More

    ಹಾಗೆಲ್ಲಾ ಮಾಡ್ಬೇಡಿ … ಇನ್ನೊಮ್ಮೆ ಯೋಚನೆ ಮಾಡಿ …

    ಅಕ್ಷಯ್ ಕುಮಾರ್ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಮೇಲೆ ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರೆ. ಹಾಗೆಲ್ಲಾ ಮಾಡ್ಬೇಡಿ ಸಾರ್, ಇನ್ನೊಮ್ಮೆ ಯೋಚನೆ ಮಾಡಿ ಸಾರ್, ಬಹಳ ಬೇಜಾರಾಗ್ತಿದೆ ಸಾರ್ … ಅಂತೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಏನು ಗೊತ್ತಾ? ಅಕ್ಷಯ್ ಅಭಿನಯದ ಹೊಸ ಚಿತ್ರ ‘ಲಕ್ಷ್ಮೀ ಬಾಂಬ್’.

    ಇದನ್ನೂ ಓದಿ: ನೀಲಿ ತಾರೆಯ ‘ಕ್ಲೈಮ್ಯಾಕ್ಸ್’ ನೋಡೋಕೆ ನೀವೆಷ್ಟು ಹಣ ನೀಡಬೇಕು ಗೊತ್ತಾ?

    ರಾಘವ ಲಾರೆನ್ಸ್ ನಿರ್ದೇಶನದ ‘ಲಕ್ಷ್ಮೀ ಬಾಂಬ್’ ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತು. ಈ ಬಾರಿಯ ರಂಜಾನ್ ಹಬ್ಬಕ್ಕೆ, ಸಲ್ಮಾನ್ ಅಭಿನಯದ ‘ರಾಧೆ’ ಚಿತ್ರದ ಜತೆಗೆ ಸಖತ್ ಫೈಟ್ ಕೊಡಬೇಕಿತ್ತು. ಆದರೆ, ಲಾಕ್‌ಡೌನ್ ಬಂದಿದ್ದರಿಂದ, ಚಿತ್ರದ ಬಿಡುಗಡೆ ರದ್ದಾಗಿದೆ. ಸರಿ, ನಿಧಾನಕ್ಕೆ ನೋಡಿದರಾಯಿತು ಎಂದು ಅಕ್ಷಯ್ ಅಭಿಮಾನಿಗಳು ಕಾಯುತ್ತಿದ್ದರೆ, ಚಿತ್ರತಂಡದವರು ಹೊಸ ಬಾಂಬ್ ಸಿಡಿಸಿದ್ದಾರೆ.

    ಅದೇನೆಂದರೆ, ‘ಲಕ್ಷ್ಮೀ ಬಾಂಬ್’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿಲ್ಲವಂತೆ. ಅದರ ಬದಲು ನೇರವಾಗಿ ಓವರ್ ದಿ ಟಾಪ್ (ಓಟಿಟಿ)ಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೆ. ಇಷ್ಟೊಂದು ಅವಸರ ಯಾಕೆ, ನಿಧಾನಕ್ಕೇ ಚಿತ್ರಮಂದಿರಗಳಲ್ಲಿ ಬರಬಹುದಲ್ಲಾ ಎಂದನಿಸಬಹುದು. ಆದರೆ, ಅಷ್ಟು ಸುಲಭವಿಲ್ಲ. ಪ್ರಮುಖವಾಗಿ, ಲಾಕ್‌ಡೌನ್ ಮುಗಿದ ನಂತರ ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಬಿಡುಗಡೆಯಾಗಬೇಕು. ಅದಾಗಿ ಎರಡ್ಮೂರು ತಿಂಗಳಿಗೆ, ‘ಲಕ್ಷ್ಮೀ ಬಾಂಬ್’ ಬಿಡುಗಡೆಯಾಗಬೇಕಿದೆ.

    ಇದನ್ನೂ ಓದಿ: PHOTO GALLERY| ಸರಳವಾಗಿ ನಡೆಯಿತು ಅಂಬಿ ಹುಟ್ಟುಹಬ್ಬ

    ಸದ್ಯಕ್ಕೆ ಚಿತ್ರಮಂದಿರಗಳು ಯಾವಾಗಿನಿಂದ ಪ್ರಾರಂಭವಾಗುತ್ತದೆ, ಪ್ರಾರಂಭವಾದರೂ ‘ಸೂರ್ಯವಂಶಿ’ ಬಿಡುಗಡೆಯಾಗುತ್ತದಾ ಎಂಬುದರ ಬಗ್ಗೆಯೇ ಯಾರಲ್ಲೂ ಸ್ಪಷ್ಟವಾದ ಮಾಹಿತಿ ಇಲ್ಲ. ಹೀಗಿರುವಾಗ, ‘ಲಕ್ಷ್ಮೀ ಬಾಂಬ್’ ಬಿಡುಗಡೆಯಾಗುವುದಕ್ಕೆ ಐದಾರು ತಿಂಗಳಾದರೂ ಬೇಕು. ಅಷ್ಟೊಂದು ಕಾಯುವ ಬದಲು ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ ಹೇಗೆ ಎಂಬ ಅನಿಸಿಕೆ ಚಿತ್ರತಂಡದ್ದು. ಮೇಲಾಗಿ ಹಾಟ್‌ಸ್ಟಾರ್‌ನವರು ಚಿತ್ರ ಖರೀದಿಸುವುದಕ್ಕೆ ಮುಂದೆ ಬಂದಿದ್ದು, 125 ಕೋಟಿ ಆಫರ್ ಕೊಟ್ಟಿದ್ದಾರಂತೆ. ಹಾಗಾಗಿ ಬಾಕಿ ಇರುವ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಬೇಗನೆ ಮುಗಿಸಿ, ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಸುದ್ದಿ ಇದೆ.

    ಈ ಸುದ್ದಿ ಕೇಳಿ, ಅಕ್ಷಯ್ ಕುಮಾರ್ ಅಭಿಮಾನಿಗಳು ಸಾಕಷ್ಟು ನಿರಾಶೆಯಾಗಿದ್ದಾರೆ. ‘ಲಕ್ಷ್ಮೀ ಬಾಂಬ್’ ಒಂದು ಪಕ್ಕಾ ಹಾರರ್ ಚಿತ್ರ. ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ ಎಂಜಾಯ್ ಮಾಡಬೇಕು ಎಂದು ಕಾಯುತ್ತಿದ್ದವರಿಗೆ, ಈಗ ಓಟಿಟಿಯಲ್ಲಿ ಚಿತ್ರ ಬರಲಿದೆ ಎಂಬ ಸುದ್ದಿ ಸಹಜವಾಗಿ ನಿರಾಸೆ ಮಾಡಿದೆ. ಅಭಿಮಾನಿಗಳ ನೋವನ್ನು ಅರ್ಥ ಮಾಡಿಕೊಂಡು, ಚಿತ್ರತಂಡದವರು ಇನ್ನೊಮ್ಮೆ ಯೋಚನೆ ಮಾಡುತ್ತಾರಾ ಎಂಬುದನ್ನು ಮುಂದೆ ನೋಡಬೇಕಿದೆ.

    ಆರ್ಥಿಕ ನಷ್ಟ; ಬುಕ್​ ಮೈ ಶೋ ಕಂಪನಿಯ 270 ಸಿಬ್ಬಂದಿ ಮನೆಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts