More

    ನಿರ್ಭಯಾ ರೇಪಿಸ್ಟ್​ಗಳ ಪರ ಹೋರಾಡಿ ಸೋತಿದ್ದ ವಕೀಲರಿಂದಲೇ ಹಾಥರಸ್​ ಅತ್ಯಾಚಾರಿಗಳ ಪರ ವಕಾಲತ್ತು

    ನವದೆಹಲಿ: 2012ರ ನಿರ್ಭಯಾ ಕೇಸ್​ನ ಆರೋಪಿಗಳ ಪರ ವಾದಿಸಿ, ಸೋತಿದ್ದ ವಕೀಲ ಎ.ಪಿ.ಸಿಂಗ್​ ಇದೀಗ ಹತ್ರಾಸ್ ಗ್ಯಾಂಗ್​ ರೇಪ್​ ಆರೋಪಿಗಳ ಪರ ವಕಾಲತ್ತು ವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಕೊನೇ ಕ್ಷಣದವರೆಗೂ ಇನ್ನಿಲ್ಲದಂತೆ ಪ್ರಯತ್ನಿಸಿದ್ದ ಎ.ಪಿ.ಸಿಂಗ್​ ಕೊನೆಗೂ ಸೋತಿದ್ದರು. ಎಲ್ಲ ಆರೋಪಿಗಳನ್ನೂ ಗಲ್ಲಿಗೇರಿಸಲಾಗಿದೆ.
    ಇದೇ ವಕೀಲರನ್ನು ಹತ್ರಾಸ್ ಆರೋಪಿಗಳ ಪರ ಕಾನೂನು ಹೋರಾಟಕ್ಕೆ ಅಖಿಲ ಕ್ಷತ್ರಿಯ ಮಹಾಸಭಾ ನೇಮಕ ಮಾಡಿದೆ. ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ರಾಜಾ ಮನ್ವೇಂದ್ರ ಅವರು, ಆರೋಪಿಗಳ ಪರ ವಕಾಲತ್ತು ವಹಿಸಲು ಎ.ಪಿ.ಸಿಂಗ್​ ಅವರ ಬಳಿ ಕೇಳಿದ್ದಾರೆ. ಇದನ್ನೂ ಓದಿ: ಸುಶಾಂತ್​ ಸಾವು: ನಮಗೆ ಮೊದಲೇ ಸತ್ಯಾಂಶ ಗೊತ್ತಿತ್ತು ಎಂದ ಮುಂಬೈ ಪೊಲೀಸ್​

    ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎ.ಪಿ.ಸಿಂಗ್ ಅವರ ಶುಲ್ಕ ಪಾವತಿಸಲು ನಾವು ಸಾಕಷ್ಟು ಹಣವನ್ನೂ ಸಂಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ.

    ಹತ್ರಾಸ್ ಗ್ಯಾಂಗ್​ ರೇಪ್​ ನೆಪವನ್ನಾಗಿಟ್ಟುಕೊಂಡು ಎಸ್​ಸಿ ಎಸ್​ಟಿ ಸಮುದಾಯದ ಹೆಸರಲ್ಲಿ ಮೇಲ್ವರ್ಗದವರನ್ನು ಕೆಟ್ಟದಾಗಿ ದೂಷಿಸಲಾಗುತ್ತಿದೆ. ಇದು ರಜಪೂತ್​ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.

    ಹಾಥರಸ್​ ಗ್ಯಾಂಗ್ ರೇಪ್​ ವಿಷಯದಲ್ಲಿ ಕೋಮು ಗಲಭೆ ಸೃಷ್ಟಿಸಲು ನೋಡುತ್ತಿವೆ ಪ್ರತಿಪಕ್ಷಗಳು: ಸಿಎಂ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts