More

    ಲಕ್ಷ್ಮಣ್​ ಸವದಿ ಕಾಂಗ್ರೆಸ್​ ಸೇರ್ಪಡೆ ಫಿಕ್ಸ್​: ಲಕ್ಷ್ಮೀ ಹೆಬ್ಬಾಳ್ಕರ್​ ಸಹೋದರನ ಜತೆ ಬೆಂಗಳೂರಿಗೆ ಆಗಮನ

    ಬೆಳಗಾವಿ: ಬಿಜೆಪಿಯಿಂದ ಟಿಕೆಟ್​ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ವಿಧಾನ ಪರಿಷತ್​ ಸದಸ್ಯ ಲಕ್ಷ್ಮಣ್​ ಸವದಿ ಕಾಂಗ್ರೆಸ್​ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಸೊಸೆಯ ಅಶ್ಲೀಲ ಚಾಟಿಂಗ್​: ಮಲಗಿದ್ದಲ್ಲೇ ಶವವಾದ ಅತ್ತೆ-ಮಾವನ ಸಾವಿನ ಹಿಂದಿನ ಭಯಾನಕತೆ ಬಯಲು

    Laxman Savadi

    ಸದ್ಯ ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದಿಂದ ಲಕ್ಷ್ಮಣ ಸವದಿ ಹೊರಟಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಲಕ್ಷ್ಮಣ್​​ ಸವದಿಗೆ ಕಾಂಗ್ರೆಸ್​ ಎಂಎಲ್​ಸಿ ಚನ್ನರಾಜ್ ಹಟ್ಟಿಹೊಳಿ ಸಾಥ್ ನೀಡಿದ್ದಾರೆ. ಹಟ್ಟಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಬುಕ್‌ ಆಗಿರುವ ವಿಶೇಷ ವಿಮಾನದಲ್ಲಿ ಸವದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದ್ದು, ರಮೇಶ್​ ಜಾರಕಿಹೊಳಿ‌ ವಿರುದ್ಧ ಡಿಕೆಶಿ ಹೊಸ ದಾಳ ಉರುಳಿಸಿದ್ದಾರೆ.

    ಇದನ್ನೂ ಓದಿ: ಲಂಕಾದಿಂದ ಚೀನಾಕ್ಕೆ 1 ಲಕ್ಷ ಮಂಗಗಳ ರಫ್ತು? ಸಾಲ ತೀರಿಸಲು ಹೊಸ ಮಾರ್ಗೋಪಾಯ ಕಂಡುಕೊಳ್ಳುತ್ತಿರುವ ದ್ವೀಪರಾಷ್ಟ್ರ

    Laxman Savadi

    ಅಥಣಿ ಕ್ಷೇತ್ರದಿಂದ ಸವದಿಗೆ ಟಿಕೆಟ್​ ನಿರಾಕರಿಸಿ, ರಮೇಶ್​ ಜಾರಕಿಹೊಳಿ ಆಪ್ತ ಮಹೇಶ್​ ಕುಮಟಹಳ್ಳಿಗೆ ನೀಡಲಾಗಿದೆ. ಇದು ಸವದಿ ಆಕ್ರೋಶಕ್ಕೆ ಕಾರಣವಾಗಿದ್ದು, ನೇರವಾಗಿಯೇ ಪಕ್ಷದ ವಿರುದ್ಧ ಸವದಿ ಆಕ್ರೋಶ ಹೊರಹಾಕಿದ್ದಾರೆ. ಇಂದು ತಮ್ಮ ಪರಿಷತ್​ ಸದಸ್ಯ ಸ್ಥಾನಕ್ಕೆ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್​)

    ವರುಣಾದಲ್ಲಿ‌ ಸೋಮಣ್ಣರಿಗೆ ನೂರೆಂಟು ಸವಾಲು! ಬಿ.ಎಸ್. ಯಡಿಯೂರಪ್ಪರ ಮೇಲೆ ಸದ್ಯದ ಕುತೂಹಲ

    ಬಿಜೆಪಿಗೆ ಮತ ಹಾಕದಂತೆ ಆಣೆ ಪ್ರಮಾಣ ಮಾಡಿಸಿದ ಸ್ವಾಮೀಜಿ ವಿರುದ್ಧ ದೂರು ದಾಖಲು!

    ಭಾರತ ವಿರೋಧಿ ಚಟುವಟಿಕೆ ವಿರುದ್ಧ ಕ್ರಮ: ರಿಷಿ ಸುನಕ್​ ಜತೆ ಪ್ರಧಾನಿ ಮೋದಿ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts