More

    ನಾಳೆಯಿಂದಲೇ ಸಕ್ರಮ ಪ್ರಮಾಣಪತ್ರ ವಿತರಣೆ; ಪಡೆಯಲು ಏನೇನು ಅಗತ್ಯ?

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಉದ್ದೇಶಿತ ಡಾ. ಶಿವರಾಮ ಕಾರಂತ ಬಡಾವಣೆಯ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಸಲ್ಲಿಸಿದ 14ನೇ ವರದಿಯನ್ನು ಅಂಗೀಕರಿಸಿ 480 ಕಟ್ಟಡಗಳನ್ನು ಸಕ್ರಮಗೊಳಿಸಿ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಇದುವರೆಗೆ ಒಟ್ಟು 2,825 ಕಟ್ಟಡಗಳನ್ನು ಸಕ್ರಮಗೊಳಿಸಿದಂತಾಗಿದೆ.

    2018ರಕ್ಕಿಂತ ಮುನ್ನ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದು ಕಟ್ಟಿದ ಕಟ್ಟಡಗಳ ಮಾಲೀಕರು ಸಲ್ಲಿಸಿದ ದಾಖಲೆಗಳ ಮೇಲೆ ನ್ಯಾ. ಎ.ವಿ.ಚಂದ್ರಶೇಖರ್ ಸಮಿತಿ ನೀಡಿದ 14ನೇ ವರದಿಯನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್ , ಈ ಕಟ್ಟಡಗಳನ್ನು ಸಕ್ರಮಗೊಳಿಸಿ ಆದೇಶಿಸಿದೆ.

    ಬಡಾವಣೆ ವ್ಯಾಪ್ತಿಯ ಕಟ್ಟಡಗಳ ಮಾಲೀಕರಿಗೆ ಚಂದ್ರಶೇಖರ್ ಸಮಿತಿ ನೇತೃತ್ವದಲ್ಲಿ ಬಿಡಿಎ ಸಕ್ರಮ ಪ್ರಮಾಣ ಪತ್ರ ಹಾಗೂ ಕಾನೂನು ರೀತ್ಯ ಬೆಟರ್ ಮೆಂಟ್ ಶುಲ್ಕ ವಿಧಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ( ಮೇ 13) ಬಡಾವಣೆ ವ್ಯಾಪ್ತಿಯ ಮೇಡಿ ಅಗ್ರಹಾರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಕ್ರಮ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ಪತ್ರ ಪಡೆಯಲು ಫಲಾನುಭವಿಗಳು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್‌ಕಾರ್ಡ್ ಸಮಿತಿಯಿಂದ ಸ್ವೀಕರಿಸಿರುವ ಎಸ್‌ಎಂಎಸ್ ಹಾಗೂ ರಸೀದಿ ಸಲ್ಲಿಸಬೇಕು.

    ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

    ಹಾಲು-ಆಲ್ಕೋಹಾಲ್​ ಬಳಿಕ ಪೆಟ್ರೋಲ್​ಗೂ ಮುಗಿಬಿದ್ದ ಜನ; ವಾಟರ್ ಜೆಟ್​ ಪ್ರಯೋಗಿಸಿದ್ರೂ ಡೋಂಟ್​ ಕೇರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts