More

    ಈಗ ಮದ್ಯ ಖರೀದಿಸಲು 21 ವರ್ಷ ತುಂಬಿದ್ದರೆ ಸಾಕು

    ನವದೆಹಲಿ : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಮದ್ಯ ಖರೀದಿಸಲು ಇನ್ನು ಮುಂದೆ 21 ವರ್ಷ ತುಂಬಿದ್ದರೆ ಸಾಕು. ಏಕೆಂದರೆ ಕನಿಷ್ಠ 25 ವರ್ಷ ತುಂಬಿರಬೇಕೆಂದು ಇದ್ದ ಕಾನೂನನ್ನು ಬದಲಿಸಿ ಇದೀಗ 21 ವರ್ಷಕ್ಕೆ ಇಳಿಸಲಾಗಿದೆ ಎಂದು ದೆಹಲಿ ಡೆಪ್ಯುಟಿ ಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

    ಮದ್ಯ ಸೇವಿಸಲು 25 ವರ್ಷ ತುಂಬಿರಬೇಕೆಂಬ ಕಾನೂನಿದ್ದ ಆರು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿಯೂ ಒಂದಾಗಿತ್ತು. ಇದೀಗ ಆ ಸ್ಥಾನ ಬದಲಾಗಿದೆ. ಈ ಕುರಿತು ಸರ್ಕಾರ ರಚಿಸಿದ್ದ ತಜ್ನರ ಸಮಿತಿಯು ವಯಸ್ಸಿನ ಮಿತಿಯನ್ನು 21 ಕ್ಕೆ ಇಳಿಸಲು ಶಿಫಾರಸು ಮಾಡಿತ್ತು. ಅದರ ಮೇರೆಗೆ ತೆಗೆದುಕೊಂಡಿರುವ ಈ ನಿರ್ಧಾರದಿಂದ ಅಬಕಾರಿ ಇಲಾಖೆಯ ಆದಾಯ ಹೆಚ್ಚಲಿದೆ ಎನ್ನಲಾಗಿದೆ.

    ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ ಪರಮ್​ಬೀರ್​ ಸಿಂಗ್

    ಈ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಸಿಸೋಡಿಯಾ, ದೆಹಲಿಯಲ್ಲಿ ಯಾವುದೇ ಸರ್ಕಾರಿ ಮದ್ಯದಂಗಡಿಗಳಿರುವುದಿಲ್ಲ. ಮತ್ತು ಹೊಸತಾಗಿ ಯಾವ ಮದ್ಯದಂಗಡಿಗೂ ಪರವಾನಗಿ ನೀಡಲಾಗುವುದಿಲ್ಲ ಎಂದೂ ತಿಳಿಸಿದ್ದಾರೆ.

    ಮುಂಬೈ ಮತ್ತಿತರ ನಗರಗಳಲ್ಲಿ 25 ವರ್ಷದ ಕೆಳಗಿನವರಿಗೆ ಹಾರ್ಡ್ ಲಿಖರ್ ಮೇಲೆ ನಿಷೇಧವಿದೆಯಾದರೂ 21 ತುಂಬಿದವರಿಗೆ ವೈನ್ ಮತ್ತು ಬೀರ್​ ಖರೀದಿಸುವ ಅವಕಾಶವಿದೆ. ಅಮೆರಿಕದ ನ್ಯೂಯಾರ್ಕ್​ನಲ್ಲೂ ವಯೋಮಿತಿ 21 ಆಗಿದ್ದು, ಲಂಡನ್​ನಲ್ಲಿ 18 ವರ್ಷ ತುಂಬಿದರೆ ಮದ್ಯ ಖರೀದಿಸಬಹುದಾಗಿದೆ. (ಏಜೆನ್ಸೀಸ್)

    VIDEO | ಸೀರಿಸ್ ಗೆದ್ದ ನಂತರ ಯುವಿ​ಗೆ ಸಿಕ್ಕಿತು ವಿಶೇಷ ಸ್ವಾಗತ !

    ಮುಗುಳ್ನಗೆ ಹಂಚಿಕೊಂಡ ಸಚಿವೆ ಸ್ಮೃತಿ ಇರಾನಿ… ಹೇಳಿದ್ದೇನು ಗೊತ್ತೆ?!

    “ಬೇಕಿದ್ದರೆ ನನ್ನ ತಲೆಯ ಮೇಲೆ ಕಾಲಿಟ್ಟು ಒದೆಯಿರಿ, ಆದರೆ…”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts