More

    ಹಳ್ಳಿಮೇಷ್ಟ್ರು 258: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ಹಳ್ಳಿಮೇಷ್ಟ್ರು 258: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿದೈನಂದಿನ ಬಳಕೆಯ ವಾಕ್ಯಗಳು

    ನಾನು ಅವಳ ಗಲ್ಲದ ಕೆಳಗೆ ಮುಟ್ಟಿ ‘ಏನಾಯ್ತು ಪುಟ್ಟಾ?’ ಎಂದು ಕೇಳಿದೆ.

    I chucked her (under the chin) and asked, “What happened dear?”

    ಹಳೆಯ ಲಾರಿಯೊಂದು ಜೋರಾಗಿ ಸದ್ದು ಮಾಡುತ್ತ ಗುಡ್ಡವನ್ನು ಹತ್ತಿತು.

    An old lorry chugged up the hill slowly.

    ಅದು ಮಿಕ್ಸಿ ತಿರುಗುವ ಸದ್ದಲ್ಲವೆ? ಅಂದರೆ ಮನೆಯ ಒಳಗೆ ಯಾರೋ ಇದ್ದೇ ಇದ್ದಾರೆ.

    Isn’t that the chug of a mixer? Then someone is there inside the house.

    ಮಾಧವ ತನ್ನೊಬ್ಬನನ್ನು ಬಿಟ್ಟು ಉಳಿದವರೆಲ್ಲ ಸರ್ಕಸ್​ಗೆ ಹೋದರೆಂದು ಬೇಸರದ ಮೆಲುದನಿಯಲ್ಲಿ ದೂರುತ್ತಿದ್ದ.

    Madhav was chuntering that everybody went to circus leaving him at home.

    ಅವಳು ಕೂಟಕ್ಕೆ ಕರೆದಿದ್ದರೂ,ಹೋಗದಿದ್ದರೆ ಸ್ನೇಹಪರತೆಯಿಲ್ಲದವನೆಂದು ತಿಳಿಯುವಳೆಂದು ಗೊತ್ತಿದ್ದರೂ ನಾನು ಹೋಗಲಿಲ್ಲ.

    She’d invited me to the party but I didn’t go; I knew it would be churlish to not go.

    ಇಲ್ಲೆಲ್ಲ ಕಾರ್ ನಿಲ್ಲಿಸಿ ಹೋದರೆ ಅದಕ್ಕೆ ಪೊಲೀಸರು ಕಟ್ಟು ಹಾಕಿ ನಿಲ್ಲಿಸುತ್ತಾರೆ.

    If you park your car here, police would clamp it.

    ಲೋಹದ ಹೊರಬಾಗಿಲನ್ನು ಠಣಾರ್ ಎಂದು ಶಬ್ದ ಬರುವಂತೆ ಧಢಾರನೆ ಮುಚ್ಚುತ್ತ ಅವನು ಸಿಟ್ಟಿನಿಂದ ಹೋದ.

    He flounced out of the compound clanging the metal gate shut behind him.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts