More

    ವರುಣಾದಲ್ಲಿ‌ ಸೋಮಣ್ಣರಿಗೆ ನೂರೆಂಟು ಸವಾಲು! ಬಿ.ಎಸ್. ಯಡಿಯೂರಪ್ಪರ ಮೇಲೆ ಸದ್ಯದ ಕುತೂಹಲ

    ಮೈಸೂರು: ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿರುವ ಸಚಿವ ವಿ. ಸೋಮಣ್ಣ ಇಂದಿನಿಂದ ಭರ್ಜರಿ ಪ್ರಚಾರಕ್ಕೆ ಧುಮಕಲಿದ್ದಾರೆ. ಈಗಾಗಲೇ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ವರುಣಾದಲ್ಲಿ ಸೋಮಣ್ಣರಿಗೆ ನೂರೆಂಟು ಸವಾಲುಗಳು ಎದುರಾಗಲಿವೆ. ಅದನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದೇ ಈಗಿರುವ ಕುತೂಹಲದ ಪ್ರಶ್ನೆಯಾಗಿದೆ.

    ಸ್ಥಳೀಯರ ಅಸಮಾಧಾನ
    ವರುಣಾದಲ್ಲಿ ವಿಜಯೇಂದ್ರ ಆಪ್ತರು ಸೋಮಣ್ಣ ಕೈ ಹಿಡಿಯುತ್ತಾರಾ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಏಕೆಂದರೆ, ಜಾತಿ ಲೆಕ್ಕಾಚಾರದ ಮೇಲೆ ವರುಣಾಕ್ಕೆ ಸೋಮಣ್ಣ ಎಂಟ್ರಿ‌ ಕೊಟ್ಟಿದ್ದಾರೆ. ಇದರಿಂದ ಸ್ಥಳೀಯ ಟಿಕೆಟ್​ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಸದ್ಯ ಸ್ಥಳೀಯ ಆಕಾಂಕ್ಷಿಗಳು ಸೋಮಣ್ಣರಿಗೆ ಹೇಗೆ ಸ್ಪಂಧಿಸುತ್ತಾರೆ ಎಂಬುದು ಕುತೂಹಲವಾಗಿದೆ.

    ಈಗಾಗಲೇ ಅಸಮಾಧಾನ ಶಮನ‌ಗೊಳಿಸಲು ವಿ. ಸೋಮಣ್ಣ ಮುಂದಾಗಿದ್ದಾರೆ. ಕ್ಷೇತ್ರಕ್ಕೆ ಹೊರಗಿನವರು ಎಂಬುದು ಸ್ಥಳಿಯವಾಗಿ ಚರ್ಚೆ ನಡೆಯುತ್ತಿದೆ. ಇದೆಲ್ಲವನ್ನು ಸೋಮಣ್ಣ ಹೇಗೆ ಸಂಭಾಳಿಸುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

    ಇದನ್ನೂ ಓದಿ: ಸೊಸೆಯ ಅಶ್ಲೀಲ ಚಾಟಿಂಗ್​: ಮಲಗಿದ್ದಲ್ಲೇ ಶವವಾದ ಅತ್ತೆ-ಮಾವನ ಸಾವಿನ ಹಿಂದಿನ ಭಯಾನಕತೆ ಬಯಲು

    ಅಹಿಂದ ಮತಗಳ ಮೇಲೆ ಕಣ್ಣು
    ಮತ್ತೊಂದೆಡೆ ಸಿದ್ದರಾಮಯ್ಯ ಅವರಿಗೆ ವರುಣಾ, ಅದೃಷ್ಟದ ಕ್ಷೇತ್ರ ಎನಿಸಿಕೊಂಡಿದೆ. ಏಕೆಂದರೆ, ಇದೇ ವರುಣಾದಿಂದ ಗೆದ್ದು ಸಿಎಂ ಆಗಿದ್ದರು. ಹೀಗಾಗಿ ಇದು ಕೊನೆಯ ಚುನಾವಣೆ ಎಂದು ಹೇಳಿರುವ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದಾರೆ. ಈ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲ್ಲೇಬೇಕೆಂಬ ಆಸೆ ಹೊಂದಿರುವ ಸಿದ್ದರಾಮಯ್ಯ ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

    ಪುತ್ರನ ಪ್ರಚಾರ
    ಈಗಾಗಲೇ ಸಿದ್ದರಾಮಯ್ಯ ಪರ ಯತೀಂದ್ರ ಸಿದ್ದರಾಮಯ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವತಃ ಸಿದ್ದು ಪುತ್ರನೆ ಅಪ್ಪನ ಪರ‌ ನಿಂತು ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ, ಸಿದ್ದರಾಮಯ್ಯರಿಗೆ ಸ್ಥಳೀಯರು ಎಂಬ ಬಲವೂ ಇದೆ. ಹೀಗಾಗಿ ಬಿ.ಎಸ್​. ಯಡಿಯೂರಪ್ಪ ಹಾಗೂ ಅವರ ಆಪ್ತರ ಮೇಲೆ ಸದ್ಯದ ಕುತೂಹಲ ನೆಟ್ಟಿದೆ. (ದಿಗ್ವಿಜಯ ನ್ಯೂಸ್​)

    ಬಿಜೆಪಿಗೆ ಮತ ಹಾಕದಂತೆ ಆಣೆ ಪ್ರಮಾಣ ಮಾಡಿಸಿದ ಸ್ವಾಮೀಜಿ ವಿರುದ್ಧ ದೂರು ದಾಖಲು!

    ಸೊಸೆಯ ಅಶ್ಲೀಲ ಚಾಟಿಂಗ್​: ಮಲಗಿದ್ದಲ್ಲೇ ಶವವಾದ ಅತ್ತೆ-ಮಾವನ ಸಾವಿನ ಹಿಂದಿನ ಭಯಾನಕತೆ ಬಯಲು

    ಭಾರತ ವಿರೋಧಿ ಚಟುವಟಿಕೆ ವಿರುದ್ಧ ಕ್ರಮ: ರಿಷಿ ಸುನಕ್​ ಜತೆ ಪ್ರಧಾನಿ ಮೋದಿ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts