ಮುಗುಳ್ನಗೆ ಹಂಚಿಕೊಂಡ ಸಚಿವೆ ಸ್ಮೃತಿ ಇರಾನಿ... ಹೇಳಿದ್ದೇನು ಗೊತ್ತೆ?!

irani
Published on

ನವದೆಹಲಿ : ಕೇಂದ್ರ ಸಚಿವರಾಗಿ ಎಷ್ಟೋ ಮಹಿಳೆಯರಿಗೆ ಮಾದರಿಯಾಗಿರುವ ಸ್ಮೃತಿ ಇರಾನಿ ಅವರ ಹೊಸ ಇನ್​ಸ್ಟಾಗ್ರಾಂ ಪೋಸ್ಟ್​ ಅವರ ಅಭಿಮಾನಿಗಳ ಮನಸೂರೆಗೊಂಡಿದೆ. ತಮ್ಮದೊಂದು ಮುಗುಳ್ನಗೆಯ ಫೋಟೋ ಮತ್ತು ಸರಳವಾದ ಶಬ್ದಗಳಲ್ಲಿ ಗಾಢ ಅರ್ಥ ನೀಡುವ ಮಾತೊಂದನ್ನು ಹಂಚಿಕೊಂಡು, ಅವರು ನೆಟ್ಟಿಗರ ಹುಬ್ಬೇರಿಸಿದ್ದಾರೆ.

ವರ್ಷಗಳ ಹಿಂದೆ 'ಕ್ಯೂಂಕಿ ಸಾಸ್​ ಭಿ ಕಭೀ ಬಹು ಥೀ' ಹಿಂದಿ ಧಾರಾವಾಹಿಯಲ್ಲಿ ಮಾದರಿ ಸೊಸೆಯ ರೂಪದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡು ಜನರ ಮನ ಗೆದ್ದಿದ್ದರು ಸ್ಮೃತಿ ಇರಾನಿ. ನಂತರ ಬಿಜೆಪಿಯ ಪ್ರಮುಖ ಮಹಿಳಾ ನಾಯಕಿಯಾಗಿ, ಕೇಂದ್ರದ ಟೆಕ್ಸ್​ಟೈಲ್ಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವ ಇರಾನಿ, ಸಾರ್ವಜನಿಕ ಜೀವನದಲ್ಲಿ ಹೆಸರು ಮಾಡಿದ್ದಾರೆ. ಸಹಜವಾಗಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಆಗಾಗ ಫೋಟೋ ಮತ್ತು ಅಭಿಪ್ರಾಯಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.

ಇಂದು ಬೆಳಿಗ್ಗೆ 'ಗ್ಯಾನ್ ಫ್ರಂ ಗೂಗಲ್ ಬಾಬಾ' ಎನ್ನುತ್ತಾ ಪ್ರೇರಣಾದಾಯಕ ಸುಭಾಷಿತದೊಂದಿಗೆ ತಮ್ಮ ನಗುಮೊಗದ ಫೋಟೋ ಶೇರ್ ಮಾಡಿದ್ದಾರೆ. ಸಂತಸಪೂರ್ಣ ಭಾನುವಾರಕ್ಕೆ ಇದುವೇ ಗುಟ್ಟು ಎಂದಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಮೂರು ಗಂಟೆಗಳಲ್ಲೇ 37 ಸಾವಿರ ಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ಜೊತೆಗೆ ಹಲವರ ಸಕಾರಾತ್ಮಕ ಕಾಮೆಂಟುಗಳ ಸುರಿಮಳೆ.

ಮಿಲಿಯನ್ ಡಾಲರ್ ಸ್ಮೈಲ್ ಎನ್ನುವಂತಹ ನಗುವನ್ನು ಮುಖದ ಮೇಲರಳಿಸಿಕೊಂಡಿರುವ ಇರಾನಿ, “ಕೀಪ್ ಸ್ಮೈಲಿಂಗ್ ಅಂಡ್ ಒನ್ ಡೇ ಲೈಫ್ ವಿಲ್ ಗೆಟ್ ಟೈರ್ಡ್ ಆಫ್ ಅಪ್​ಸೆಟ್ಟಿಂಗ್ ಯು” ಎಂಬ ಪ್ರೇರಣಾದಾಯಕ ಖೋಟ್​ಅನ್ನು ಶೇರ್ ಮಾಡಿದ್ದಾರೆ. 'ಮುಗುಳ್ನಗೆ ಬೀರುತ್ತಿರಿ... ಒಂದು ದಿನ ಜೀವನ ನಿಮಗೆ ತೊಂದರೆ ಕೊಟ್ಟು ಕೊಟ್ಟು ತಾನೇ ಸುಸ್ತಾಗುತ್ತದೆ' ಎಂಬ ಅರ್ಥ ಬರುವ ಈ ಖೋಟ್​ಅನ್ನು ಗೂಗಲ್​ನಿಂದ ಪಡೆದಿದ್ದಾಗಿ ಇರಾನಿ ಹೇಳಿದ್ದಾರೆ. 'ಇದು ಹ್ಯಾಪಿ ಸಂಡೇಗೆ ಗೂಗಲ್ ಬಾಬಾರ ಗ್ಯಾನ್' ಎಂದಿದ್ದಾರೆ! (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net