More

    ಹಳ್ಳಿಮೇಷ್ಟ್ರು 236|ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ದೈನಂದಿನ ಬಳಕೆಯ ವಾಕ್ಯಗಳು

    ಅವಳಿಗೆ ಆ ಉಡುಪು ಚೆನ್ನಾಗಿ ಕಾಣುವುದಿಲ್ಲವೆಂದು ಹೇಳಬಯಸಿದೆ, ಆದರೆ ಹೇಳದೆ ಸುಮ್ಮನಿದ್ದೆ.

    I wanted to tell her that the dress didn’t suit her, but I bit my tongue / lip.

    ಹಳ್ಳಿಮೇಷ್ಟ್ರು 236|ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿಅವಳು ಯಾವತ್ತೂ ತಾನು ಕೊಂಡಿರುವ ಸೀರೆಗಳ ಬಗ್ಗೆಯೇ ವಟವಟ ಮಾತನಾಡುತ್ತಿರುತ್ತಾಳೆ.

    ಖShe is always blabbering about the sarees she own.

    ಭಾವಚಿತ್ರಗಳಲ್ಲಿ ಅಪರಾಧಿಗಳ ಮುಖವನ್ನು ಕಪ್ಪಾಗಿಸಿ ಮರೆಮಾಚಲು ಪೊಲೀಸರೇಕೆ ಅನುಮತಿಸಬೇಕು?

    Why should the police let the criminals to black out their faces in photoes?

    ಈ ಉಡುಪು ಮಡಚಿದಲ್ಲಿ ಕೊಳೆ ತಾಗಿ ಕಪ್ಪಾಗಿದೆ. ನಿಮ್ಮ ಬಳಿ ಬೇರೆ ಇದೆಯೆ?

    This dress is blackened at the folds with dirt. Do you have another one?

    ನಮ್ಮ ಕುಟುಂಬದ ಮಾನ ಮರ್ಯಾದೆ ಹರಾಜು ಹಾಕಲು ಇರುವವ ಅವನೊಬ್ಬ ಮಾತ್ರ.

    He is the single black sheep of our family.

    ದುಃಖಾಂತ್ಯಗೊಂಡ ಪ್ರಣಯ ಪ್ರಸಂಗವನ್ನು ಮರೆತರೂ ನೋವು ಕೊಡುತ್ತದೆ, ಹಾಗೆಂದು ಮರೆಯದಿದ್ದರೆ ಕೊಲ್ಲುತ್ತದೆ.

    It hurts if you blank out a love affair with tragic ending but it kills if you don’t.

    ಹಬ್ಬದ ದಿನಗಳಲ್ಲಿ ಧ್ವನಿವರ್ಧಕಗಳು ಹಗಲಿಡೀ ಬೊಬ್ಬಿರಿಯುತ್ತಿರುತ್ತವೆ.

    Loud speakers would be blaring all day long during festivals.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts