More

    ಹಳ್ಳಿಮೇಷ್ಟ್ರು 259: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ಗಂಡಸರು ಸ್ನಾನಕ್ಕೆಂದು ಬಿಸಿನೀರು ತರಲು ಗಡಿಬಿಡಿಯಿಂದ ಹೊರಟಾಗ ಬಾಲ್ದಿಗಳು ಕಣಕಣವೆಂದು ಸದ್ದು ಮಾಡಿದವು.

    Buckets clanked as the men rushed to get the hot water for bathing.

    ಜನರು ಹಾಡಿನ ಲಯಕ್ಕೆ ಸರಿಹೊಂದುವಂತೆ ಚಪ್ಪಾಳೆ ತಟ್ಟಿದರು.

    People clapped to the rhythm of the music.

    ನನ್ನ ಬೆನ್ನಿನ ಮೇಲೆ ಸ್ನೇಹದಿಂದ ತಟ್ಟಿ ಅವರು ‘ಚೆನ್ನಾಗಿ ಮಾಡಿದೆ’ ಎಂದು ಹೇಳಿದರು.

    With a friendly clap on my shoulder, he said, “Well done.”

    ಆತ ತನ್ನ ಮಗಳ ಬೆನ್ನಿಗೆ ತಟ್ಟಿ ತನಗೆಷ್ಟು ಖುಷಿಯಾಯಿತೆಂದು ಹೇಳಿದ.

    He clapped his daughter on the back and told her how proud of her he was.

    ಪಲ್ಲಕ್ಕಿಯ ಪಕ್ಕದಲ್ಲಿದ್ದ ಹುಡುಗನೊಬ್ಬ ದೊಡ್ಡ ತಾಳಗಳನ್ನು ಒಂದಕ್ಕೊಂದು ತಟ್ಟುತ್ತಿದ್ದ.

    A boy beside the palanquin was clashing the cymbals together.

    ನಿಮ್ಮ ಮದುವೆಯ ದಿನವೇ ನನ್ನ ಮಗನ ಹುಟ್ಟುಹಬ್ಬವೂ ಇದ್ದುದರಿಂದ ನನಗೆ ಬರಲಾಗಲಿಲ್ಲ. ದಯವಿಟ್ಟು ಕ್ಷಮಿಸಿ.

    Sorry, actually your marriage clashed with my son’s birthday and so I couldn’t come.

    ಅಮ್ಮನ ಸೀರೆಯನ್ನುಕೈಯಿಂದ ಬಿಗಿಯಾಗಿ ಹಿಡಿದುಕೊಂಡು ಅವಳ ಹಿಂದೆ ನಿಂತುಕೊಂಡ.

    The kid clasped his mother’s saree and hid himself behind her

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts