More

    ನಮ್ಮ ಕುಟುಂಬದ ಕರ್ಮಭೂಮಿಗೆ ಸೇವೆ ಸಲ್ಲಿಸುವ ಪುಣ್ಯ ಸಿಕ್ಕಿದೆ: ರಾಹುಲ್ ಗಾಂಧಿ!

    ನವದೆಹಲಿ: ಕಳೆದ 20 ವರ್ಷಗಳ ಕಾಲ ತಾಯಿ ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದ ಉತ್ತರಪ್ರದೇಶದ ರಾಯ್ ಬರೇಲಿ ನಮ್ಮ ಕುಟುಂಬದ ಪಾಲಿಗೆ ಕರ್ಮಭೂಮಿ. ಈ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದು ನನಗೆ ಭಾವನಾತ್ಮಕ ಕ್ಷಣ. ಹಾಗೂ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶದ ಜವಾಬ್ದಾರಿಯನ್ನು ನನ್ನ ತಾಯಿ ನನಗೆ ವಹಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.‘

    ಇದನ್ನೂ ಓದಿ:  ಸೀಮಂತ ಕಾರ್ಯಕ್ಕೆ ತೆರಳುತ್ತಿದ್ದ 7 ತಿಂಗಳ ಗರ್ಭಿಣಿ ರೈಲಿನಿಂದ ಬಿದ್ದು ಸಾವು

    ಮೇ.5 ಶುಕ್ರವಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಮಾತನಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲನ್ನು ಎದುರಿಸಿದ ನಂತರ ಅಮೇಠಿಯಲ್ಲಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರನ್ನು ಗಾಂಧಿ ವಂಶಸ್ಥರು ಎದುರಿಸುವ ಕುರಿತು ವಾರಗಳ ಕಾಲ ನಡೆದ ಸಸ್ಪೆನ್ಸ್​​ಗೆ ವಿರಾಮ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ರಾಯ್​ ಬರೇಲಿ ಕ್ಷೇತ್ರದ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದು ಕೆಳೆದ 20 ವರ್ಷಗಳಿಂದ ಗಾಂಧಿ ಕುಟುಂಬದ ಭದ್ರಕೋಟೆಯಾಗಿದೆ.

    ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಅಮೇಠಿ ಮತ್ತು ರಾಯ್​ ಬರೇಲಿಯ ಜನರು ಯಾವಾಗಲೂ ನಮ್ಮ ಕುಟುಂಬದ ಸದಸ್ಯರಿದ್ದಂತೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಇರಾನಿ ವಿರುದ್ಧ ಕಣಕ್ಕಿಳಿದಿರುವ ಗಾಂಧಿ ಕುಟುಂಬದ ಆಪ್ತ ಸಹಾಯಕ ಕಿಶೋರಿ ಲಾಲ್ ಶರ್ಮಾ ಅವರ ಬಗ್ಗೆಯೂ ರಾಹುಲ್​ ಸಂತಸ ವ್ಯಕ್ತಪಡಿಸಿದರು.

    ಅಮೇಠಿ ಮತ್ತು ರಾಯ್ ಬರೇಲಿ ನನಗೆ ಬೇರೆ ಬೇರೆ ಅಲ್ಲ, ಎರಡೂ ನನ್ನ ಕುಟುಂಬವಾಗಿದ್ದು, ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಿಶೋರಿ ಲಾಲ್ ಜಿ ಅವರು ಅಮೇಠಿಯಿಂದ ಕಾಂಗ್ರೆಸ್​ ಪಕ್ಷವನ್ನು ಪ್ರತಿನಿಧಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.
    ಮೇ 20 ರಂದು ಐದನೇ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿರುವ ಅಮೇಥಿ ಮತ್ತು ರಾಯ್ ಬರೇಲಿ ಸೇರಿದಂತೆ ಹಲವು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು.

    ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಶುಕ್ರವಾರ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರೊಂದಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಮತ್ತು ಅಶೋಕ್ ಗೆಹ್ಲೋಟ್ ಉಪಸ್ಥಿತರಿದ್ದರು.

    ಸೋಲುವ ಭೀತಿಯಿಂದ ರಾಹುಲ್ ಅಮೇಠಿಯಿಂದ​ ಪಲಾಯನ ಮಾಡಿದ್ದಾರೆ: ಸ್ಮೃತಿ ಇರಾನಿ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts