More

    ಮಂಕಿ V/S ಲೆಪರ್ಡ್: ಮಂಗನ ಹಿಡಿತಕ್ಕೆ ಸೋಲಲೇ ಬೇಕಾಯ್ತು ಈ ಚಿರತೆ

    ಕಾಡುಪ್ರಾಣಿಗಳ ಕಾಳಗ, ಆಟ, ತುಂಟಾಟಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುತ್ತವೆ. ಅದರಲ್ಲೂ ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಅವರಂತೂ ತಮ್ಮ ಟ್ವಿಟರ್​ನಲ್ಲಿ ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

    ಸುಸಾಂತಾ ಅವರು ಈಗೊಂದು ವಿಡಿಯೋ ಪೋಸ್ಟ್​ ಮಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಹಾಗೇ ಈ ವಿಡಿಯೋ ಸಂದೇಶವನ್ನೊಂದನ್ನು ಒಳಗೊಂಡಿದೆ. ಒಂದು ಪುಟ್ಟ ಮಂಗ, ಕಿರಾತಕ ಚಿರತೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡ ಬಗೆಯನ್ನು ವಿಡಿಯೋದಲ್ಲಿ ನೋಡಬಹುದು.

    ಇದನ್ನೂ ಓದಿ:65 ವರ್ಷ ಮೇಲ್ಪಟ್ಟವರು ಹೊರಗೆ ಬರಬಾರದೆಂಬುದು ಸಲಹೆ ಅಷ್ಟೆ, ಕಾನೂನಲ್ಲ: ಕೇಂದ್ರ 

    ಒಂದು ಮರ. ಆ ಮರದ ಕೊಂಬೆಯ ತುದಿಯಲ್ಲಿ ಕೋತಿ ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿರುತ್ತದೆ. ಅದೇ ಮರವನ್ನು ಹತ್ತಿದ ಚಿರತೆಗೆ ತೀರ ಕೋತಿ ಕುಳಿತಲ್ಲಿಗೆ ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಅದು ಚಿಕ್ಕ ಕೊಂಬೆ. ಅದರ ಮೇಲೆ ಚಿರತೆ ಕಾಲಿಡಲು ಸಾಧ್ಯವೇ ಇಲ್ಲ. ಆದರೆ ಚಿರತೆಗೆ ಕೋತಿಯ ಮೇಲೆ ಕಣ್ಣು. ಅದನ್ನು ಹೇಗಾದರೂ ಆಹಾರವನ್ನಾಗಿಸಿಕೊಳ್ಳಬೇಕು ಎಂಬ ಆಲೋಚನೆಯಲ್ಲಿ, ಕೋತಿ ಹಿಡಿದುಕೊಂಡಿರುವ ಕೊಂಬೆಯನ್ನು ಬಲವಾಗಿ, ಒಂದೇ ಸಮನೆ ಜೋರಾಗಿ ಅಲುಗಾಡಿಸುತ್ತದೆ. ಅದು ಕೆಳಗೆ ಬಿದ್ದರೆ, ಅಥವಾ ಹೆದರಿ ಈ ಕಡೆ ಬಂದರೆ ಹಿಡಿದು ತಿನ್ನಬಹುದು ಎಂಬ ಆಸೆ ಚಿರತೆಯದ್ದು.

    ಆದರೆ ಕೋತಿಯ ಹಿಡಿತ ಅದೆಷ್ಟು ಗಟ್ಟಿಯಾಗಿದೆ ಎಂದರೆ ಅದು ಬಿಡಲೇ ಇಲ್ಲ. ಕೋತಿಯನ್ನು ಹೆದರಿಸಲು ಆಗದೆ, ತಾನು ನಿಂತ ಕೊಂಬೆಯ ಮೇಲೆ ಗಟ್ಟಿಯಾಗಿ ನಿಲ್ಲಲೂ ಆಗದ ಚಿರತೆ ಅಲ್ಲಿಂದ ಸರಿದುಹೋಗಿದೆ.

    ಇದನ್ನೂ ಓದಿ: 24 ಗಂಟೆಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 515 ಕರೊನಾ ಪ್ರಕರಣಗಳು; ಉಡುಪಿಯಲ್ಲಿ ದ್ವಿಶತಕ

    ವಿಡಿಯೋ ಶೇರ್ ಮಾಡಿರುವ ಸುಸಾಂತಾ ನಂದಾ ಅವರು, ಪ್ರಕೃತಿಯಲ್ಲಿ ಗಾತ್ರ, ಶಕ್ತಿ ಮತ್ತು ಪ್ರತಿಷ್ಠೆಯೆಂಬುದು ಹಲವು ಬಾರಿ ಹಿಂದೆಯೇ ಉಳಿಯುತ್ತದೆ. ಇಲ್ಲಿ ನೋಡಿ, ಚಿರತೆ ತನ್ನ ಆಹಾರಕ್ಕಾಗಿ ಕೋತಿಯನ್ನು ಹೇಗಾದರೂ ಪಡೆಯಬೇಕು ಎಂದು ಅದು ಹಿಡಿದಿದ್ದ ಕೊಂಬೆಯನ್ನು ಅಲುಗಾಡಿಸುತ್ತದೆ. ಆದರೆ ಆ ಕೋತಿಯ ಹಿಡಿತ ಅದೆಷ್ಟು ಗಟ್ಟಿಯಾಗಿದೆ. ದೊಡ್ಡ ಚಿರತೆಯಿಂದ ಚಿಕ್ಕ ಕೋತಿ ತನ್ನನ್ನು ತಾನು ರಕ್ಷಣೆ ಮಾಡಿಕೊಂಡಿತು ಎಂದು ಕ್ಯಾಪ್ಷನ್​ ಬರೆದಿದ್ದಾರೆ.

    ನೆಟ್ಟಿಗರಂತೂ ವಿಡಿಯೋಕ್ಕೆ ತುಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋತಿಯ ಆತ್ಮವಿಶ್ವಾಸವನ್ನು ಹೊಗಳಿದ್ದಾರೆ.

    ಮಂಕಿ V/S ಲೆಫರ್ಡ್: ಮಂಗನ ಹಿಡಿತಕ್ಕೆ ಸೋಲಲೇ ಬೇಕಾಯ್ತು ಈ ಚಿರತೆ…

    ಮಂಕಿ V/S ಲೆಫರ್ಡ್: ಮಂಗನ ಹಿಡಿತಕ್ಕೆ ಸೋಲಲೇ ಬೇಕಾಯ್ತು ಈ ಚಿರತೆ…ತನ್ನನ್ನು ಕೊಲ್ಲಲು ಬಂದ ಚಿರತೆಯಿಂದ ಈ ಮಂಗ ಪಾರಾದ ವಿಧಾನಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಚಿರತೆ ಹೇಗೆ ಸೈಲೆಂಟ್​ ಆಗಿ ಇಳಿದು ಹೋಯಿತು ನೋಡಿ…ನೆಟ್ಟಿಗರಂತೂ ಫುಲ್​ ಫಿದಾ ಆಗಿದ್ದಾರೆ.https://bit.ly/2z5oByX

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜೂನ್ 5, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts