More

    ಎಲ್ಲದಕ್ಕೂ ಶಾಸಕರ ಅನುದಾನ ನಿರೀಕ್ಷೆ ಸರಿಯಲ್ಲ

    ಪಂಚನಹಳ್ಳಿ: ಅಧಿಕಾರ ವಿಕೇಂದ್ರೀಕರಣ ಅಡಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಗ್ರಾಪಂ, ತಾಪಂ ಮತ್ತು ಜಿಪಂ ಮಾಡಬೇಕಿದೆ. ಎಲ್ಲ ಕೆಲಸಗಳಿಗೂ ಶಾಸಕರೇ ಅನುದಾನ ನೀಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.

    ಗಂಗನಹಳ್ಳಿಯಲ್ಲಿ ಜಿ.ಬೊಮ್ಮೇನಹಳ್ಳಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದೊಳಗಿನ ರಸ್ತೆ, ಚರಂಡಿ ಅಭಿವೃದ್ಧಿ ಮತ್ತು ಸ್ವಚ್ಛತೆ ಜವಾಬ್ದಾರಿ ಗ್ರಾಪಂ ಕೆಲಸ. ಸರ್ಕಾರದಿಂದ ಶಾಸಕರಿಗೆ ಬರುವ ಅನುದಾನವೂ ಸೀಮಿತವಾಗಿರುತ್ತದೆ ಎಂದರು.

    ಕಡೂರು ಕ್ಷೇತ್ರ ವ್ಯಾಪ್ತಿಯಲ್ಲಿ 1800 ಕಿಮೀಗಿಂತ ಅಧಿಕ ಗ್ರಾಮೀಣ ರಸ್ತೆಗಳಿವೆ. ಆದರೆ ಸ್ವಾತಂತ್ರ್ಯಂದಾಗಿನಿಂದ ಈವರೆಗೆ ಕೇವಲ 394 ಕಿಮೀ ಉದ್ದದ ರಸ್ತೆಗಳು ಡಾಂಬರೀಕರಣಗೊಂಡಿವೆ. ಇದಕ್ಕಾಗಿ ಯಾರನ್ನೂ ದೂಷಿಸುವ ಅಗತ್ಯವಿಲ್ಲ. ಈವರೆಗೆ ನಮ್ಮನ್ನಾಳಿರುವ ಸರ್ಕಾರಗಳು ದೇಶಕ್ಕೆ ತಮ್ಮದೆಯಾದ ಕೊಡುಗೆ ನೀಡಿವೆ. ಅದೇ ರೀತಿ ಈವರೆಗೆ ಕಡೂರು ಕ್ಷೇತ್ರವನ್ನು ಪ್ರತಿನಿಧಿಸಿರುವ ಶಾಸಕರು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ ಹಣದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts