. ಜಿಲ್ಲೆಯ ಯಾವುದೇ ತಾಲೂಕು ಹಾಗೂ ಗ್ರಾಮದಲ್ಲಿ ರಾಜ ವೀರಮದಕರಿ ನಾಯಕರ ಪ್ರತಿಮೆ ಸ್ಥಾಪನೆ ಇರುವುದಿಲ್ಲ. ಸವಣೂರಿನಲ್ಲಿ ಅವರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದರು.

    ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಪ್ರವೀಣ ಬಾಲೇಹೊಸೂರ ಮಾತನಾಡಿ, ವಿಜಯನಗರ ಸಾಮ್ರಾಜ್ಯಕ್ಕೆ ಚಿತ್ರದುರ್ಗ ಪಾಳೇಗಾರರು ಸಮಾಂತರ ರಾಜರಾಗಿದ್ದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಸಂಸ್ಥಾನದ ಮೇಲೆ ಹೈದರಲಿ ದಾಳಿ ಮಾಡಿದಾಗ ಅವರ ವಿರುದ್ಧ ಹೋರಾಡಿದ ಮದಕರಿ ನಾಯಕರ ಬಗ್ಗೆ ದಾಖಲೆಯಿದೆ. ಜಾನಪದ ಕಲಾವಿದರು ಹಾಡುತ್ತಿರುವ ಕಥೆ, ಕಾವ್ಯ ಮತ್ತು ಲಾವಣಿ ಪದಗಳ ಮೂಲಕ ಮುಂದಿನ ಜನಾಂಗಕ್ಕೆ ನಾಯಕರ ಜೀವನ ಚರಿತ್ರೆಯನ್ನು ಜೀವಂತವಾಗಿ ಇಟ್ಟಿದ್ದಾರೆ ಎಂದರು.

    ಸವಿತಾ ಸಮಾಜದ ಪ್ರಮುಖ ದೇವರಾಜ್ ಭಜಂತ್ರಿ ಮಾತನಾಡಿ, ತನ್ನ 12ನೇ ವಯಸ್ಸಿಗೆ ದುರ್ಗದ ಸಿಂಹಾಸನವೇರಿದ ನಾಡು ಕಂಡ ಶ್ರೇಷ್ಠ ದೊರೆ, ಶೌರ್ಯ ಹಾಗೂ ಸಾಹಸಕ್ಕೆ ಹೆಸರಾಗಿದ್ದ ಚಿತ್ರದುರ್ಗದ ಅರಸರು ವೀರ ಮದಕರಿ ನಾಯಕರು ನಾಡಿನ ಆಸ್ತಿಯಾಗಿದ್ದರು ಎಂದರು.

    ಯುವ ಘಟಕದ ತಾಲೂಕು ಅಧ್ಯಕ್ಷ ಯಲ್ಲಪ್ಪ ದೇವಗೇರಿ, ಚಂದ್ರಶೇಖರ ವಾಲ್ಮೀಕಿ, ಪುರಸಭೆ ಸದಸ್ಯ ಅಶೋಕ ಮುನ್ನಂಗಿ, ನಿಂಗಪ್ಪ ಹೊನ್ನಿಕೊಪ್ಪ, ಮಾಲತೇಶ ವಾಲ್ಮೀಕಿ, ಮಹಾಂತೇಶ ಹೊಳೆಮ್ಮನವರ, ಫಕೀರೇಶ ತಳವಾರ ಹಾಗೂ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts