More

    ಬೆಳಗಾವಿ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆ: ಕಾಂಗ್ರೆಸ್​ ನಾಯಕರ ಜತೆ ಸವದಿ ಚರ್ಚೆ, ಕೈನತ್ತ ಅನಿಲ್​ ಬೆನಕೆ

    ಬೆಳಗಾವಿ‌: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಚುನಾವಣಾ ಚಟುವಟಿಕೆ ಬಿರುಸುಗೊಂಡಿದೆ. ರಾಜ್ಯದ 224 ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆದಿದೆ. ಅಭ್ಯರ್ಥಿಗಳಿಗೆ ಟಿಕೆಟ್​ ಘೋಷಣೆಯಾದ ಬಳಿಕ ಬಂಡಾಯದ ಬಿಸಿ ಎಲ್ಲ ಪಕ್ಷಗಳಿಗೂ ತಟ್ಟಿದೆ. ಅದರಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್​ ಪಾಳಯದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಗಮನಾರ್ಹ ಸಂಗತಿಯೆಂದರೆ, ಬೆಳಗಾವಿ ರಾಜಕಾರಣ ಸದ್ಯದ ಸ್ಥಿತಿಯಲ್ಲಿ ರಾಜ್ಯದ ಗಮನ ಸೆಳೆದಿದೆ.

    ಬಿಜೆಪಿಯಿಂದ ಟಿಕೆಟ್​ ಮಿಸ್​ ಆದ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್​ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ಲಕ್ಷ್ಮಣ್​ ಸವದಿ ಬಿಜೆಪಿಯಿಂದ ದೈಹಿಕ ಹಾಗೂ ಮಾನಸಿಕವಾಗಿ ದೂರವಾಗಿದ್ದು, ಇಂದು ಕಾಂಗ್ರೆಸ್​ ಸೇರುವ ಸಾಧ್ಯತೆ ಹೆಚ್ಚಿದೆ. ಅದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಸಹೋದರನ ಜೊತೆ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಬುಕ್​ ಮಾಡಿದ್ದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೆ, ಡಿ.ಕೆ. ಶಿವಕುಮಾರ್​ ಜತೆ ಕಾರಿನಲ್ಲಿ ಒಟ್ಟಿಗೆ ಆಗಮಿಸುವ ಮೂಲಕ ಕಾಂಗ್ರೆಸ್​ ಸೇರುವುದು ಖಚಿತ ಎಂಬ ಸಂದೇಶವನ್ನು ಸವದಿ ಅವರು ಬಿಜೆಪಿಗೆ ನೇರವಾಗಿ ರವಾನಿಸಿದ್ದಾರೆ.

    ಇದನ್ನೂ ಓದಿ: ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

    ಇಂದು ಮಾಜಿ ಸಿಎಂ ಸಿದ್ದು ನಿವಾಸದಲ್ಲಿ ಸಭೆ ನಡೆದಿದ್ದು, ಲಕ್ಷ್ಮಣ್​ ಸವದಿ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಷರತ್ತುಗಳ ಬಗ್ಗೆ ಚರ್ಚಿಸಿದ ಬಳಿಕ ಎಲ್ಲವನ್ನು ಹೇಳುತ್ತೇನೆ ಎಂದು ಸವದಿ ಹೇಳಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​ ಮತ್ತು ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸುರ್ಜೇವಾಲ ಸಮ್ಮುಖದಲ್ಲಿ ಸವದಿ ಕಾಂಗ್ರೆಸ್​ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ. ಸವದಿ ಕಾಂಗ್ರೆಸ್​ ಸೇರ್ಪಡೆ ಬಹುತೇಕ ಖಚಿತವಾಗಿದೆ.

    ಸವದಿ ಮಾತ್ರವಲ್ಲ ಮತ್ತೊಬ್ಬ ಶಾಸಕ ಅನಿಲ್​ ಬೆನಕೆ ಕೂಡ ಕಾಂಗ್ರೆಸ್​ ಕದ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಕಾಂಗ್ರೆಸ್​ ಶಾಸಕ ಫಿರೋಜ್ ಶೇಠ್ ಜತೆ ಅನಿಲ್ ಬೆನಕೆ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಹೆಗಲ ಮೇಲೆ ಕೈ ಹಾಕಿಕೊಂಡು ಉಭಯ ನಾಯಕರು ಕ್ಯಾಮರಾಗೆ ಪೋಸ್​ ನೀಡಿದ್ದಾರೆ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಬೆನಕೆ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಬೆನಕೆ ಅವರ ನಡೆ ತೀವ್ರ ಕುತೂಹಲ ಮೂಡಿಸಿದೆ. ಬೆನಕೆ ಕಾಂಗ್ರೆಸ್ ಸೇರ್ಪಡೆ ವದಂತಿ ನಡೆಯೇ ಒಟ್ಟಿಗೆ ಕಾಣಿಸಿಕೊಂಡಿರುವುದು ಕಾಂಗ್ರೆಸ್​ ಸೇರ್ಪಡೆ ವದಂತಿ ನಿಜವಾಗುತ್ತಾ ಸಾಗಿದೆ.

    ಲಕ್ಷ್ಮಣ್​ ಸವದಿ ಕಾಂಗ್ರೆಸ್​ ಸೇರ್ಪಡೆ ಫಿಕ್ಸ್​: ಲಕ್ಷ್ಮೀ ಹೆಬ್ಬಾಳ್ಕರ್​ ಸಹೋದರನ ಜತೆ ಬೆಂಗಳೂರಿಗೆ ಆಗಮನ

    ವರುಣಾದಲ್ಲಿ‌ ಸೋಮಣ್ಣರಿಗೆ ನೂರೆಂಟು ಸವಾಲು! ಬಿ.ಎಸ್. ಯಡಿಯೂರಪ್ಪರ ಮೇಲೆ ಸದ್ಯದ ಕುತೂಹಲ

    ಫಾರ್ಮ್‌ನಲ್ಲಿ ಸ್ಫೋಟ ; 18 ಸಾವಿರ ಹಸುಗಳು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts